samachara
www.samachara.com
ಬಂಧನ ಕಾನೂನು ಬಾಹಿರ ಎಂದ ಪುಣೆ ಕೋರ್ಟ್‌; ತೇಲ್ತುಂಬ್ಡೆ ಬಿಡುಗಡೆಗೆ ಆದೇಶ
ಸುದ್ದಿ ಸಾರ

ಬಂಧನ ಕಾನೂನು ಬಾಹಿರ ಎಂದ ಪುಣೆ ಕೋರ್ಟ್‌; ತೇಲ್ತುಂಬ್ಡೆ ಬಿಡುಗಡೆಗೆ ಆದೇಶ

ಬಾಂಬೆ ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ ಆದೇಶದ ಬಳಿಕವಷ್ಟೇ ತೇಲ್ತುಂಬ್ಡೆ ಅವರನ್ನು ಬಂಧಿಸಲು ಅವಕಾಶವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ದಲಿತ ಚಿಂತಕ ಆನಂದ್‌ ತೇಲ್ತುಂಬ್ಡೆ ಬಂಧನ ಕಾನೂನು ಬಾಹಿರ ಎಂದು ಅಭಿಪ್ರಾಯ ಪಟ್ಟಿರುವ ಪುಣೆ ಕೋರ್ಟ್‌ ತೇಲ್ತುಂಬ್ಡೆ ಬಿಡುಗಡೆಗೆ ಆದೇಶಿಸಿದೆ.

ಜಾಮೀನು ಪಡೆಯಲು ತೇಲ್ತುಂಬ್ಡೆ ಅವರಿಗೆ ಸುಪ್ರೀಂಕೋರ್ಟ್‌ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಜಾಮೀನು ನಿರಾಕರಣೆಯ ಬಳಿಕ ಬಂಧನದ ಆದೇಶ ಹೊರಡಿಸಲು ಬಾಂಬೆ ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ಗೆ ಅಧಿಕಾರವಿದ್ದು, ಆ ಆದೇಶದ ಬಳಿಕವಷ್ಟೇ ಅವರನ್ನು ಬಂಧಿಸಲು ಅವಕಾಶವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Also read: ಬಹಿರಂಗ ಪತ್ರ, ಜನ ಬೆಂಬಲ & ‘ನಗರ ನಕ್ಸಲ್‌’ ಆನಂದ್‌ ತೇಲ್ತುಂಬ್ಡೆ ಬಂಧನ

ಮೋದಿ ಹತ್ಯೆ ಸಂಚು ಹಾಗೂ ಕೋರೆಗಾಂವ್‌ ಹಿಂಸಾಚಾರ ಪ್ರಕರಣದಲ್ಲಿ 'ನಗರ ನಕ್ಸಲ್‌' ಎಂಬ ಆರೋಪ ಹೊರಿಸಿ ತೇಲ್ತುಂಬ್ಡೆ ಅವರನ್ನು ಶನಿವಾರ ಮುಂಜಾನೆ 3.30ರ ಸುಮಾರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪುಣೆ ಪೊಲೀಸರು ಬಂಧಿಸಿದ್ದರು.

ಕೊಚ್ಚಿಯಿಂದ ಮುಂಬೈಗೆ ಬಂದಿಳಿದ ತೇಲ್ತುಂಬ್ಡೆ ಅವರನ್ನು ಡೊಮೆಸ್ಟಿಕ್‌ ಟರ್ಮಿನಲ್‌ನಲ್ಲಿ ಪುಣೆ ಪೊಲೀಸರು ವಶಕ್ಕೆ ಪಡೆದಿದ್ದರು. ತೇಲ್ತುಂಬ್ಡೆ ಅವರನ್ನು ಮೊದಲು ವಿಮಾನ ನಿಲ್ದಾಣ ಪೊಲೀಸ್‌ ಠಾಣೆಗೆ ಕರೆದೊಯ್ದು ಬಳಿಕ ಪುಣೆಗೆ ಕರೆತರಲಾಗಿತ್ತು.

ತೇಲ್ತುಂಬ್ಡೆ ಬಂಧನ ಖಂಡಿಸಿ ವಿವಿಧ ಸಂಘಟನೆಗಳು ದೇಶದ ಬೇರೆ ಬೇರೆ ಭಾಗಗಳಲ್ಲಿ ಶನಿವಾರ ಪ್ರತಿಭಟನೆ ನಡೆಸಿದ್ದವು. ಈ ಬಂಧನ ವಿರೋಧಿಸಿ ಚಿಂತಕ ನೋಮ್‌ ಚಾಮ್‌ಸ್ಕಿ ಸೇರಿದಂತೆ ಹಲವರು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು.

Also read: ತೇಲ್ತುಂಬ್ಡೆ ಬಿಡುಗಡೆಗಾಗಿ ವಿಶ್ವಸಂಸ್ಥೆಗೆ ಮೊರೆ; ಚಾಮ್‌ಸ್ಕಿ & 140ಕ್ಕೂ ಹೆಚ್ಚು ಸಂಸ್ಥೆಗಳಿಂದ ಪತ್ರ

Also read: ನಿಲ್ಲದ ‘ನಗರ ನಕ್ಸಲ’ರ ಬಂಧನ ಸರಣಿ; ಮುಂಬೈನಲ್ಲಿ ಮುಂಜಾನೆ 3.30ಕ್ಕೆ ತೇಲ್ತುಂಬ್ದೆ ಬಂಧನ