samachara
www.samachara.com
ಬೆಂಕಿಗೆ 300 ಕಾರುಗಳು ಭಸ್ಮ, ಅನುಮಾನ ಹುಟ್ಟುಹಾಕಿದ ಏರ್‌ ಶೋ ಸರಣಿ ಅವಘಡಗಳು
ಸುದ್ದಿ ಸಾರ

ಬೆಂಕಿಗೆ 300 ಕಾರುಗಳು ಭಸ್ಮ, ಅನುಮಾನ ಹುಟ್ಟುಹಾಕಿದ ಏರ್‌ ಶೋ ಸರಣಿ ಅವಘಡಗಳು

ಕಾರುಗಳಲ್ಲಿರುವ ಇಂಧನ ಟ್ಯಾಂಕ್‌ಗಳು ಸ್ಫೋಟಿಸುತ್ತಿರುವುದರಿಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲಾಗದೇ ಪರದಾಡುತ್ತಿದ್ದಾರೆ. ಸುಮಾರು ಎರಡು ತಾಸಿನಿಂದ ಬೆಂಕಿ ನಂದಿಸುವ ವಿಫಲ ಯತ್ನ ಮುಂದುವರಿದಿದೆ.

ಅನುಮಾನಾಸ್ಪದ ಅಪಘಾತದ ಮೂಲಕ ಆರಂಭಗೊಂಡ ಏರ್ ಶೋದಲ್ಲಿ ಶನಿವಾರ ಮತ್ತೊಂದು ದುರಂತ ಸಂಭವಿಸಿದೆ. ಏರ್ ಶೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹತ್ತಿಕೊಂಡು ಸುಮಾರು 300ಕ್ಕೂ ಹೆಚ್ಚು ಕಾರುಗಳು ಭಸ್ಮವಾಗಿವೆ.

ಏರ್‌ ಶೋ ನಾಲ್ಕನೇ ದಿನವಾದ ಶುಕ್ರವಾರ ಮುಂಜಾನೆ ಎಂದಿನಂತೆ ಆಗಸದಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಕ್ಷಣಗಣನೆ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಗೇಟ್‌ ನಂಬರ್‌ 5ರ ಪಾರ್ಕಿಂಗ್‌ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಲೇ ನೂರಾರು ಕಾರು, ಬೈಕುಗಳಿಗೆ ಬೆಂಕಿ ಹತ್ತಿಕೊಂಡು ದಟ್ಟ ಹೊಗೆ ಹತ್ತಾರು ಕಿಲೋ ಮೀಟರ್‌ ದೂರಕ್ಕೆ ಕಾಣುವಂತೆ ಮೇಲೇರಿದೆ.

ಘಟನೆಯಲ್ಲಿ ಸುಮಾರು 300 ಕಾರುಗಳು ಭಸ್ಮವಾಗಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಬೆಂಕಿಗೆ ಆಹುತಿಯಾದ ಬೈಕ್‌ಗಳ ಲೆಕ್ಕ ಇನ್ನೂ ಸಿಕ್ಕಿಲ್ಲ. ಒಟ್ಟು 500-600ಕ್ಕೂ ಹೆಚ್ಚು ವಾಹನಗಳು ಭಸ್ಮವಾಗಿರಬಹುದು ಎಂದುಕೊಳ್ಳಲಾಗಿದೆ. ‘ಸದ್ಯ ಸ್ಥಳದಲ್ಲಿ 20 ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ನಿರತವಾಗಿವೆ’ ಎಂದು ಅಗ್ನಿ ಶಾಮಕ ದಳದ ಡಿಜಿಪಿ ಎಂ.ಎನ್‌. ರೆಡ್ಡಿ ಟಿವಿ9ಗೆ ಮಾಹಿತಿ ನೀಡಿದ್ದಾರೆ.

ಬೆಂಕಿಗೆ 300 ಕಾರುಗಳು ಭಸ್ಮ, ಅನುಮಾನ ಹುಟ್ಟುಹಾಕಿದ ಏರ್‌ ಶೋ ಸರಣಿ ಅವಘಡಗಳು

ಕಾರುಗಳಲ್ಲಿರುವ ಇಂಧನ ಟ್ಯಾಂಕ್‌ಗಳು ಸ್ಫೋಟಿಸುತ್ತಿರುವುದರಿಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲಾಗದೇ ಪರದಾಡುತ್ತಿದ್ದಾರೆ. ಸುಮಾರು ಎರಡು ತಾಸಿನಿಂದ ಬೆಂಕಿ ನಂದಿಸುವ ವಿಫಲ ಯತ್ನ ಮುಂದುವರಿದಿದೆ.

