samachara
www.samachara.com
21 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ, 7 ಕ್ಷೇತ್ರಗಳ ಆಯ್ಕೆ ಬಾಕಿ
ಸುದ್ದಿ ಸಾರ

21 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ, 7 ಕ್ಷೇತ್ರಗಳ ಆಯ್ಕೆ ಬಾಕಿ

ಸ್ವಕ್ಷೇತ್ರದಲ್ಲಿ ಭಾರಿ ವಿರೋಧ ಎದುರಿಸುತ್ತಿದ್ದ ನಾಲ್ವರು ಹಾಲಿ ಸಂಸದರಾದ ಶೋಭಾ ಕರಂದ್ಲಾಜೆ, ಅನಂತ್‌ ಕುಮಾರ್‌ ಹೆಗಡೆ, ನಳಿನ್‌ ಕುಮಾರ್‌ ಕಟೀಲ್‌ ಮತ್ತು ಪಿ.ಸಿ. ಗದ್ದಿಗೌಡರ್‌ಗೆ ಟಿಕೆಟ್‌ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

Team Samachara

ಹಲವು ದಿನಗಳ ಕಾಲ ಅಳೆದೂ ತೂಗಿ ಲೋಕಸಭೆ ಚುನಾವಣೆಗೆ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪಕ್ಷ ಘೋಷಣೆ ಮಾಡಿದೆ. ಒಟ್ಟಾರೆ ದೇಶದಲ್ಲಿ 184 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಗೊಳಿಸಲಾಗಿದೆ.

ಸ್ವಕ್ಷೇತ್ರದಲ್ಲಿ ಭಾರಿ ವಿರೋಧ ಎದುರಿಸುತ್ತಿದ್ದ ನಾಲ್ವರು ಹಾಲಿ ಸಂಸದರಾದ ಶೋಭಾ ಕರಂದ್ಲಾಜೆ, ಅನಂತ್‌ ಕುಮಾರ್‌ ಹೆಗಡೆ, ನಳಿನ್‌ ಕುಮಾರ್‌ ಕಟೀಲ್‌ ಮತ್ತು ಪಿ.ಸಿ. ಗದ್ದಿಗೌಡರ್‌ಗೆ ಟಿಕೆಟ್‌ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿ ಹೀಗಿದೆ,

  1. ಬೆಳಗಾವಿ- ಸುರೇಶ್ ಅಂಗಡಿ
  2. ಬಾಗಲಕೋಟೆ- ಪಿ.ಸಿ ಗದ್ದಿಗೌಡರ್
  3. ವಿಜಯಪುರ - ರಮೇಶ್ ಜಿಗಜಿಣಗಿ
  4. ಕಲಬುರಗಿ – ಡಾ. ಉಮೇಶ್ ಜಾದವ್
  5. ಬೀದರ್ - ಭಗವಂತ ಖೂಬಾ
  6. ಬಳ್ಳಾರಿ - ದೇವೆಂದ್ರಪ್ಪ,
  7. ಹಾವೇರಿ - ಶಿವಕುಮಾರ ಉದಾಸಿ
  8. ಹುಬ್ಬಳ್ಳಿ-ಧಾರವಾಡ - ಪ್ರಹ್ಲಾದ ಜೋಶಿ
  9. ಉತ್ತರ ಕನ್ನಡ - ಅನಂತ್ ಕುಮಾರ್ ಹೆಗಡೆ
  10. ದಾವಣಗೆರೆ - ಜಿ.ಎಂ. ಸಿದ್ದೇಶ್ವರ್
  11. ಶಿವಮೊಗ್ಗ- ಬಿ.ವೈ. ರಾಘವೇಂದ್ರ
  12. ಉಡುಪಿ-ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ
  13. ಹಾಸನ - ಎ. ಮಂಜು
  14. ದಕ್ಷಿಣ ಕನ್ನಡ - ನಳಿನ್ ಕುಮಾರ್ ಕಟೀಲ್
  15. ಚಿತ್ರದುರ್ಗ- ಆನೇಕಲ್ ನಾರಾಯಣ ಸ್ವಾಮಿ,
  16. ತುಮಕೂರು- ಜಿ.ಎಸ್. ಬಸವರಾಜು
  17. ಮೈಸೂರು-ಕೊಡಗು - ಪ್ರತಾಪ್ ಸಿಂಹ
  18. ಚಾಮರಾಜನಗರ - ಶ್ರೀನಿವಾಸ್ ಪ್ರಸಾದ್
  19. ಬೆಂಗಳೂರು ಉತ್ತರ - ಡಿ.ವಿ. ಸದಾನಂದಗೌಡ
  20. ಬೆಂಗಳೂರು ಕೇಂದ್ರ - ಪಿ.ಸಿ. ಮೋಹನ್
  21. ಚಿಕ್ಕಬಳ್ಳಾಪುರ – ಬಚ್ಚೇಗೌಡ

ಇತ್ತೀಚೆಗಷ್ಟೇ ಪಕ್ಷಕ್ಕೆ ವಲಸೆ ಬಂದಿರುವ ಡಾ. ಉಮೇಶ್‌ ಜಾಧವ್‌ ಮತ್ತು ಎ. ಮಂಜು ಇಬ್ಬರಿಗೂ ಬಿಜೆಪಿ ಟಿಕೆಟ್‌ ಸಿಕ್ಕಿದೆ.

ಸುಮಲತಾ ಸ್ಪರ್ಧಿಸುತ್ತಿರುವ ಮಂಡ್ಯ ಸೇರಿದಂತೆ ಕೋಲಾರ, ಕೊಪ್ಪಳ, ಚಿಕ್ಕೋಡಿ, ರಾಯಚೂರು, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪಕ್ಷ ಇನ್ನೂ ಅಂತಿಮಗೊಳಿಸಿಲ್ಲ.