‘ನಿತ್ಯ ಯೋಗಿ’ ದೇವೇಗೌಡ ಮತ್ತು ಆ 30 ಆಸನಗಳು!
ರಾಜ್ಯ

‘ನಿತ್ಯ ಯೋಗಿ’ ದೇವೇಗೌಡ ಮತ್ತು ಆ 30 ಆಸನಗಳು!

ಏಳು ವರ್ಷಗಳಿಂದ ಯೋಗಾಸನ ಮಾಡಿಕೊಂಡು ಬರುತ್ತಿರುವ ದೇವೇಗೌಡರು ಬೆಂಗಳೂರಿನಿಂದ ಹೊರಗಿದ್ದಾಗಲೂ ಯೋಗಾಭ್ಯಾಸ ಬಿಡುವವರಲ್ಲ. ದೇವೇಗೌಡರ ದಿನಚರಿಯ ಕನಿಷ್ಠ ಒಂದು ಗಂಟೆ ಯೋಗಕ್ಕೇ ಮೀಸಲು.

ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಯೋಗ ಪ್ರೀತಿಯ ಬಗ್ಗೆ ಹಲವರಿಗೆ ಗೊತ್ತಿದೆ. ಆದರೆ, ದೇವೇಗೌಡರು ನಿತ್ಯ ಮಾಡುವ ಆಸನಗಳ ಸಂಖ್ಯೆ ಗೊತ್ತೇ? 86ರ ಹರೆಯದಲ್ಲಿರುವ ದೇವೇಗೌಡರು ನಿತ್ಯ ಸುಮಾರು 30 ಆಸನಗಳನ್ನು ಮಾಡುತ್ತಾರೆ!

ಏಳು ವರ್ಷಗಳಿಂದ ಯೋಗಾಸನ ಮಾಡಿಕೊಂಡು ಬರುತ್ತಿರುವ ದೇವೇಗೌಡರು ಬೆಂಗಳೂರಿನಿಂದ ಹೊರಗಿದ್ದಾಗಲೂ ಯೋಗಾಭ್ಯಾಸ ಬಿಡುವವರಲ್ಲ. ದೇವೇಗೌಡರ ದಿನಚರಿಯ ಕನಿಷ್ಠ ಒಂದು ಗಂಟೆ ಯೋಗಕ್ಕೇ ಮೀಸಲು.

‘ನಿತ್ಯ ಯೋಗಿ’ ದೇವೇಗೌಡ ಮತ್ತು ಆ 30 ಆಸನಗಳು!

“ಪವನ ಮುಕ್ತಾಸನ, ಸರ್ವಾಂಗಾಸನ, ಉತ್ಥಾನ ಪಾದಾಸನ, ವೀರಾಸನ, ಸುಖಾಸನ, ಹಲಾಸನ ಸೇರಿದಂತೆ 20ರಿಂದ 30 ಆಸನಗಳನ್ನು ದೇವೇಗೌಡರು ನಿತ್ಯ ಮಾಡುತ್ತಾರೆ. 86ರ ವಯಸ್ಸಿನಲ್ಲೂ ಅವರು ಯಾವುದೇ ಆಯಾಸವಿಲ್ಲದಂತೆ ಯೋಗಾಸನ ಮಾಡುತ್ತಾರೆ” ಎನ್ನುತ್ತಾರೆ ಏಳು ವರ್ಷಗಳಿಂದ ದೇವೇಗೌಡರಿಗೆ ಯೋಗಾಭ್ಯಾಸ ಮಾಡಿಸುತ್ತಿರುವ ಯೋಗ ಗುರು ಕಾರ್ತಿಕ್.

86ರ ಹರೆಯದ ಎಚ್.ಡಿ. ದೇವೇಗೌಡರ ಯೋಗಾಸನ!

Posted by samachara.com on Thursday, June 21, 2018

“ಬೆಂಗಳೂರಿನಿಂದ ಹೊರಗಿದ್ದಾಗ ಅವರೇ ಸರಳವಾದ ಆಸನಗಳನ್ನು ಅಭ್ಯಾಸ ಮಾಡುತ್ತಾರೆ. ಬೆಂಗಳೂರಿನಲ್ಲಿದ್ದಾಗ ಪ್ರತಿನಿತ್ಯ ನಾನು ಅವರ ಮನೆಯಲ್ಲೇ ಯೋಗಾಭ್ಯಾಸ ಮಾಡಿಸುತ್ತೇನೆ. ಯೋಗಾಭ್ಯಾಸ ಮಾಡುತ್ತಿರುವುದರಿಂದ ಅವರ ಆರೋಗ್ಯ ಚೆನ್ನಾಗಿದೆ” ಎಂಬುದು ಕಾರ್ತಿಕ್‌ ಮಾತು.

‘ನಿತ್ಯ ಯೋಗಿ’ ದೇವೇಗೌಡ ಮತ್ತು ಆ 30 ಆಸನಗಳು!

