samachara
www.samachara.com
ರಾಜ್ಯದ ಉತ್ತರ, ಮಧ್ಯ ಭಾಗದಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ ಎಂದಿದೆ ಹವಾಮಾನ ಇಲಾಖೆ
ಸುದ್ದಿ ಸಾರ

ರಾಜ್ಯದ ಉತ್ತರ, ಮಧ್ಯ ಭಾಗದಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ ಎಂದಿದೆ ಹವಾಮಾನ ಇಲಾಖೆ

ಭಾರತದಲ್ಲಿ ಹವಾಮಾನ ಇಲಾಖೆ ನೀಡುವ ಮುನ್ಸೂಚನೆಗಳು ಕೆಲವೊಮ್ಮೆ ನಿಜವಾಗುತ್ತವೆ. ಹೀಗಾಗಿ ಈ ಮುನ್ಸೂಚನೆಯನ್ನೊಮ್ಮೆ ಗಮನಿಸಿ...

Team Samachara

ಬೆಂಗಳೂರಿನ ಕೆಲ ಭಾಗಗಳಲ್ಲಿ ಶನಿವಾರ ಭಾರೀ ಮಳೆಯಾಗಿತ್ತು. ಅದಕ್ಕೂ ಕೆಲ ದಿನಗಳ ಮೊದಲು ಚಿಕ್ಕಮಗಳೂರು, ಕೊಡಗು ಭಾಗದಲ್ಲೂ ಮಳೆಯಾಗಿತ್ತು. ಈಗ ರಾಜ್ಯದ ಉತ್ತರ ಹಾಗೂ ಮಧ್ಯ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕಳೆದ 24 ಗಂಟೆಗಳಿಂದ ಶುಷ್ಕ ವಾತಾವರಣದಿಂದ ಕೂಡಿದ್ದ ಉತ್ತರ ಒಳನಾಡು ಹಾಗೂ ಮಧ್ಯ ಕರ್ನಾಟಕ ಭಾಗಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ಹಾಗೂ ದಕ್ಷಿಣ ಕರ್ನಾಟಕದ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಶನಿವಾರ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು. ಎಚ್‌ಎಎಲ್ ಮಳೆ ಮಾಪನ ಕೇಂದ್ರದಲ್ಲಿ 58 ಮಿ.ಮೀ. ಮಳೆ ದಾಖಲಾಗಿತ್ತು. ಮುಂದಿನ 18 ಗಂಟೆಗಳವರೆಗೆ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಮತ್ತೊಮ್ಮೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

Also read: ‘ದಯವಿಟ್ಟು ಗಮನಿಸಿ’: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ, ರಾಜಕೀಯ ಮುನ್ಸೂಚನೆ ಇದ್ದಂತೆ…!

ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ದಾವಣಗೆರೆ ಹಾಗೂ ಮಡಿಕೇರಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ವಾತಾವರಣದ ತಾಪಮಾನದಲ್ಲಿಯೂ ಭಾರೀ ಬದಲಾವಣೆಯಾಗಲಿದೆ ಎಂದಿದೆ ಹವಾಮಾನ ಇಲಾಖೆ.

ಭಾರತದಲ್ಲಿ ಹವಾಮಾನ ಇಲಾಖೆ ನೀಡುವ ಮುನ್ಸೂಚನೆಗಳು ಕೆಲವೊಮ್ಮೆ ನಿಜವಾಗುತ್ತವೆ. ಹೀಗಾಗಿ ಈ ಮುನ್ಸೂಚನೆಯನ್ನೊಮ್ಮೆ ಗಮನಿಸಬಹುದು. ಯಾವುದಕ್ಕೂ ಕೈಯಲ್ಲಿ ಕೊಡೆ, ಬ್ಯಾಗ್‌ನಲ್ಲಿ ರೈನ್‌ ಕೋಟ್‌ ಇಟ್ಟುಕೊಂಡಿರಿ!

Also read: ಮಳೆಯೇನೋ ಅವಾಂತರ ಸೃಷ್ಟಿಸುತ್ತಿದೆ; ಆದರೆ, ಬೆಂಗಳೂರಿಗರು ಏನು ಮಾಡುತ್ತಿದ್ದಾರೆ?