samachara
www.samachara.com
‘ಮೋದಿ ಶಸ್ತ್ರತ್ಯಾಗ’: ‘ಮೂರು ದಿನಗಳ ಸುಲ್ತಾನ್’ ಆದ ಯಡಿಯೂರಪ್ಪ; ಕೊನೆಗೂ ರಾಜೀನಾಮೆ
UPDATE

‘ಮೋದಿ ಶಸ್ತ್ರತ್ಯಾಗ’: ‘ಮೂರು ದಿನಗಳ ಸುಲ್ತಾನ್’ ಆದ ಯಡಿಯೂರಪ್ಪ; ಕೊನೆಗೂ ರಾಜೀನಾಮೆ

ಅಗತ್ಯವಿಲ್ಲದಿದ್ದರೂ 24ನೇ ಕರ್ನಾಟಕದ ಮುಖ್ಯಮಂತ್ರಿಯಾಗಿ 48 ಗಂಟೆಗಳ ಹಿಂದಷ್ಟೆ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿ ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ.

samachara

samachara

ಅಗತ್ಯವಿಲ್ಲದಿದ್ದರೂ 24ನೇ ಕರ್ನಾಟಕದ ಮುಖ್ಯಮಂತ್ರಿಯಾಗಿ 48 ಗಂಟೆಗಳ ಹಿಂದಷ್ಟೆ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿ ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ.

ಈ ಮೂಲಕ ದೇಶದ ಕುತೂಹಲದ ಕೇಂದ್ರವಾಗಿದ್ದ ಕರ್ನಾಟಕದ ವಿಧಾನಸಭೆಯ ವಿಶ್ವಾಸಮತ ಯಾಚನೆಗೆ ನಾಟಕೀಯ ತಿರುವುದು ಸಿಕ್ಕಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ ಮೈತ್ರಿಕೂಟಕ್ಕೆ ಸರಕಾರ ರಚಿಸುವ ಅವಕಾಶ ಅನಾಯಾಸವಾಗಿ ಒದಗಿ ಬಂದಿದೆ.

ರಾಜೀನಾಮೆಗೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಭಾಷಣದ ಹೈಲೆಟ್ಸ್ ಇಲ್ಲಿವೆ:

 • 2014ರ ಏಪ್ರಿಲ್ 14, ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನದಂದು ಮೋದಿ ಹಾಗೂ ಅಮಿತ್‌ ಶಾ ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿ ಸಿಎಂ ಎಂದು ಘೋಷಿಸಿದ್ದರು.
 • ಚುನಾವಣೆಯ ವೇಳೆಯಲ್ಲಿ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ನಿಮ್ಮಪ್ಪನಾಣೆ ನೀನು ಗೆಲ್ಲಲ್ಲ ಎಂದು ಕುಮಾರಸ್ವಾಮಿಗೆ ಹೇಳಲಾಗಿತ್ತು.
 • ನಿರಂತರ 1 ವರ್ಷದ ರಾಜ್ಯ ಪ್ರವಾಸದಿಂದ ಜನ ನಮ್ಮನ್ನು ಬೆಂಬಲಿಸಿದ್ದರು. ಅತ್ಯಂತ ಪ್ರೀತಿಯಿಂದ ನಮ್ಮನ್ನು ಹರಸಿದ್ದರು.
 • ರಾಜ್ಯದ್ಯಾಂತ ಪ್ರವಾಸ ಮಾಡಿ ಜನರ ಸಮಸ್ಯೆಯನ್ನು ಅರಿತಿದ್ದೇನೆ. ಜನ ನನ್ನ ಹೋರಾಟವನ್ನು ಮೆಚ್ಚಿದ್ದಾರೆ. ಕಳೆದ ಬಾರಿ ಕೇವಲ 4 ಶಾಸಕರಿದ್ದೆವು. ಈ ಬಾರಿ 104 ಜನರಿದ್ದೇವೆ.
 • ರಾಜ್ಯದಲ್ಲಿ ಕುಡಿಯಲು ನೀರಲ್ಲ. ಕೃಷಿಗೆ ನೀರಿಲ್ಲ. ಕೆರೆ ಕಾಲುವೆಗಳನ್ನು ಕಟ್ಟಿಸಿ ನೀರು ಒದಗಿಸಲು ನಮ್ಮಿಂದ ಆಗುತ್ತಿಲ್ಲ.
 • ಏಕಾಂಗಿಯಾಗಿ ನಿಂತು ರೈತರ ಪರ ಹೋರಾಡಿದ್ದೇನೆ. ಅದನ್ನೆಲ್ಲಾ ಮರೆಯಲು ಸಾಧ್ಯವಿಲ್ಲ. ನೊಂದು ಬೆಂದ ರಾಜ್ಯದ ರೈತರಿಗೆ ಸಮಾಧಾನ ನೀಡಬೇಕಿದೆ.
 • ಜನರ ಆಕ್ರೋಶ ಎಷ್ಟಿದೆ ಎನ್ನುವುದನ್ನು ಕಂಡಿದ್ದೇನೆ. ಅವರಿಗೆ ಸ್ಪಂದಿಸಿದ್ದೇನೆ. ಮುಂದೆಯೂ ಕೂಡ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ.
 • ನೀರಾವರಿಗೆ ಆದ್ಯತೆ ಕೊಡಬೇಕು. ಜಲಾಶಯದ ನೀರನ್ನು ಕೆರೆ ಕಟ್ಟೆಗಳಿಗೆ ಹರಿಸಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡಬೇಕು. ರೈತರ ಸಾಲ, ನೇಕಾರರ ಸಾಲ ಮನ್ನಾ ಮಾಡಬೇಕು ಎನ್ನುವುದು ನನ್ನ ಆಶಯ. ನನ್ನ ಸರಕಾರದ ಚಿಂತನೆಯೂ ಇದೇ ಆಗಿದೆ.
 • ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುತ್ತದೆ.
 • ಅಧಿಕಾರದಲ್ಲಿರಲಿ, ವಿರೋಧ ಪಕ್ಷದಲ್ಲಿರಲಿ, ಜೀವನ ಪರ್ಯಂತ ಹೋರಾಟ ನಡೆಸುತ್ತೇನೆ. ಜನರಿಗಾಗಿ ಪ್ರಾಣ ಕೊಡುತ್ತೇನೆ.
 • ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ. ಗೌರವಾನ್ವಿತ ಸಭಾಧ್ಯಕ್ಷರಿಗೆ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಮನವಿ ಮಾಡುತ್ತೇನೆ.