samachara
www.samachara.com
ಸಾಂದರ್ಭಿಕ ಚಿತ್ರ
ಸಮಾಚಾರ

ಪುಸ್ತಕ, ಓದು ಮತ್ತು ನಿದ್ದೆ: ಭಿನ್ನ ಆಲೋಚನೆಗಳಿಗೆ ಹೀಗೆಲ್ಲಾ ಹುಟ್ಟಿಕೊಳ್ಳುತ್ತವೆ!  

ಓದುವ ಹವ್ಯಾಸಕ್ಕೂ, ನಿದ್ದೆಗೂ ಅದೆಲ್ಲಿಂದ ಸಂಬಂಧವೊಂದು ಬೆಳೆದು ಬಂತೋ ಗೊತ್ತಿಲ್ಲ. ರಾತ್ರಿ ಮಲಗಿ ತಕ್ಷಣ ನಿದ್ದೆ ಬರುತ್ತಿಲ್ಲ ಎಂದರೆ, ಕೈಲೊಂದು ಪುಸ್ತಕ ಹಿಡಿದುಕೊಂಡು ಕೆಲ ಕಾಲ ಕಣ್ಣಾಡಿಸಿ. ತೂಕಡಿಕೆ ಬರುತ್ತೆ ಅನ್ನೋದನ್ನು ಮನಶಾಸ್ತ್ರಜ್ಞರೂ ಹೇಳುತ್ತಾರೆ.
ಪುಸ್ತಕ, ಓದು ಮತ್ತು ನಿದ್ದೆ: ಭಿನ್ನ ಆಲೋಚನೆಗಳಿಗೆ ಹೀಗೆಲ್ಲಾ ಹುಟ್ಟಿಕೊಳ್ಳುತ್ತವೆ!  

ಇದನ್ನು ಆಧಾರವಾಗಿಟ್ಟುಕೊಂಡೇ, ಜಪಾನ್ ದೇಶದ ಟೋಕಿಯೋದಲ್ಲಿ ಹೋಟೆಲ್ ಒಂದನ್ನು ವಿನ್ಯಾಸಗೊಳಿಸಲಾಗಿದೆ. ಇದು ಹೋಟೆಲ್ ಅನ್ನೋದಕ್ಕಿಂತ, ಮೇಲ್ನೋಟಕ್ಕೆ ಗ್ರಂಥಾಲಯದ ಹಾಗೆ ಕಾಣಿಸುತ್ತದೆ. ಸುಮಾರು 3000 ಜಪಾನಿ ಹಾಗೂ ಇಂಗ್ಲಿಷ್ ಪುಸ್ತಕಗಳನ್ನು ಇಲ್ಲಿ ನೀಟಾಗಿ ಜೋಡಿಸಿ ಇಡಲಾಗಿದೆ. ಇಲ್ಲಿಗೆ ಬರುವ ಗಿರಾಕಿಗಳಿಗೆ ಒಂದು ರಾತ್ರಿ ಕಳೆಯಲು ಜಪಾನಿ ಶೈಲಿಯ ಕಂಪಾರ್ಟ್ಮೆಂಟ್ ವ್ಯವಸ್ಥೆಯಿದೆ. ಅದರ ವಿಸ್ತಾರಕ್ಕೆ ಅನುಗುಣವಾಗಿ 1800 ರೂಪಾಯಿಂದ 3000 ಸಾವಿರದರೆಗೆ ದರ ನಿಗದಿ ಮಾಡಲಾಗಿದೆ. ಜತೆಗೆ, ಒಂದಷ್ಟು ಒಳ್ಳೆಯ ಪುಸ್ತಕಗಳನ್ನೂ ಓದಬಹುದು.

ಪುಸ್ತಕ, ಓದು ಮತ್ತು ನಿದ್ದೆ: ಭಿನ್ನ ಆಲೋಚನೆಗಳಿಗೆ ಹೀಗೆಲ್ಲಾ ಹುಟ್ಟಿಕೊಳ್ಳುತ್ತವೆ!  
ಪುಸ್ತಕ, ಓದು ಮತ್ತು ನಿದ್ದೆ: ಭಿನ್ನ ಆಲೋಚನೆಗಳಿಗೆ ಹೀಗೆಲ್ಲಾ ಹುಟ್ಟಿಕೊಳ್ಳುತ್ತವೆ!  

ಅಂತರ್ಜಾಲದ ಬಳಕೆ ಹೆಚ್ಚಾಗುತ್ತಿದ್ದಂತೆ ರಾತ್ರಿ ನಿದ್ದೆ ಎಂಬುದು ಕಾಯಿಲೆಯಾಗಿ ಮಾರ್ಪಟ್ಟಿದೆ ಎನ್ನುತ್ತವೆ ಕೆಲವು ಸಂಶೋಧನೆಗಳು. ಈ ಹಿನ್ನೆಲೆಯಲ್ಲಿ 'ಬುಕ್ ಅಂಡ್ ಬೆಡ್' ಹೆಸರಿನಲ್ಲಿ ಶುರುವಾದ ಈ ಹೋಟೆಲ್, ರಾತ್ರಿ ನಿದ್ದೆಗೂ ಮುನ್ನ ಆರೋಗ್ಯಪೂರ್ಣವಾದ ಹವ್ಯಾಸವೊಂದನ್ನು ಉಳಿಸಿಕೊಳ್ಳಲು ನೆರವಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಇವತ್ತಿನ ಮಾರುಕಟ್ಟೆಯ ಪೈಪೋಟಿಯಲ್ಲಿ ಉಳಿದುಕೊಳ್ಳಲು ಹೊಸ ಆಲೋಚನೆಗಳ ಅಗತ್ಯವಿದೆ. ಯಾವುದೇ ಉದ್ಯಮ ಇರಲಿ, ಅದರಲ್ಲೊಂದು ಭಿನ್ನತೆ ಇದ್ದರೆ ಮಾತ್ರವೇ ಗುರುತಿಸಿಕೊಳ್ಳಲು, ಬೆಳೆಯಲು ಸಾಧ್ಯ.

ಪುಸ್ತಕ, ಓದು ಮತ್ತು ನಿದ್ದೆ: ಭಿನ್ನ ಆಲೋಚನೆಗಳಿಗೆ ಹೀಗೆಲ್ಲಾ ಹುಟ್ಟಿಕೊಳ್ಳುತ್ತವೆ!  

ಹೀಗಾಗಿ, ಜಪಾನಿನ ಈ 'ಬುಕ್ಸ್ ಅಂಡ್ ಬೆಡ್' ಹೋಟೆಲ್ ಉಳಿದವುಗಳಿಗಿಂತ ಭಿನ್ನ ಅಂತ ಗುರುತಿಸಿಕೊಂಡಿದೆ. ನೀವೇನಾದ್ರೂ, ಸ್ವಂತಕ್ಕೊಂದು ಉದ್ಯಮ ಸ್ಥಾಪಿಸುವ ಮನಸ್ಸು ಇದ್ದರೆ, ಹೀಗೇನಾದರೂ ಹೊಸತನವನ್ನು ಕಂಡುಕೊಳ್ಳಿ, ಸಾಕು. ಜತೆಗೆ ಒಂದಿಷ್ಟು ಶ್ರದ್ಧೆ, ಶ್ರಮ ಸೇರಿದರೆ ಯಶಸ್ಸು ಗ್ಯಾರೆಂಟಿ.