‘ಯಡ್ಡಿ ಸಿಎಂ ಖುರ್ಚಿ ಭವಿಷ್ಯ’: ಶನಿವಾರವೇ ವಿಶ್ವಾಸಮತ ಯಾಚನೆಗೆ ನ್ಯಾಯಾಲಯ ಸೂಚನೆ
UPDATE

‘ಯಡ್ಡಿ ಸಿಎಂ ಖುರ್ಚಿ ಭವಿಷ್ಯ’: ಶನಿವಾರವೇ ವಿಶ್ವಾಸಮತ ಯಾಚನೆಗೆ ನ್ಯಾಯಾಲಯ ಸೂಚನೆ

ಯಡಿಯೂರಪ್ಪ ರಾಜ್ಯಪಾಲ ವಾಜೂಬಾಯಿ ವಾಲಾಗೆ ಬರದ ಎರಡು ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಕಳೆದ 48 ಗಂಟೆಗಳಿಂದ ಬಹುವೀಕ್ಷಣೆಗೆ ಒಳಗಾಗಿರುವ ಕರ್ನಾಟಕ ರಾಜಕೀಯ ಬೆಳವಣಿಗೆಗಳಿಗೆ ಸುಪ್ರಿಂ ಕೋರ್ಟ್ ಕ್ಷಣಗಣನೆ ನಿಗದಿ ಮಾಡಿದೆ. ಶನಿವಾರ ಬಿ. ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಸೂಚಿಸಿದೆ.

ಫಲಿತಾಂಶ ಹೊರದ್ದ ಮಾರನೇ ದಿನ ರಾತ್ರಿ 9 ಗಂಟೆ ಸುಮಾರಿಗೆ ರಾಜ್ಯಪಾಲ ವಾಜೂಬಾಯಿ ವಾಲಾ ಬಿಜೆಪಿ ಶಾಸಕಾಂಗ ಪಕ್ಷ ನಾಯಕರಾಗಿ ಆಯ್ಕೆಯಾಗಿದ್ದ ಬಿ. ಎಸ್. ಯಡಿಯೂರಪ್ಪಗೆ ಸರಕಾರ ರಚಿಸಲು ಅಹ್ವಾನ ನೀಡಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್‌ ನಾಯಕ ಅಭಿಷೇಕ್ ಮನುಸಿಂಘ್ವಿ ಸುಪ್ರಿಂ ಕೋರ್ಟ್‌ನಲ್ಲಿ ದಾವೆ ಸಲ್ಲಿಸಿದ್ದರು.

ದೇಶದ ನ್ಯಾಯಾಂಗ ಇತಿಹಾಸದಲ್ಲಿ ಎರಡನೇ ಬಾರಿಗೆ ನಡುರಾತ್ರಿ ವಿಚಾರಣೆ ನಡೆಸಿದ್ದ ತ್ರಿ ಸದಸ್ಯ ಪೀಠ ಶುಕ್ರವಾರ ವಿಚಾರಣೆ ಆಂಭಿಸಿತು.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪರವಾಗಿ ಮಾಜಿ ಅಟಾರ್ನಿ ಜನರಲ್ ಮುಖುಲ್ ರೋಹ್ಟಗಿ ವಾದ ಮಂಡಿಸಿದರು. “ವಿಶ್ವಾಸಮತವನ್ನು ತೋರಿಸಬೇಕಿರುವುದು ವಿಧಾನಸಭೆಯಲ್ಲಿ ಮತ್ತು ಅದಕ್ಕೆ ಶಾಸಕರ ಅಗತ್ಯ ಇಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಬಿಜೆಪಿ ಸರಕಾರವನ್ನು ಬೆಂಬಲಿಸಲಿದ್ದಾರೆ ಎಂದು ರೋಹ್ಟಗಿ ನ್ಯಾಯಾಲಯಕ್ಕೆ ತಿಳಿಸಿದರು,’’ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ.

ಇದಕ್ಕೂ ಮೊದಲು ಯಡಿಯೂರಪ್ಪ ರಾಜ್ಯಪಾಲ ವಾಜೂಬಾಯಿ ವಾಲಾಗೆ ಬರದ ಎರಡು ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಸದ್ಯ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ‘ಸದ್ಯ ಎದುರಾಗಿರುವ ಬಿಕ್ಕಟ್ಟಿಗೆ ಸದನದ ಒಳಗೆ ವಿಶ್ವಾಸಮತ ಯಾಚನೆ ಮಾಡುವುದು ಸೂಕ್ತ. ಅದು ಯಾಕೆ ನಾಳೆಯೇ (ಶನಿವಾರ) ಆಗಬಾರದು,’’ ಎಂದು ನ್ಯಾಯಾಲಯ ಕೇಳಿದೆ.

ಸುಪ್ರಿಂಕೋರ್ಟ್‌ನ ಮಧ್ಯಂತರ ಆದೇಶದ ಪ್ರಕಾರ ಶನಿವಾರವೇ ಎಲ್ಲಾ ಶಾಸಕರು ಪ್ರಮಾಣ ವಚನ ಸ್ವೀಕರಿಸಿ, ಹಂಗಾಮಿ ಸ್ಪೀಕರ್‌ ಆಯ್ಕೆ ಮಾಡಬೇಕು. 24ರಿಂದ 26 ಗಂಟೆಯೊಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸಬೇಕು. ಆಂಗ್ಲೋ ಇಂಡಿಯನ್‌ ಸದಸ್ಯರನ್ನು ಸದ್ಯಕ್ಕೆ ನೇಮಿಸಬಾರದು. ಸಿಎಂ ಯಡಿಯೂರಪ್ಪ ಯಾವುದೇ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಬಾರದು.
- ಅಭಿಷೇಕ್‌ ಮನು ಸಿಂಘ್ವಿ, ಕಾಂಗ್ರೆಸ್‌ ಮುಖಂಡ ಹಾಗೂ ಕಾಂಗ್ರೆಸ್‌ ಪರ ವಾದ ಮಂಡಿಸಿದ ಹಿರಿಯ ವಕೀಲ

ಇದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್‌ ಸಮ್ಮಿತಿ ಸೂಚಿಸಿವೆ. ತಾವು ವಿಶ್ವಾಸಮತ ಯಾಚನೆಗೆ ತಯಾರಿದ್ದೇವೆ ಎಂದು ತಿಳಿಸಿದ್ದಾರೆ.

ನಾಳೆಯೇ ವಿಶ್ವಾಸಮತ ಯಾಚನೆಗೆ ಸಾಧ್ಯವಿಲ್ಲ ಎಂದು ಬಿಜೆಪಿ ಪರ ವಕೀಲರಿಂದ ವಾದ ಮಂಡನೆ. ಆದರೆ ಇದಕ್ಕೆ ನ್ಯಾಯಾಲಯ ಒಪ್ಪಿಗೆ ಸೂಚಿಸಲಿಲ್ಲ. ಏನೇ ಇದ್ದರು ನಾಳೆ ಸಂಜೆ ನಾಲ್ಕು ಒಳಗೆ ವಿಶ್ವಾಸಮತ ಯಾಚನೆ ನಡೆಸುವಂತೆ ಹೇಳಿದೆ.

ಈ ಕುರಿತು ಅಧಿಕೃತ ಆದೇಶ ಇನ್ನಷ್ಟೆ ಹೊರಬೀಳಬೇಕಿದೆ. ಹೊಸ ಬೆಳವಣಿಗೆಗಳ ಜತೆ ಈ ವರದಿಯನ್ನು ಅಪ್‌ಡೇಟ್ ಮಾಡಲಾಗುವುದು.