samachara
www.samachara.com
ಪ್ರತ್ಯೇಕ ಜಾರ್ಖಂಡ್ ರಾಜ್ಯಕ್ಕಾಗಿ ಹೋರಾಡಿದ ವಿದ್ಯಾರ್ಥಿ ನಾಯಕ ಈಗ ತರಕಾರಿ ವ್ಯಾಪಾರಿ
ಸಮಾಚಾರ

ಪ್ರತ್ಯೇಕ ಜಾರ್ಖಂಡ್ ರಾಜ್ಯಕ್ಕಾಗಿ ಹೋರಾಡಿದ ವಿದ್ಯಾರ್ಥಿ ನಾಯಕ ಈಗ ತರಕಾರಿ ವ್ಯಾಪಾರಿ

ಪ್ರತ್ಯೇಕ

ರಾಜ್ಯ ರಚನೆಯ ಹೋರಾಟ ಒಂದು ಸುದೀರ್ಘ ಪ್ರಕ್ರಿಯೆ. ಪ್ರಾದೇಶಿಕ ಅಭಿವೃದ್ಧಿ ಆಶಯಕ್ಕೆ ಕಟ್ಟುಬಿದ್ದು ಜನ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ಹಾಗೆ, ಪ್ರತ್ಯೇಕತೆಯ ಕೂಗನ್ನ ಮುನ್ನಡೆಸಿ ಹೊಸ ರಾಜ್ಯಗಳ ಉದಯಕ್ಕೆ ಕೊಡುಗೆ ನೀಡುವ ಚಳಿವಳಿಕಾರರು, ಕೊನೆಗೆ ಉನ್ನತ ಸ್ಥಾನಮಾನಗಳನ್ನ ಪಡೆದ ಉದಾಹರಣೆಗಳಿವೆ. ಆದರೆ, ಜಾರ್ಖಂಡ್ ರಾಜ್ಯದ ರಚನೆಗಾಗಿ ನಮ್ಮ ಜೀವನವನ್ನೇ ಮೀಸಲಿಟ್ಟು ಹೋರಾಡಿದ ನಾಯಕನೊಬ್ಬ ಇದೀಗ ಬೀದಿಬದಿಯ ತರಕಾರಿ ವ್ಯಾಪಾರಿ ಅಂದ್ರೆ, ನೀವು ನಂಬಬೇಕು.

ಬಿಹಾರದ ರಾಜ್ಯದಿಂದ ಪ್ರತ್ಯೇಕವಾಗಿ ಜಾರ್ಖಂಡ್ ರಾಜ್ಯ ಉದಯಿಸಿ 17 ವಸಂತಗಳೇ ಕಳೆದಿವೆ. ವಿಚಿತ್ರ ಅಂದ್ರೆ, ಪ್ರತ್ಯೇಕ ಜಾರ್ಖಂಡ್ ರಾಜ್ಯ ರಚನೆಯ ಹೋರಾಟದ ಪ್ರಮುಖ ನಾಯಕನೊಬ್ಬ ಇದೀಗ ಬೀದಿಯಲ್ಲಿ ತರಕಾರಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಾರ್ಖಂಡ್ ರಾಜ್ಯದ ರಚನೆಗೆ ಆಗ್ರಹಿಸಿ ಹೋರಾಟಗಳನ್ನ ಸಂಘಟಿಸಿ, ಮುಂದಿನ ಸಾಲಿನಲ್ಲಿ ನಿಂತು ಚಳವಳಿಯನ್ನ ಮುನ್ನಡಿಸಿ ಹಲವು ಬಾರಿ ಜೈಲು ಸೇರಿದ್ದ ನಾಯಕ ಬಿನೋದ್ ಭಗತ್ ಇದೀಗ ಯಾರಿಗೂ ಬೇಡವಾದ ವ್ಯಕ್ತಿ. ಜಾರ್ಖಂಡ್ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ 'ಆಲ್ ಜಾರ್ಖಂಡ್ ಸ್ಟುಡೆಂಟ್ ಯೂನಿಯನ್' ಸಂಘಟನೆಯ ಸಂಸ್ಥಾಪಕ ಕೂಡ.

ರಾಂಚಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಹಾಗೂ ಪ್ರತಿಕ್ಯೋದ್ಯಮಗಳಲ್ಲಿ ಮಾಸ್ಟರ್ ಡಿಗ್ರಿ ಸಂಪಾದಿಸಿದ್ದ ಬಿನೋದ್ ಭಗತ್, ಸೌತ್ ಈಸ್ಟರ್ನ್ ರೈಲ್ವೆಯಲ್ಲಿ ಅಸಿಸ್ಟಂಟ್ ಸ್ಟೇಷನ್ ಮ್ಯಾನೇಜರ್ ಹುದ್ದೆಯನ್ನ ಪಡೆದುಕೊಂಡಿದ್ದರು. ಸರ್ಕಾರಿ ಸೇವೆಯಲ್ಲಿದ್ದರೂ ಬಿನೋದ್ ಭಗತ್ ಅವರ ಮನಸ್ಸು ಮಾತ್ರ ಸಾಮಾಜಿಕ ಚಳಿವಳಿಗಳಿಗೆ ಸದಾ ತುಡಿಯುತ್ತಿತ್ತು. ಪ್ರತ್ಯೇಕ ರಾಜ್ಯ ರಚನೆ, ಭ್ರಷ್ಚರ ಪಾಲಿನ ಸ್ವರ್ಗವಾಗುತ್ತೆ ಅನ್ನೋದನ್ನ ಮನಗಾಣದ ಬಿನೋದ್ 1986ರಲ್ಲಿ ಕರ್ತವ್ಯಕ್ಕೆ ರಾಜೀನಾಮೆ ನೀಡಿ ರಾಜ್ಯ ರಚನೆಯ ಚಳವಳಿಗೆ ದುಮುಕಿದ್ರು. ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ನ ಸಂಸ್ಥಾಪಕ ಸದಸ್ಯರಾಗಿ ಬಿನೋದ್ ಭಗತ್, ಸಾವಿರಾರು ಯುವಕರನ್ನ ಹುರಿದುಂಬಿಸಿ ಹೋರಾಟವನ್ನ ಯಶಸ್ವಿಗೊಳಿಸಿದ್ರು. ಅಲ್ದೆ, ಜಾರ್ಖಂಡ್ ಏರಿಯಾ ಅಟೋನೋಮಸ್ ಕೌನ್ಸಿಲ್ನ ಕೌನ್ಸಲರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ವಿಪರ್ಯಾಸ ಅಂದ್ರೆ, ಕೆಲವೇ ವರ್ಷಗಳ ಹಿಂದೆ ರಾಜ್ಯದ ಪ್ರಭಾವಿ ನಾಯಕರಾಗಿದ್ದ ಭಗತ್ ಸದ್ಯ ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುತ್ತಾ ಹೊಟ್ಟೆಹೊರೆಯುತ್ತಿದ್ದಾರೆ.

ರಾಜಿ ಮಾಡಿಕೊಳ್ಳದ ಬದುಕು:

ಬಿನೋದ್ ಭಗತ್ ತಮ್ಮ ಖಾಸಗಿ ಬದುಕಿನ ಅನುಕೂಲತೆಗಾಗಿ ಎಂದಿಗೂ ಭ್ರಷ್ಟರೊಂದಿಗೆ ರಾಜಿ ಮಾಡಿಕೊಂಡವರಲ್ಲ .ಆದ್ರೆ, ಅದೇ ಅವರ ಬದುಕಿಗೆ ಮುಳ್ಳಾಗಿದೆ. ಬಿನೋದ್ ಭಗತ್ ಅವರು ಕೈಯಲ್ಲಿ ಬೆಳೆದ ನಾಯಕರು ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದಿ ವಿವಿಧ ಸರ್ಕಾರಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಆದ್ರೆ, ಅವರನ್ನ ಬೆಳೆಸಿದ ಭಗತ್ ಮಾತ್ರ 100 ರೂಪಾಯಿ ಸಂಪಾದನೆಗಾಗಿ ಕೈಯಲ್ಲಿ ತಕ್ಕಡಿ ಹಿಡಿದು ತರಕಾರಿ ತೂಗುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಈ ಬಗ್ಗೆ ಹುಟ್ಟುಹೋರಾಟಗಾರ ಬಿನೋದ್ ಅವರಲ್ಲಿ ಕೊಂಚವೂ ಬೇಸರವಿಲ್ಲ. "ಸದ್ಯ ನನ್ನ ಸಮಯ ಸರಿಯಿಲ್ಲ. ಅದಕ್ಕೆ ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದೇನೆ. ಭ್ರಷ್ಟರೊಂದಿಗೆ ಸಹಕರಿಸಿ ಹಣ ಸಂಪಾದನೆ ಮಾಡುವುದಕ್ಕಿಂತ ಹೀಗೆ ಬೆವರು ಹರಿಸಿ ದುಡಿಯುವುದೇ ಶ್ರೇಷ್ಠ ಅಂತಾರೆ ಬಿನೋದ್,". ಅಲ್ಲದೆ, ಬದುಕಿನ ಬಗ್ಗೆ ತೀವ್ರ ಆಶಾಭಾವನೆ ಹೊಂದಿರೋ 55 ವರ್ಷ ವಯಸ್ಸಿನ ಭಗತ್ ಅವರಿಗೆ ಈ ಕಷ್ಟದ ದಿನಗಳು ಆದಷ್ಟೂ ಬೇಗನೇ ದೂರವಾಗಿ ಒಳ್ಳೆಯ ದಿನಗಳ ಬರಲಿವೆ ಎಂಬ ಆತ್ಮವಿಶ್ವಾಸವಿದೆ.