samachara
www.samachara.com
ದೆಹಲಿಯಲ್ಲಿ ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ
UPDATE

ದೆಹಲಿಯಲ್ಲಿ ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ

‘ಯುನೈಟೆಡ್ ಅಗೆನೆಸ್ಟ್‌ ಹೇಟ್’ ಹೆಸರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉಮರ್ ಖಾಲಿದ್ ಕ್ಲಬ್‌ ಬಳಿ ಬಂದಾಗ ಘಟನೆ ನಡೆದಿದೆ.

ಜೆಎನ್‌ಯುನ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮೇಲೆ ದೇಶದ ರಾಜಧಾನಿ ದೆಹಲಿಯ ಕಾನ್ಸ್‌ಸ್ಟಿಟ್ಯೂಷನ್ ಕ್ಲಬ್‌ ಮುಂಭಾಗ ಸೋಮವಾರ ಗುಂಡಿನ ದಾಳಿ ನಡೆದಿದೆ. ದಾಳಿಯ ಮೇಲೆ ಯಾವುದೇ ಹಾನಿಗೊಳಗಾಗದೆ ಖಾಲಿದ್ ಬಚಾವಾಗಿದ್ದಾರೆ. ದಾಳಿಕೋರನ ಗುರುತುಗಳಿನ್ನೂ ಪತ್ತೆಯಾಗಿಲ್ಲ.

‘ಯುನೈಟೆಡ್ ಅಗೆನೆಸ್ಟ್‌ ಹೇಟ್’ ಹೆಸರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉಮರ್ ಖಾಲಿದ್ ಕ್ಲಬ್‌ ಬಳಿ ಬಂದಾಗ ಘಟನೆ ನಡೆದಿದೆ.

“ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದ್ದೆವು. ಸಮೀಪದ ಟೀ ಸ್ಟಾಲ್‌ ಮುಂದೆ ನಿಂತಿದ್ದಾಗ ಬಿಳಿ ಬಣ್ಣದ ಟಿ- ಶರ್ಟ್‌ ತೊಟ್ಟಿದ್ದ ಹತ್ತಿರ ಬಂದು ತಳ್ಳಿದ. ನಂತರ ಬಂದೂಕು ತೆಗೆದು ಗುಂಡು ಹಾರಿದ. ತಳ್ಳಿದ ರಭಸಕ್ಕೆ ಖಾಲಿದ್‌ ಕೆಳಗೆ ಬಿದ್ದರು. ಹೀಗಾಗಿ ಗುಂಡು ಗುರಿ ತಪ್ಪಿತು. ನಾವು ಗುಂಡು ಹಾರಿಸಿದ ವ್ಯಕ್ತಿಯನ್ನು ಹಿಡಿಯಲು ಪ್ರಯತ್ನ ಪಟ್ಟೆವಾದರೂ ಆತ ಪರಾರಿಯಾದ,’’ ಎಂಬ ಪ್ರತ್ಯಕ್ಷದರ್ಶಿ ಹೇಳಿಕೆಯನ್ನು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

“ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಯಾರು ಸರಕಾರದ ವಿರುದ್ಧ ಧ್ವನಿ ಎತ್ತುತ್ತಾರೋ ಅಂತವರಿಗೆ ಬೆದರಿಕೆ ಹಾಕಲಾಗುತ್ತಿದೆ,’’ ಎಂದು ಉಮರ್ ಖಾಲಿದ್ ದಾಳಿ ನಂತರ ಪ್ರತಿಕ್ರಿಯೆ ನೀಡಿದ್ದಾರೆ.

ಯಾರು ಉಮರ್ ಖಾಲಿದ್?:

ಉಮರ್ ಖಾಲಿದ್. 
ಉಮರ್ ಖಾಲಿದ್. 
/ಎಚ್‌ಟಿ. 

ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ 2016 ಫೆಬ್ರವರಿ 9ರಂದು ನಡೆದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪ ಹೊತ್ತ ವಿದ್ಯಾರ್ಥಿಗಳ ಪೈಕಿ ಉಮರ್ ಖಾಲಿದ್ ಕೂಡ ಒಬ್ಬರು.

ಇಲ್ಲಿನ ಇತಿಹಾಸ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿದ್ದ ಖಾಲಿದ್, ಜಾರ್ಖಂಡ್ ಆದಿವಾಸಿಗಳ ಸ್ಥಿತಿಗಳ ಕುರಿತು ಪಿಎಚ್‌ಡಿ ಮಾಡುತ್ತಿದ್ದರು. ದೇಶ ದ್ರೋಹದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿದ್ದರು. ಇದೇ ಕಾರಣ ಮುಂದಿಟ್ಟ ವಿಶ್ವವಿದ್ಯಾನಿಲಯ ಪಿಎಚ್‌ಡಿ ಪ್ರಬಂಧವನ್ನು ಸ್ವೀಕರಿಸಲು ನಿರಾಕರಿಸಿತ್ತು. ಅದು ನ್ಯಾಯಾಲಯದ ಮೆಟ್ಟಿಲೇರಿತ್ತು. ತನ್ನನ್ನು ನಾಸ್ತಿಕವಾದಿ ಹಾಗೂ ಎಡಪಂಥೀಯ ಎಂದು ಉಮರ್ ಖಾಲಿದ್ ಗುರುತಿಸಿಕೊಂಡಿದ್ದಾರೆ.