“ಯೋಗಾಭ್ಯಾಸಕ್ಕೂ ಮೊದಲು ಟ್ರೆಡ್‌ಮಿಲ್‌, ಸೈಕ್ಲಿಂಗ್‌, ಸರಳ ವ್ಯಾಯಾಮ ಮಾಡುತ್ತಿದ್ದರು. ಬಳಿಕ ಯೋಗಾಭ್ಯಾಸಕ್ಕೆ ಮುಂದಾದರು. ಯೋಗಾಸನ ಮಾಡುವಂತೆ ವೈದ್ಯರೇನು ಅವರಿಗೆ ಸಲಹೆ ನೀಡಿರಲಿಲ್ಲ. ಆರೋಗ್ಯದ ಕಾರಣಕ್ಕೆ ಅವರು ಸ್ವಇಚ್ಛೆಯಿಂದ ಯೋಗಾಭ್ಯಾಸಕ್ಕೆ ಮುಂದಾದವರು” ಎನ್ನುತ್ತಾರೆ ಕಾರ್ತಿಕ್‌.

“ಬೆಳಿಗ್ಗೆ ಸುಮಾರು 7 ಗಂಟೆಯಿಂದ 8 ಗಂಟೆ, 8.30ರವರೆಗೆ ಯೋಗಾಭ್ಯಾಸ ಮಾಡುತ್ತಾರೆ. ಮೊದಲು ಸರಳ ವ್ಯಾಯಾಮ ಮಾಡುತ್ತಾರೆ. ಬಳಿಕ ಆಸನಗಳನ್ನು ಮಾಡುತ್ತಾರೆ. ಯೋಗದ ಬಗ್ಗೆ ದೇವೇಗೌಡರಿಗೆ ಅಪಾರ ಒಲವಿದೆ” ಎನ್ನುತ್ತಾರೆ ಅವರು.

ಯೋಗಾ ಡೇ ಮಾಡ್ತೀವಿ, ನೀವು ಬರಬೇಕು ಅಂತ ಕೆಲವರು ಆಹ್ವಾನ ನೀಡಿದ್ರು. ಯಾವಾಗ ನಾನೇ ಯೋಗ ಮಾಡ್ತೀನಿ ಅಂತ ಹೇಳಿದ್ನೋ, ಅವರು ವಾಪಸ್ ಬರಲೇ ಇಲ್ಲ. ಬಹುಶಃ ಮೋದಿ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕ್ತೀನಿ ಅಂತ ಇರಬಹುದು. ಆದ್ರೆ ನಾನು ಯಾರಿಗೂ ಚಾಲೆಂಜ್ ಹಾಕಲ್ಲ.
- ಎಚ್‌.ಡಿ. ದೇವೇಗೌಡ
‘ನಿತ್ಯ ಯೋಗಿ’ ದೇವೇಗೌಡ ಮತ್ತು ಆ 30 ಆಸನಗಳು!

ವಿಶ್ವ ಯೋಗ ದಿನದ ಅಂಗವಾಗಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಮುಂದೆ ಯೋಗ ಮಾಡಿದ ದೇವೇಗೌಡರು, “ಯೋಗದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ನಾನು ಆರೋಗ್ಯ ಕಾಪಾಡಲು ನನ್ನದೇ ಆದ ಕೆಲವು ನಿಯಮಗಳನ್ನು ಇಟ್ಟುಕೊಂಡಿದ್ದೇನೆ. ಯೋಗದ ಜತೆಗೆ ಆಹಾರ ಪದ್ಧತಿಯನ್ನು ಕೂಡ ಅಳವಡಿಸಿಕೊಂಡಿದ್ದೇನೆ” ಎಂದಿದ್ದಾರೆ.

‘ನಿತ್ಯ ಯೋಗಿ’ ದೇವೇಗೌಡ ಮತ್ತು ಆ 30 ಆಸನಗಳು!

“ಪ್ರಧಾನಿ ಮೋದಿ ಯೋಗ ದಿನವನ್ನು ಆಚರಣೆಗೆ ತಂದಿದ್ದಾರೆ. ಯೋಗ, ಆಸನಗಳನ್ನು ಮಾಡುವ ಪದ್ಧತಿ ಅನಾದಿ ಕಾಲದಿಂದ ಇದ್ದರೂ ಕೂಡ ಮೋದಿಯವರು ಅದಕ್ಕೆ ಒಂದು ಸ್ವರೂಪ ನೀಡಿದ್ದಾರೆ. ಹಿಂದೆ ಋಷಿ-ಮುನಿಗಳು ತಮ್ಮ ಆರೋಗ್ಯವನ್ನು ಯೋಗದಿಂದ ಕಾಪಾಡಿಕೊಳ್ಳುತ್ತಿದ್ದರು. ಅದರಿಂದಾಗಿ ಅವರು 100- 200 ವರ್ಷಗಳ ಕಾಲ ಬದುಕುತ್ತಿದ್ದರು” ಎಂದು ಹೇಳಿದ್ದಾರೆ.