- ಸಾಂದರ್ಭಿಕ ಚಿತ್ರ
ರಾಜ್ಯ

ಗಂಗಾಧರ ಚಡಚಣ ಹತ್ಯೆ ಪ್ರಕರಣ; ಹಿಂದಿನ ಸಿಪಿಐ ಮಲ್ಲಿಕಾರ್ಜುನ ಅಸೂಡೆ ಬಂಧನ ಸಾಧ್ಯತೆ

ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಅಂದಿನ ಸಿಪಿಐ ಮಲ್ಲಿಕಾರ್ಜುನ ಅಸೂಡೆ ಅವರ ಪಾತ್ರ ಇರುವ ಶಂಕೆಯ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಅಸೂಡೆ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ಗಂಗಾಧರ ಚಡಚಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಚಡಚಣ ಠಾಣೆ ಸಿಪಿಐ ಮಲ್ಲಿಕಾರ್ಜುನ ಅಸೂಡೆ ಕುರಿತು ಮಾಹಿತಿ ಕಲೆ ಹಾಕುತ್ತಿರುವ ತನಿಖಾಧಿಕಾರಿಗಳು ಸಿಪಿಐ ಜೀಪ್ ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಸಿಐಡಿ ಅಧಿಕಾರಿಗಳ ಸೂಚನೆ ಮೇರೆಗೆ ಸ್ಥಳೀಯ ಪೊಲೀಸ್ ಅಧಿಕಾರಿ ಅಶೋಕ ಅವರು ಸಿಪಿಐ ಜೀಪ್ ಚಾಲಕ ಬಬಲೇಶ್ವರ ಎಂಬುವನ ವಿಚಾರಣೆ ನಡೆಸಿದ್ದಾರೆ.

Also read: ಉತ್ತರ ಕರ್ನಾಟಕದ ‘ರಕ್ತ ಚರಿತ್ರೆ’; ಭೀಮೆಯಲ್ಲಿ ನೀರಿಗಿಂತಲೂ ನೆತ್ತರು ಹರಿದಿದ್ದೇ ಜಾಸ್ತಿ!

ಅಲ್ಲದೆ ಧರ್ಮರಾಜ ಎನ್‌ಕೌಂಟರ್ ಆದ ದಿನ ಸಿಪಿಐ ಹಾಗೂ ಚಾಲಕ ಬಬಲೇಶ್ವರ ಎಲ್ಲಿದ್ದರು ಎನ್ನುವ ಮಾಹಿತಿಗಾಗಿ 2017ರ ಅಕ್ಟೋಬರ್‌ 30ರಂದು ಸಿಪಿಐ ಅಸೂಡೆ ಅವರ ಮೊಬೈಲ್ ಟವರ್ ಲೊಕೇಷನ್ ಹಾಗೂ ಕರೆ ಮಾಹಿತಿಯನ್ನು ತನಿಖಾಧಿಕಾರಿಗಳು ಕಲೆಹಾಕಿದ್ದಾರೆ ಎನ್ನಲಾಗಿದೆ.

ಪ್ರಕರಣದಲ್ಲಿ ಅಂದಿನ ಸಿಪಿಐ ಮಲ್ಲಿಕಾರ್ಜುನ ಅಸೂಡೆ ಅವರ ಪಾತ್ರ ಇರುವ ಶಂಕೆಯ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಅಸೂಡೆ ಅವರನ್ನು ಬಂಧಿಸುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.