ತಂದೆಯ ಹುಟ್ಟು ಕುರುಡಿಗೆ ಮಗಳ ಮುಗ್ಧತೆಯೇ ಆಸರೆ: ಜಗತ್ತಿನ ಗಮನ ಸೆಳೆಯುತ್ತಿರುವ ಪುಟ್ಟ ಪೋರಿ ಜನ್ನಿ!
ಸಮಾಚಾರ

ತಂದೆಯ ಹುಟ್ಟು ಕುರುಡಿಗೆ ಮಗಳ ಮುಗ್ಧತೆಯೇ ಆಸರೆ: ಜಗತ್ತಿನ ಗಮನ ಸೆಳೆಯುತ್ತಿರುವ ಪುಟ್ಟ ಪೋರಿ ಜನ್ನಿ!

ಆಕೆಗಿನ್ನೂ

ಐದರ ಹರೆಯ. ಒಂದರೆ ಕ್ಷಣವೂ ಕೂತಲ್ಲಿ ಕೂರದೆ ನಿಂತಲ್ಲಿ ನಿಲ್ಲದ ಸದಾ ಕೀಟಲೆ ಮಾಡುತ್ತಾ ಎಲ್ಲಾ ಪುಟಾಣಿಗಳಂತೇ ಇರುತ್ತಾಳೆ. ಆದರೆ, ಆಕೆ ಎಲ್ಲಾ ಮಕ್ಕಳಂತಲ್ಲ. ತನಗೇ ಅರಿವಿಲ್ಲದೆ ಆಕೆ ಮಾಡುತ್ತಿರುವ ಕಾರ್ಯ ಈಗ ಜಗತ್ತನ್ನೇ ಆಕೆಯತ್ತ ತಿರುಗಿ ನೋಡುವಂತೆ ಮಾಡಿದೆ.

ಫಿಲಿಫೈನ್ಸ್ ನ ಈ ಪುಟಾಣಿಯ ಹೆಸರು ಜೆನ್ನಿ, ಇವಳ ತಂದೆ ನೆಲ್ಸನ್ ಪೇಪೆ. ಜಗತ್ತಿನ ಅರಿವಿಲ್ಲದ ಮುದ್ದು ಮಗಳು ಮತ್ತು ಜಗತ್ತನ್ನು ಕಾಣದ ಹುಟ್ಟು ಕುರುಡ ತಂದೆ. ಹಾಗಿದ್ರೂ ಈ ತಂದೆ ಮಗಳ ಜೋಡಿಯ ಕಾಯಕವನ್ನು ನೋಡಿದರೆ ನೀವೂ ಒಂದು ಕ್ಷಣ ನಿಬ್ಬೆರಗುವುದರಲ್ಲಿ ಅನುಮಾನವಿಲ್ಲ.

ಕಣ್ಣು ಕಾಣದಿದ್ದರೂ ನೆಲ್ಸನ್ ಪೇಪೆ ಜೀವನ ಸಾಗಿಸಲು ದುಡಿಯುವುದು ಅನಿವಾರ್ಯವಾಗಿತ್ತು. ಹೀಗಾಗಿ ತೆಂಗಿನ ತೋಟದಲ್ಲಿ ಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಪೇಪೆ. ಆದರೆ ಕಠಿಣವಾದ ತೋಟದ ಹಾದಿಯಲ್ಲಿ ಕಣ್ಣೇ ಕಾಣದ ಪೇಪೆ ಗೆ ಅಸಾಧ್ಯವಾಗಿತ್ತು. ಆದರೆ ಇಂತಾ ಸಂದರ್ಭದಲ್ಲಿ ನಿಜಕ್ಕೂ ಪೇಪೆಗೆ ಆಸರೆಯಾಗಿದ್ದು ತನ್ನ ಪುಟಾಣಿ ಮಗಳು.

ಪುಟಾಣಿ ಜೆನ್ನಿ ತನ್ನ ತಂದೆ ನೆಲ್ಸನ್ ಪೇಪೆಯನ್ನು ಪ್ರತಿ ದಿನ ತೆಂಗಿನ ಮರಗಳ ಬುಡಕ್ಕೆ ಕರೆದುಕೊಂಡು ಹೋಗುತ್ತಾಳೆ. ಒಂದು ಕೋಲಿನ ಸಹಾಯದಿಂದ ಪೇಪೆ ತನ್ನ ಮಗಳನ್ನು ಹಿಂಬಾಲಿಸುತ್ತಾ ಸಾಗುತ್ತಾನೆ. ಹೀಗೆ ನಿತ್ಯ 60 ಮರಗಳ ಬುಡಕ್ಕೆ ಹೋಗಿ ಅಲ್ಲಿ ತನ್ನ ಮರಗಳಿಂದ ಬಿದ್ದ ತೆಂಗಿನ ಕಾಯಿಗಳನ್ನು ಹೆಕ್ಕುತ್ತಿದ್ದ. ಮತ್ತು ಇದ್ರಿಂದ ಆತ ದಿನಕ್ಕೆ ಕೇವಲ 9 ಡಾಲರ್ ಗಳಿಸ್ತಾ ಇದ್ದ ಪೇಪೆ.

ಜೆನ್ನಿ ತನ್ನ ತಂದೆ ಪೇಪೆಗೆ ಸಹಾಯ ಮಾಡುತ್ತಿರುವ ವೀಡಿಯೋವನ್ನು ರೂಬಿ ಕ್ಯಾಪುನೆಸ್ ಎಂಬ ವ್ಯಕ್ತಿ ಸೆರೆ ಹಿಡಿದಿದ್ದ. ಬಳಿಕ ಈ ದೃಶ್ಯವನ್ನು ತನ್ನ ಫೇಸ್ಬುಕ್ ನಲ್ಲಿ

. ಅದೀಗ ವೈರಲ್ ಆಗಿಬಿಟ್ಟಿತ್ತು.

ದಿನಕ್ಕೆ 9 ಡಾಲರ್ ಗಳಿಸಲು ತಂದೆ ಮತ್ತು ಮಗಳು ಕಷ್ಟ ಪಡುತ್ತಿದ್ದ ರೀತಿಗೆ ವಿಶ್ವವೇ ಮರುಕ ಪಟ್ಟಿತ್ತು. ತಂದೆ ನೆಲ್ಸನ್ ಪೇಪೆಯ ಚಿಕಿತ್ಸೆಗೆ ಕೂಡ ಹಲವರು ನೆರವಾದರು. ಅವರ ಸಹಾಯಕ್ಕಾಗಿ ನಾನಾ ಭಾಗಗಳಿಂದ ಸಹಾಯ ಹಸ್ತಗಳು ಚಾಚಿದ್ದವು.