ಮೈಸೂರು ಜಿಲ್ಲಾಧಿಕಾರಿ ಕಚೇರಿ / ಸಾಂದರ್ಭಿಕ ಚಿತ್ರ
UPDATE

ವೀಳ್ಯೆದೆಲೆ ತೋಟಗಳ ಸಮಾಧಿ: ಭೂ ನ್ಯಾಯಮಂಡಳಿ ವಿರುದ್ಧ ಸಂತ್ರಸ್ಥರ ದೂರು; ಹೋರಾಟಕ್ಕೆ ಕರೆ

ಮೈಸೂರಿನ ಭೂ ಕಬಳಿಕೆ ಮತ್ತು ರಿಯಲ್‌ ಎಸ್ಟೇಲ್‌ ಮಾಫಿಯಾ ವಿರುದ್ಧ ‘ವೀಳ್ಯದೆಲೆ ರೈತರ ಭೂ ಹೋರಾಟ ಸಮಿತಿ’ ಹೋರಾಟಕ್ಕೆ ಮುಂದಾಗಿದೆ. ಬದುಕಿರುವವರನ್ನು ಆದೇಶದಲ್ಲಿ ಸಾಯಿಸಿದ್ದ ಭೂ ನ್ಯಾಯ ಮಂಡಳಿ ವಿರುದ್ಧ ಸಮಿತಿ ಸದಸ್ಯರು ದೂರು ನೀಡಿದ್ದಾರೆ.

ಮೈಸೂರಿನ ‘ವೀಳ್ಯೆದೆಲೆ ರೈತರ ಭೂ ಹೋರಾಟ ಸಮಿತಿ’ಯು ದಲಿತರ ಭೂಮಿಯ ಅಕ್ರಮ ಕಬಳಿಕೆ ಮತ್ತು ರಿಯಲ್ ಎಸ್ಟೇಟ್‌ ಮಾಫಿಯಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದೆ. ಭೂ ನ್ಯಾಯ ಮಂಡಳಿಯ ‘ತಪ್ಪು’ಗಳ ಬಗ್ಗೆ ದೂರು ನೀಡಿರುವ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿಗೆ ಮುಂದಾಗಿದ್ದಾರೆ.

ಮೈಸೂರಿನ ಅಶೋಕಪುರದ ಎಲೆತೋಟಗಳ ಜಾಗವನ್ನು ದಲಿತರಿಂದ ಬಲವಂತವಾಗಿ ಕಿತ್ತುಕೊಳ್ಳಲಾಗಿದೆ ಎಂಬ ಪ್ರಕರಣದಲ್ಲಿ ಮೈಸೂರಿನ ಭೂ ನ್ಯಾಯಮಂಡಳಿಯ ಅಧ್ಯಕ್ಷೆ ಕುಸುಮಾ ಕುಮಾರಿ ಮತ್ತು ಸದಸ್ಯರಾದ ಚಾಮುಂಡಯ್ಯ, ಸತೀಶ್‌ ಕುಮಾರ್‌, ರವಿ ಕುಮಾರ್‌ ಮತ್ತು ಚಿಕ್ಕಣ್ಣೇಗೌಡ ವಿರುದ್ಧ ಭೂ ಅಕ್ರಮದ ವಿರುದ್ಧ ಹೋರಾಟ ನಡೆಸುತ್ತಿರುವ ರಾಮರಾಜು, ವೆಂಕಟೇಶ್‌, ಜವರಯ್ಯ ಮತ್ತು ಜಯಶಂಕರ್‌ ದೂರು ದಾಖಲಿಸಿದ್ದಾರೆ.

ವೀಳ್ಯೆದೆಲೆ ತೋಟಗಳ ಸಮಾಧಿ: ಭೂ ನ್ಯಾಯಮಂಡಳಿ ವಿರುದ್ಧ ಸಂತ್ರಸ್ಥರ ದೂರು; ಹೋರಾಟಕ್ಕೆ ಕರೆ

ಅಧಿಕಾರಿಗಳು ಭೂ ವ್ಯಾಜ್ಯ ಪ್ರಕರಣದಲ್ಲ ಮಾನವ ಹಕ್ಕುಗಳ ಉಲ್ಲಂಘನೆ, ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ಕಾನೂನಿಗೆ ವಿರುದ್ಧವಾದ ಆದೇಶ ಮತ್ತು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಮೈಸೂರಿನ ನಜರಬಾದ್‌ ಠಾಣೆಗೆ ಜುಲೈ 2ರಂದು ದೂರು ನೀಡಲಾಗಿದೆ.

Also read: ಮೈಸೂರಿನ ‘ಎಲೆ ತೋಟ’ಗಳ ಸಮಾಧಿ ಮೇಲೆ ಎದ್ದು ನಿಂತ ಜೆಎಸ್ಎಸ್ ಹಾಸ್ಪಿಟಲ್

“ನಾವು ಭೂ ನ್ಯಾಯ ಮಂಡಳಿಯ ವಿಚಾರಣೆ, ಕಲಾಪಗಳಿಗೆ ಹಾಜರಾಗುತ್ತಿದ್ದರೂ ಅಧಿಕಾರಿಗಳು ನಾವು ನಿಷ್ಕ್ರಿಯರಾಗಿದ್ದೇವೆ ಎಂದು ನಮೂದು ಮಾಡಲಾಗಿದೆ. ಭೂ ನ್ಯಾಯ ಮಂಡಳಿಯ ಆದೇಶದಲ್ಲಿ ಬದುಕಿರುವ ವ್ಯಕ್ತಿಗಳನ್ನೇ ಮೃತಪಟ್ಟಿದ್ದಾರೆ ಎಂದು ನಮೂದಿಸಿ ನ್ಯಾಯಕ್ಕೆ ವಿರುದ್ಧವಾಗಿ ಆದೇಶ ನೀಡಿದ್ದಾರೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ ಮೈಸೂರಿನ ಭೂ ಅಕ್ರಮಗಳ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿರುವ ‘ವಿಳ್ಯದೆಲೆ ರೈತರ ಭೂ ಹೋರಾಟ ಸಮಿತಿ’ ಜುಲೈ 18ರಂದು ಮೈಸೂರಿನ ನ್ಯಾಯಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ನಡೆಸುವುದಾಗಿ ಹೇಳಿದೆ.

‘ವಿಳ್ಯೆದೆಲೆ ಬೆಳೆಯುತ್ತಿದ್ದ ದಲಿತ ಸಮುದಾಯದ ತೋಟಗಳ ಜಾಗವು ಅಕ್ರಮ ಭೂ ಕಬಳಿಕೆಗೆ ಒಳಗಾಗಿದೆ. ದಲಿತರ ಭೂಮಿಯಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ನಡೆಯುತ್ತಿದೆ’ ಎಂದು ಆರೋಪಿಸಿರುವ ವೀಳ್ಯೆದೆಲೆ ರೈತರ ಭೂ ಹೋರಾಟ ಸಮಿತಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಸಜ್ಜಾಗಿದೆ.