ವಿಧಾನ ಸೌಧ
UPDATE

ಶಕ್ತಿ ಸೌಧ ಬಿಟ್ಟು ಅಖಾಡಕ್ಕಿಳದ ಜನಪ್ರತಿನಿಧಿಗಳು: ವಿಧಾನಸೌಧ ಖಾಲಿ ಖಾಲಿ

ಸಾಮಾನ್ಯವಾಗಿ ಅವಹಾಲುಗಳನ್ನು ಹಿಡಿದುಕೊಂಡ ಜನರಿಂದ ತುಂಬಿ ತುಳುಕುತ್ತಿದ್ದ ರಾಜ್ಯದ ಶಕ್ತಿ ಸೌಧ ಶುಕ್ರವಾರ ಬಿಕೋ ಎನ್ನುತ್ತಿತ್ತು. ಚುನಾವಣಾ ಪ್ರಚಾರದ ಎಫೆಕ್ಟ್‌ ಹೇಗೆಲ್ಲಾ ಆಗುತ್ತದೆ ಎಂಬುದರ ಸಚಿತ್ರ ವರದಿ ಇಲ್ಲಿದೆ. 

ವಿಧಾನಸಭಾ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಶಾಸಕರು ಮತ್ತು ಸಚಿವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ವಿಧಾನಸೌಧದಲ್ಲಿ ಇರಬೇಕಾದ ಅಧಿಕಾರಿಗಳೂ ಚುನಾವಣಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಅಲ್ಲದೇ ನೀತಿ ಸಂಹಿತೆ ಜಾರಿ ಆಗಿರುವುದರಿಂದ ಮುಂದಿನ ಸರಕಾರಕ್ಕೆ ವಿಧಾನಸೌಧ ತಯಾರಾಗುತ್ತಿದೆ. ಅದಕ್ಕಾಗಿ ಅಲ್ಲಲ್ಲಿ ರಿಪೇರಿ ಕೆಲಸಗಳೂ ನಡೆಯುತ್ತಿವೆ. ಹೀಗಾಗಿ ಶುಕ್ರವಾರ ಮಧ್ಯಾಹ್ನ ವಿಧಾನಸೌಧದ ಖಾಲಿ ಖಾಲಿಯಾಗಿ ಕಂಡು ಬಂದಿದೆ. ವಿಧಾನಸೌಧದಲ್ಲಿ ಕಂಡು ಬಂದ ದೃಶ್ಯದ ಚಿತ್ರ ಗ್ಯಾಲರಿ ಇಲ್ಲಿದೆ ನೋಡಿ.

ವಿಧಾನ ಸೌಧದಲ್ಲಿ ಕೆಲವು ಕೊಠಡಿಗಳ ರಿಪೇರಿ ಕೆಲಸ ನಡೆಯುತ್ತಿರುವುದು

ವಿಧಾನ ಸೌಧದಲ್ಲಿ ಕೆಲವು ಕೊಠಡಿಗಳ ರಿಪೇರಿ ಕೆಲಸ ನಡೆಯುತ್ತಿರುವುದು