samachara
www.samachara.com
ಆಂಧ್ರದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ; ಜಾತಿ ಕಾರಣಕ್ಕೆ ಮಗಳ ಕೊಂದ ತಂದೆ 
ಸುದ್ದಿ ಸಾರ

ಆಂಧ್ರದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ; ಜಾತಿ ಕಾರಣಕ್ಕೆ ಮಗಳ ಕೊಂದ ತಂದೆ 

ಮಗಳು ಕೆಳ ಜಾತಿಯ ಹುಡುಗನೊಂದಿಗೆ ಓಡಿ ಹೋಗಲು ಯೋಜನೆ ರೂಪಿಸುತ್ತಿದ್ದಾಳೆ ಎಂಬ ಅನುಮಾನದ ಮೇಲೆ ತಂದೆ ಮಗಳನ್ನು ಕೊಂದಿದ್ದಾನೆ.

Team Samachara

ಮಗಳು ಕೆಳ ಜಾತಿಯ ಹುಡುಗನನ್ನು ಪ್ರೀತಿಸಿದ್ದ ಕಾರಣಕ್ಕೆ ತಂದೆ ಮಗಳನ್ನು ಕತ್ತು ಹಿಸುಕಿ ಕೊಂದಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

20 ವರ್ಷದ ವೈಷ್ಣವಿ ಕಾಲೇಜಿನಲ್ಲಿ ತನ್ನ ಸಹಪಾಠಿ ಹುಡುಗನನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಕೆಳ ಜಾತಿಯವನು ಎಂಬ ಕಾರಣಕ್ಕೆ ಆಕೆಯ ತಂದೆ ವೆಂಕಾರೆಡ್ಡಿ ಆತನನ್ನು ಭೇಟಿ ಮಾಡದಂತೆ ಮಗಳಿಗೆ ತಾಕೀತು ಮಾಡಿದ್ದ. ತಂದೆ ಮಾತನ್ನೂ ಮೀರಿ ಆಕೆ ತನ್ನ ಪ್ರಿಯಕರನನ್ನು ಭೇಟಿ ಮಾಡಿದ್ದಳು.

ಮಗಳು ಕೆಳ ಜಾತಿಯ ಹುಡುಗನೊಂದಿಗೆ ಓಡಿ ಹೋಗಲು ಯೋಜನೆ ರೂಪಿಸುತ್ತಿದ್ದಾಳೆ ಎಂಬ ಅನುಮಾನದ ಮೇಲೆ ವೆಂಕಾರೆಡ್ಡಿ ಮಗಳನ್ನು ಕೊಂದಿದ್ದಾನೆ. ಮನೆಯಲ್ಲಿ ಮೃತದೇಹ ಇರುವ ಕುರಿತು ನೆರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಈ ಪ್ರಕರಣ ಬಯಲಾಗಿದೆ.

“ಮೃತ ವೈಷ್ಣವಿಯ ಪ್ರೀತಿಗೆ ಆಕೆಯ ತಂದೆ ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಈ ಸಾವು ಮೇಲ್ನೋಟಕ್ಕೆ ಅನುಮಾನಾಸ್ಪದವಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಈ ಸಾವಿನ ಕುರಿತ ಅಸಲಿಯತ್ತು ಬಯಲಾಗಲಿದೆ. ವೆಂಕಾರೆಡ್ಡಿಯನ್ನು ಬಂಧಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ” ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.