samachara
www.samachara.com
‘ಏರೋ ಇಂಡಿಯಾ’ ಮುನ್ನಾದಿನ ಜೆಟ್‌ಗಳ ಪತನ; ಪೈಲಟ್‌ ಸಾವು, ಮೂವರಿಗೆ ಗಾಯ
ಸುದ್ದಿ ಸಾರ

‘ಏರೋ ಇಂಡಿಯಾ’ ಮುನ್ನಾದಿನ ಜೆಟ್‌ಗಳ ಪತನ; ಪೈಲಟ್‌ ಸಾವು, ಮೂವರಿಗೆ ಗಾಯ

ಘಟನೆ ಹಿನ್ನೆಲೆಯಲ್ಲಿ ವೈಮಾನಿಕ ಪ್ರದರ್ಶನ ರದ್ದಾಗಲಿದೆಯೇ ಇಲ್ಲವೇ ಎಂಬ ಬಗ್ಗೆ ರಕ್ಷಣಾ ಇಲಾಖೆ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ.

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ತಾಲೀಮಿನ ವೇಳೆ ಎರಡು ಲಘು ಯುದ್ಧ ವಿಮಾನಗಳು ಡಿಕ್ಕಿಯಾಗಿ ಪತನಗೊಂಡು ಒಬ್ಬ ಪೈಲಟ್‌ ಮೃತಪಟ್ಟಿದ್ದಾರೆ. ಇಬ್ಬರು ಪೈಲಟ್‌ಗಳು ಹಾಗೂ ಓರ್ವ ನಾಗರಿಕ ಗಾಯಗೊಂಡಿದ್ದಾರೆ.

ಮಂಗಳವಾರ ಬೆಳಿಗ್ಗೆ 11.50ರ ಸುಮಾರಿಗೆ ಬೆಂಗಳೂರಿನ ಯಲಹಂಕ ವಾಯುನೆಲೆ ಸಮೀಪದ ಇಸ್ರೊ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ತಾಲೀಮಿಗೆ ಹೊರಟ ಸೂರ್ಯ ಕಿರಣ್ ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆಡಿವೆ. ಗಾಯಗೊಂಡಿರುವ ಪೈಲಟ್‌ಗಳನ್ನು ಕಮಾಂಡೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಳೆಯಿಂದ ಯಲಹಂಕ ವಾಯುನೆಲೆಯಲ್ಲಿ ನಾಲ್ಕು ದಿನಗಳ ಕಾಲ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಿಗದಿಯಾಗಿದೆ. ಘಟನೆ ಹಿನ್ನೆಲೆಯಲ್ಲಿ ವೈಮಾನಿಕ ಪ್ರದರ್ಶನ ರದ್ದಾಗಲಿದೆಯೇ ಇಲ್ಲವೇ ಎಂಬ ಬಗ್ಗೆ ರಕ್ಷಣಾ ಇಲಾಖೆ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ.