samachara
www.samachara.com
ಇವು ನಮ್ಮ ದೇಶದ ಗಣ್ಯ ವ್ಯಕ್ತಿಗಳು ನಿತ್ಯ ಬಳಸುವ ಕಾರುಗಳು!
ಸಮಾಚಾರ

ಇವು ನಮ್ಮ ದೇಶದ ಗಣ್ಯ ವ್ಯಕ್ತಿಗಳು ನಿತ್ಯ ಬಳಸುವ ಕಾರುಗಳು!

ಜೀವನದಲ್ಲಿ ಒಮ್ಮೆಯಾದರು ದುಬಾರಿ ಕಾರನ್ನು ಕೊಂಡುಕೊಳ್ಳಬೇಕು ಅನ್ನೋ ಮಹದಾಸೆ ಹುಟ್ಟಿಸಿದ ಆರ್ಥಿಕ ನೀತಿಗಳು ಜಾರಿಯಾಗಿ 25 ವರ್ಷಗಳು ಕಳೆದಿವೆ. ನಮ್ಮ  ರಾಜಕಾರಣಿಗಳಿಂದ ಹಿಡಿದು ಉದ್ಯಮಿಗಳವರೆಗೆ, ಕ್ರೀಡಾಪಟುಗಳಿಂದ ಹಿಡಿದು ಬಾಲಿವುಡ್ ಸ್ಟಾರ್ ಗಳೆಲ್ಲಾ ಐಷಾರಾಮಿ ಕಾರಿನ ಒಡೆಯರು. ಇವರಿಗೆ ತಮ್ಮ ಪ್ರಯಾಣ ಸುಖಕರವಾಗಿರುವುದರ ಜೊತೆಗೆ ತಮ್ಮ ರಕ್ಷಣೆಯೂ ಮುಖ್ಯವಾಗಿರುತ್ತದೆ. ಹಾಗಾಗಿ ತಮ್ಮಹೈ ಎಂಡ್ ಕಾರುಗಳಲ್ಲಿ ಅವರ ನಿತ್ಯ ತೇರು ಸಾಗುತ್ತಿರುತ್ತದೆ. ಭಾರತದಲ್ಲಿರುವ ಕೆಲವು ಗಣ್ಯ ವ್ಯಕ್ತಿಗಳು ತಮ್ಮ ದಿನ ನಿತ್ಯದ ರೈಡ್ ಗೆ ಬಳಸೋ ಕಾರುಗಳು ಕಾರುಗಳ ಯಾವವು ಎಂಬ ವಿವರ ಇಲ್ಲಿದೆ ನೋಡಿ...

  • ಮುಖೇಶ್ ಅಂಬಾನಿ- (ಮೆಬ್ಯಾಚ್ 62)

ರಿಲಾಯನ್ಸ್ ಇಂಡಸ್ಟ್ರಿಯ ಮಾಲೀಕ ಮುಖೇಶ್ ಅಂಬಾನಿ ಸುಮಾರು 100 ದುಬಾರಿ ಕಾರಗಳ ಒಡೆಯಾಗಿದ್ದಾರೆ. ಮೆರ್ಸಿಡಿಸ್ ಬೆನ್ಸ್ ಕಾರಿನ ಬಗ್ಗೆ ಇವರಿಗೆ ಕ್ರೇಜ್ ಸ್ವಲ್ಪ ಜಾಸ್ತಿ ಅನ್ನೋದು ಅವರ ಕಾರ್ ಕಲೆಕ್ಷನ್ ನೋಡಿದ್ರೆ ಅರ್ಥವಾಗುವಂತದ್ದು. ಅಂಬಾನಿ ತಮ್ಮ ದಿನ ನಿತ್ಯದ ಸವಾರಿಗೆ ಮೆಬ್ಯಾಚ್ ಕಾರನ್ನೇ ಬಳಸುತ್ತಾರೆ.

