samachara
www.samachara.com
ಕೆಸಿ ವ್ಯಾಲಿ/ ಎಚ್‌ಎನ್‌ ವ್ಯಾಲಿ ಪಿಐಎಲ್ ವಿಚಾರಣೆಗೆ ಪ್ರತ್ಯೇಕ ಪೀಠ: ಹೈಕೋರ್ಟ್‌
ರಾಜ್ಯ

ಕೆಸಿ ವ್ಯಾಲಿ/ ಎಚ್‌ಎನ್‌ ವ್ಯಾಲಿ ಪಿಐಎಲ್ ವಿಚಾರಣೆಗೆ ಪ್ರತ್ಯೇಕ ಪೀಠ: ಹೈಕೋರ್ಟ್‌

ಕೆಸಿ ವ್ಯಾಲಿ ಮತ್ತು ಎಚ್‌ಎನ್‌ ವ್ಯಾಲಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗಾಗಿ ಪ್ರತ್ಯೇಕ ಪೀಠ ಸ್ಥಾಪಿಸಲು ಹೈಕೋರ್ಟ್‌ ನಿರ್ದೇಶನ ನೀಡಿದೆ.

ಕೆ.ಸಿ. ವ್ಯಾಲಿ (ಕೋರಮಂಗಲ- ಚಲಘಟ್ಟ) ಮತ್ತು ಎಚ್.ಎನ್. ವ್ಯಾಲಿ (ಹೆಬ್ಬಾಳ- ನಾಗವಾರ) ಯೋಜನೆಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ತುರ್ತಾಗಿ ಪ್ರತ್ಯೇಕ ಪೀಠವನ್ನು ರಚಿಸಲು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನಿರ್ದೇಶಿಸಿದ್ದಾರೆ.

ಶಾಶ್ವತ ನೀರಾವರಿ ಹೋರಾಟ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಈ ಯೋಜನೆಗಳ ವಿಚಾರಣೆಗೆ ಪ್ರತ್ಯೇಕ ಪೀಠ ರಚಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ನಿರ್ದೇಶನ ನೀಡಿದ್ದಾರೆ.

Also read: ‘ಕೆಸಿ ವ್ಯಾಲಿ’ಯ ಅಪಾಯಕಾರಿ ನಡೆ: ಛೀಮಾರಿ ಹಾಕಿದ ಹೈಕೋರ್ಟ್

ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಆದರೆ, ಬೆಂಗಳೂರಿಗರು ಬಳಸಿದ ಕೊಳಚೆ ನೀರನ್ನು ಈ ಜಿಲ್ಲೆಗಳ ಕೆರೆಗಳಿಗೆ ತುಂಬಿಸುತ್ತಿರುವುದಕ್ಕೆ ಸ್ಥಳೀಯರ ಅಸಮಾಧಾನವಿದೆ.

Also read: ‘ಸಿಲಿಕಾನ್ ಸಿಟಿ ಚರಂಡಿ ನೀರು ಕುಡಿಯಲು ಯೋಗ್ಯನಾ?’: ಕೆಸಿ ವ್ಯಾಲಿಯಿಂದ ಆತಂಕದ ಪತ್ರ

ಅಲ್ಲದೆ, ಕೆರೆಗಳಿಗೆ ತುಂಬಿಸುತ್ತಿರುವ ಈ ಸಂಸ್ಕರಿಸಿದ ಕೊಳಚೆ ನೀರು ಕುಡಿಯಲು ಯೋಗ್ಯವೇ ಎಂಬ ಬಗ್ಗೆ ಸರಕಾರ ಈವರೆಗೆ ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಈ ಯೋಜನೆಯನ್ನು ಪ್ರಶ್ನಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

Also read: Election Tour | ಬೆಂಗಳೂರಿಗರು ಬಳಸಿದ ನೀರು ನಮಗೇಕೆ? ಕಾಲುವೆ ಯೋಜನೆಗೆ ಮಿಶ್ರ ಪ್ರತಿಕ್ರಿಯೆ