ಅಂಬರೀಷ್ ಇನ್ನಿಲ್ಲ: ಬದುಕಿಗೆ ಗುಡ್ ಬೈ ಹೇಳಿದ ‘ರೆಬಲ್ ಸ್ಟಾರ್’
UPDATE

ಅಂಬರೀಷ್ ಇನ್ನಿಲ್ಲ: ಬದುಕಿಗೆ ಗುಡ್ ಬೈ ಹೇಳಿದ ‘ರೆಬಲ್ ಸ್ಟಾರ್’

ಶನಿವಾರ ಸಂಜೆಯಷ್ಟೆ ಮಂಡ್ಯದ ಕೆಸಿ ನಾಲೆ ಅಪಘಾತದ ಕುರಿತು ಟಿವಿ 9 ಮಾಧ್ಯಮದ ಜತೆ ಮಾತನಾಡಿದ್ದ ತಮ್ಮ ಆರೋಗ್ಯ ಸರಿ ಇಲ್ಲದ ಕಾರಣ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು.

ನಟ, ರಾಜಕಾರಣಿ ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಇನ್ನಿಲ್ಲ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ ಮೇ 29, 1952ರಂದು ಹುಟ್ಟಿದ ಅವರು ದೊಡ್ಡರಸಿನಕೆರೆಯಲ್ಲಿ ಬೆಳೆದವರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ 1972ರಲ್ಲಿ ಕಾಲಿಟ್ಟರು. ನಂತರದ ದಿನಗಳಲ್ಲಿ ಅಂಬರೀಷ್ ಎಂದೇ ಚಿರಪರಿಚಿತರಾದರು.

ಶನಿವಾರ ಸಂಜೆ ಜೆಪಿ ನಗರದಲ್ಲಿ ನಿವಾಸದಲ್ಲಿ ಅವರು ಅನಾರೋಗ್ಯಕ್ಕೆ ಈಡಾದರು. ಅಲ್ಲಿಂದ ಅವರನ್ನು ವಿಕ್ರಂ ಆಸ್ಪತ್ರೆಗೆ ಸೇರಿಸಲಾಯಿತು. ರಾತ್ರಿ 11ರ ಸುಮಾರಿಗೆ ಅಂಬರೀಷ್ ಇನ್ನಿಲ್ಲ ಎಂಬ ಸುದ್ದಿ ಹೊರಬಿತ್ತು.

ಶನಿವಾರ ಸಂಜೆಯಷ್ಟೆ ಮಂಡ್ಯದ ಕೆಸಿ ನಾಲೆ ಅಪಘಾತದ ಕುರಿತು ಟಿವಿ 9 ಮಾಧ್ಯಮದ ಜತೆ ಮಾತನಾಡಿದ್ದ ಅವರು ತಮ್ಮ ಆರೋಗ್ಯ ಸರಿ ಇಲ್ಲದ ಕಾರಣ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು.

ಮಾಧ್ಯಮಗಳಲ್ಲಿ ಅಂಬರೀಷ್ ಇನ್ನಿಲ್ಲ ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆ ಆಸ್ಪತ್ರೆಗೆ ಸಿಎಂ ಕುಮಾರಸ್ವಾಮಿ ಸೇರಿದಂತೆ ರಾಜಕೀಯ ಮುಖಂಡರು ಹಾಗೂ ನಟ- ನಟಿಯರು ದೌಡಾಯಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕೂಡ ಆಸ್ಪತ್ರೆಯ ಸುತ್ತ ನೆರೆಯಲು ಆರಂಭಿಸಿದ್ದಾರೆ.

66 ವರ್ಷದ ಅಂಬರೀಷ್ ಪತ್ನಿ ಸುಮಲತಾ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.