  • ನರೇಂದ್ರ ಮೋದಿ- (ಬಿಎಂಡ್ಯೂ 760)

ದೇಶದ ಪ್ರಧಾನಿ ನರೇಂದ್ರ ಮೋದಿಯ ಕಾರಿನ ಜರ್ನಿ ಆರಂಭವಾಗಿದ್ದು  ಮಹೀಂದ್ರ ಸ್ಕೋರ್ಪಿಯೋದಿಂದ. ಅದು ಅವರು ಗುಜರಾತ್ ಮುಖ್ಯಮಂತ್ರಿಯಾದ್ದಾಗ. ದೇಶದ ಪ್ರಧಾನಿಯಾದ ನಂತ್ರ ಅತ್ಯಂತ ದುಬಾರಿ ಮತ್ತು ಸೇಫ್ ಕಾರಾದ ಬಿಎಂಡಬ್ಯೂ 760 ಕಾರನ್ನೂ ತಮ್ಮ ದಿನ ನಿತ್ಯದ ಓಡಾಡಕ್ಕೆ ಬಳಸುತ್ತಿದ್ದಾರೆ.

  • ಅನಿಲ್ ಅಂಬಾನಿ- (ರೇಂಜ್ ರೋವರ್ ವೋಗ್ಯೂ)

ಅಂಬಾನಿಯ ಸಹೋದರ ಅನಿಲ್ ಅಂಬಾನಿ  ದೊಡ್ಡ ಕಾರು ಪ್ರೇಮಿ. ತಮ್ಮ ದೈನಂದಿನ  ಚಾಲನೆಗೆ ಅಲ್ಟ್ರಾ ಐಷಾರಾಮಿ ಸೆಡಾನ್ ಮತ್ತು ಫಾರ್ಚ್ಯುನರ್ ಕಾರನ್ನೇ ಬಳಸುತ್ತಾರೆ. ಆದರೆ ಅವರ ಇಷ್ಟದ ಕಾರು ರೇಂಜ್ ರೋವರ್ ಅಂತೆ.

  • ಆದಿ ಗೋದ್ರೇಜ್- (ಆಡಿ ಎ8ಎಲ್)

ಗೋದ್ರೇಜ್ ಸಂಸ್ಥೆಯ ಮುಖ್ಯಸ್ಥ ಮತ್ತು ಗೋದ್ರೇಜ್ ಸಮೂಹದ ಅಧ್ಯಕ್ಷ ಆದಿ ಗೋದ್ರೇಜ್ ಅವರು ಹೊಂದಿರೋ ಒಟ್ಟು ಆಸ್ತಿ ಸುಮಾರು 4 ಬಿಲಿಯನ್. ಹಾಗಾಗಿ ಇವರು ಐಷಾರಾಮಿ ಕಾರು ಹೊಂದಿದ್ದಾರೆ ಎಂದ್ರೆ ಅಚ್ಚರಿ ಪಡುವುದೇನಿಲ್ಲ. ಇವರು ತಮ್ಮ ದೈನದಿಂನ ಸವಾರಿಗೆ ಬಳಸೋ ಕಾರು ಆಡಿ ಎ8ಎಲ್.

  • ಗೌತಮ್ ಸಿಂಗ್ಹಾನಿಯಾ- (ನಿಸಾನ್ ಜಿಟೆ-ಆರ್)

ಸೂಪರ್ ಕಾರ್ ಕ್ಲಬ್ ನ ಸಂಸ್ಥಾಪಕ ಗೌತಮ್ ಸಿಂಗ್ಹಾನಿಯಾ ಅವರಿಗೆ ಕಾರು ಮೇಲೆ ಎಲ್ಲಿದ್ದ ಪ್ರೀತಿ. ತಮ್ಮ ಕಂಪೆನಿಯಾ ಆಡಿ ಬರಹ 'ಗೋಸ್ ಕಂಪ್ಲೀಟ್' ಅನ್ನುವಂತೆ ಐಷಾರಾಮಿ ಕಾರನ್ನು ಹೊಂದಿರೋ ಕಂಪ್ಲೀಟ್ ಮ್ಯಾನ್ ಅವರು. ಇವರು ತಮ್ಮ ದೈನಂದಿನ ಓಡಾಟಕ್ಕೆ ಬಳಸೋದು ರೇಸ್ ಕಾರ್ ಆವೃತ್ತಿಯ ಫೆರಾರಿಯನ್ನು. ಇನ್ನು ಹೆಚ್ಚಿನ ಆದ್ಯತೆ ನೀಡೋದು ನಿಸಾನ್ ಜಿಟೆ-ಆರ್ ಕಾರಿಗೆ.

  • ರತನ್ ಟಾಟಾ- (ಫೆರಾರಿ  ಕ್ಯಾಲಿಪೋರ್ನಿಯ)

ಭಾರತದ ಯಶಸ್ವಿ ಉದ್ಯಮಿ ಮತ್ತು ಟಾಟಾ ಗ್ರೂಪ್ ನ  ಮಾಜಿ ಅದ್ಯಕ್ಷ ರತನ್ ಟಾಟಾ ಕೂಡಾ ಒಬ್ಬ ಕಾರು ಪ್ರೇಮಿ. ಇನ್ನು ಇವರು ಕನಿಷ್ಠ ಷೇರನ್ನು ತಮ್ಮಲ್ಲಿರುವ ಲ್ಯಾಂಡ್ ರೋವರ್, ಜಗ್ವಾರ್ ಕಾರಿನ ಮೇಲೆ ಹೂಡಿಕೆ ಮಾಡಿದ್ದಾರೆ. ಇವರ ಫೇವರೆಟ್ ಕಾರೆಂದ್ರೆ ಫೆರಾರಿ ಕ್ಯಾಲಿಫೋರ್ನಿಯಾ. ಇದರಲ್ಲೇ ಹೆಚ್ಚು ಸವಾರಿ ಮಾಡಲು ಇಷ್ಟ ಪಡುತ್ತಾರೆ.

  • ಸಚ್ಚಿನ್ ತೆಂಡೂಲ್ಕರ್- (ಬಿಎಂಡಬ್ಲ್ಯು)

ಕ್ರಿಕೆಟ್ ನ ದೇವರು ಸಚಿನ್ ತೆಂಡೂಲ್ಕರ್ ತಾನು ಹೊಂದಿರುವ ಐಷಾರಾಮಿ ಕಾರುಗಳಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಹೆಚ್ಚು ಇಷ್ಟ ಪಡುವುದು  ನಿಸ್ಸಾನ್ ಜಿಟಿ-ಆರ್ ಕಾರನ್ನು. ಜೊತೆಗೆ 430 ಎಫ್ ಫೆರಾರಿ ಕಾರಿನ ಒಡೆಯನೂ ಹೌದು. ಇನ್ನು ಐಷಾರಾಮಿ ಬಿಎಂಡಬ್ಯೂ ಕಾರಿನ ಭಾತರದ ಬ್ರಾಡ್ ಅಂಬಾಡಿಸರ್ ಸಚ್ಚಿನ್ ತೆಂಡೂಲ್ಕರ್.

  • ವಿರಾಟ್ ಕೊಹ್ಲಿ- (ಆಡಿ ಆರ್-8)

ಇನ್ನು ಟೀಂ ಇಂಡಿಯಾದ ಯಂಗ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಇತ್ತೀಚೆಗೆ ಹೊಸ ಐಷಾರಾಮಿ ಆಡಿ ಆರ್8 ಕಾರನ್ನು ಖರೀದಿ ಮಾಡಿದ್ದಾರೆ.  ಕೆಂಪು ಬಣ್ಣದ ದುಬಾರಿ ಆಡಿ ಮೇಲೆ ವಿರಾಟ್ಗೆ ಎಲ್ಲಿಲ್ಲದ ಮೋಹ ಅಂತೆ.

ಕಾರುಗಳು ಪ್ರತಿಷ್ಠೆತೆಯ ಸಂಕೇತವಾಗಿರುವ ದಿನಗಳಲ್ಲಿ ಸಿರಿವಂತರು ಹೊಂದಿರುವ ಕಾರುಗಳ ಯಾವವು ಎಂಬುದುನ್ನು ಇಲ್ಲಿ ನೀಡಿದ್ದೀವಿ. ಇವುಗಳ ಬೆಲೆ ಎಷ್ಟು ಎಂಬುದನ್ನು ಒಮ್ಮೆ ಗೂಗಲ್ ಮಾಡಿ ನೋಡಿ...