samachara
www.samachara.com
ಇಂದೂ ED ವಿಚಾರಣೆಗೆ ಹಾಜರಾದ ವಾದ್ರಾ; ‘ಕರೆದಾಗೆಲ್ಲಾ ಬರುವೆ’ ಎಂಬ ಮುಚ್ಚಳಿಕೆಗೆ ಸಹಿ
ಸುದ್ದಿ ಸಾರ

ಇಂದೂ ED ವಿಚಾರಣೆಗೆ ಹಾಜರಾದ ವಾದ್ರಾ; ‘ಕರೆದಾಗೆಲ್ಲಾ ಬರುವೆ’ ಎಂಬ ಮುಚ್ಚಳಿಕೆಗೆ ಸಹಿ

ಅಧಿಕಾರಿಗಳು ವಿಚಾರಣೆಗೆ ಕರೆದಾಗೆಲ್ಲಾ ಹಾಜರಾಗುವುದಾಗಿ ವಾದ್ರಾ ಹೇಳಿಕೆ ಪತ್ರ ಬರೆದು ಸಹಿ ಮಾಡಿಕೊಟ್ಟಿದ್ದಾರೆ ಎಂದು ವಾದ್ರಾ ಪರ ವಕೀಲರು ತಿಳಿಸಿದ್ದಾರೆ.

Team Samachara

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ, ಉದ್ಯಮಿ ರಾಬರ್ಟ್‌ ವಾದ್ರಾ ಗುರುವಾರವೂ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ. ಬುಧವಾರ ಸಂಜೆಯಿಂದ ರಾತ್ರಿಯವರೆಗೂ ವಾದ್ರಾ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾತ್ರಿ 10 ಗಂಟೆ ಸುಮಾರಿಗೆ ಅವರನ್ನು ಕಚೇರಿಯಿಂದ ಕಳಿಸಿದ್ದರು.

ಬುಧವಾರ ಸುಮಾರು 6 ಗಂಟೆಗಳಷ್ಟು ದೀರ್ಘ ವಿಚಾರಣೆಗೆ ಒಳಗಾದ ವಾದ್ರಾ ಗುರುವಾರವೂ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದರು. ಅಧಿಕಾರಿಗಳು ವಿಚಾರಣೆಗೆ ಕರೆದಾಗೆಲ್ಲಾ ಹಾಜರಾಗುವುದಾಗಿ ವಾದ್ರಾ ಹೇಳಿಕೆ ಪತ್ರ ಬರೆದು ಸಹಿ ಮಾಡಿಕೊಟ್ಟಿದ್ದಾರೆ ಎಂದು ವಾದ್ರಾ ಪರ ವಕೀಲರು ತಿಳಿಸಿದ್ದಾರೆ.

ಬುಧವಾರ ಸಂಜೆ ಕಾರಿನಲ್ಲಿ ಪ್ರಿಯಾಂಕ ಗಾಂಧಿ ಜತೆಗೆ ಜಾರಿ ನಿರ್ದೇಶನಾಲಯದ ಕಚೇರಿ ಬಂದ ವಾದ್ರಾ ರಾತ್ರಿ 10 ಗಂಟೆ ಹೊತ್ತಿಗೆ ಕಚೇರಿಯಿಂದ ಹೊರಬಂದರು. ಸುಮಾರು ಆರು ಗಂಟೆಗಳ ಕಾಲ ನಿರಂತರ ವಿಚಾರಣೆ ನಡೆಸಿರುವ ಅಧಿಕಾರಿಗಳು ವಿಚಾರಣೆಗೆ ಕರೆದಾಗೆಲ್ಲಾ ಬರಬೇಕೆಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಅಕ್ರಮ ಹಣ ವಹಿವಾಟು ಹಾಗೂ ಅಕ್ರಮವಾಗಿ ಲಂಡನ್‌ನಲ್ಲಿ 1.9 ಮಿಲಿಯನ್ ಪೌಂಡ್ ಆಸ್ತಿ, 9 ಮಿಲಿಯನ್ ಮೌಲ್ಯದ ಎರಡು ಮನೆ ಹಾಗೂ 6 ಫ್ಲಾಟ್‌ಗಳನ್ನು ಹೊಂದಿರುವ ಆರೋಪ ವಾದ್ರಾ ಮೇಲಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮನ್ನು ಬಂಧಿಸದಂತೆ ನಿರೀಕ್ಷಣಾ ಜಾಮೀನು ನೀಡುವಂತೆ ವಾದ್ರಾ ಕಳೆದ ವಾರ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಜಾರಿ ನಿರ್ದೇಶನಾಲಯದ ತನಿಖೆಗೆ ಸಹಕರಿಸುವಂತೆ ಹೇಳಿದ್ದ ನ್ಯಾಯಾಲಯ ಫೆಬ್ರುವರಿ16ರ ವರೆಗೆ ವಾದ್ರಾ ಬಂಧಿಸದಂತೆ ಆದೇಶಿಸಿತ್ತು.