ಈ ಬೆಂಕಿ ಅವಘಡಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಇಂದು ವಾರಾಂತ್ಯವಾಗಿದ್ದರಿಂದ ಹೆಚ್ಚಿನ ಜನರು ಲೋಹದ ಹಕ್ಕಿಗಳ ಕಲರವ ನೋಡುವ ಸಲುವಾಗಿ ಏರ್ ಶೋಗೆ ಹೋಗಿದ್ದರು. ಅದರಲ್ಲೂ ಸರ್ಕಾರಿ ಅಧಿಕಾರಿಗಳೇ ಹೆಚ್ಚಾಗಿ ಜಮಾಯಿಸಿದ್ದರು. ದುರಾದೃಷ್ಟಕ್ಕೆ ವಿಮಾನಗಳು ಆಗಸಕ್ಕೆ ಏರುವ ಮುನ್ನವೇ ಇವರುಗಳು ಕಾರುಗಳು ಅಗ್ನಿ ದುರಂತಕ್ಕೆ ಗುರಿಯಾಗಿದ್ದು, ಕಾರ್ ಪಾರ್ಕಿಂಗ್ ಲಾಟ್‌ನಿಂದ ಬೆಂಕಿಯ ಹೊಗೆ ಆಗಸಕ್ಕೆ ಏರಿದೆ.

ಬೆಂಕಿಯ ಕೆನ್ನಾಲಿಗೆಯಿಂದ ಏರ್ ಶೋ ಸ್ಥಗಿತಗೊಳಿಸಲಾಗಿದೆ. ಅತ್ತ ಏರ್ ಶೋ ನೋಡಲು ಹೋದವರು ತಮ್ಮ ದುಬಾರಿ ಕಾರುಗಳ ಬೂದಿಯಾಗುವುದನ್ನು ನೋಡಿ ಕಂಗಾಲಾಗಿದ್ದಾರೆ. ಕಾರುಗಳ ಜತೆಗೆ ತಮ್ಮ ಅಮೂಲ್ಯ ದಾಖಲೆಗಳು, ಹಣ ಮತ್ತಿತ್ತರ ವಸ್ತುಗಳು ಕಳೆದುಕೊಂಡ ಬಗ್ಗೆ ಸ್ಥಳದಲ್ಲಿರುವ ಕಾರು ಮಾಲಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ವಿವಾದದೊಂದಿಗೇ ಈ ಬಾರಿಯ ಏರ್‌ ಶೋ ಆರಂಭಗೊಂಡಿತ್ತು. ಮೊದಲಿಗೆ ಬೆಂಗಳೂರಿನಲ್ಲಿ ಏರ್ ಶೋ ನಡೆಸುವ ಬಗ್ಗೆ ಅಪಸ್ವರ ಕೇಳಿಬಂದಿತ್ತು. ಬೆಂಗಳೂರಿನಿಂದ ಏರ್ ಶೋ ಬೇರಡೆ ವರ್ಗಾಯಿಸುವ ಯತ್ನಗಳು ನಡೆದಿದ್ದವು. ಈ ಸಂದರ್ಭದಲ್ಲಿ ಕರ್ನಾಟಕದ ಜನತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದರು. ಇದು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ನಾಂದಿ ಹಾಡಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲೇ ಏರ್ ಶೋ ಮುಂದುವರೆಸುವ ತೀರ್ಮಾನ ಹೊರ ಬಿದ್ದಿತ್ತು.

ಇನ್ನು ಏರ್ ಶೋ ಆರಂಭವಾಗುವ ಮುನ್ನಾ ದಿನ ನಡೆದ ಪೂರ್ವ ತಯಾರಿ ಕಾರ್ಯಕ್ರಮದಲ್ಲಿ 'ಸೂರ್ಯ ಕಿರಣ್' ತಂಡದ ಯುದ್ಧ ವಿಮಾನಗಳೆರಡು ಆಕಾಶದಲ್ಲಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಭೂಮಿಗೆ ಅಪ್ಪಳಿಸಿದ್ದವು. ಇದರಲ್ಲಿ ಓರ್ವ ಪೈಲೆಟ್ ಸಾವನ್ನಪ್ಪಿದ್ದರು.

ಇದೀಗ ಕಾರ್‌ ಪಾರ್ಕಿಂಗ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸದ್ಯ ಏರ್‌ ಶೋ ಸ್ಥಗಿತಗೊಂಡಿದೆ.