samachara
www.samachara.com
ವಿಶ್ವೇಶ್ವರ ಭಟ್‌ ಆಹ್ವಾನಕ್ಕೆ ವಿರೋಧ; ಕನ್ನಡ ವಿ.ವಿ. ಬೆಳ್ಳಿಹಬ್ಬ ಸಮಾರೋಪ ರದ್ದು
ಸುದ್ದಿ ಸಾರ

ವಿಶ್ವೇಶ್ವರ ಭಟ್‌ ಆಹ್ವಾನಕ್ಕೆ ವಿರೋಧ; ಕನ್ನಡ ವಿ.ವಿ. ಬೆಳ್ಳಿಹಬ್ಬ ಸಮಾರೋಪ ರದ್ದು

ವಿಶ್ವೇಶ್ವರ ಭಟ್‌ ಆಹ್ವಾನಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಕನ್ನಡ ವಿ.ವಿ. ಬೆಳ್ಳಿಹಬ್ಬ ಕಾರ್ಯಕ್ರಮವನ್ನೇ ರದ್ದು ಮಾಡಿದೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬದ ಸಮಾರೋಪ ಸಮಾರಂಭಕ್ಕೆ ಪತ್ರಕರ್ತ ವಿಶ್ವೇಶ್ವರ ಭಟ್‌ ಅವರನ್ನು ಆಹ್ವಾನಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಈ ಕಾರ್ಯಕ್ರಮವನ್ನೇ ರದ್ದು ಮಾಡಲಾಗಿದೆ.

ಜನವರಿ 31ರಂದು 'ಕವಿ ಕಾವ್ಯ ಸಂಭ್ರಮ' ಹಾಗೂ ಫೆಬ್ರುವರಿ 1ರಂದು ಬೆಳ್ಳಿಹಬ್ಬದ ಸಮಾರೋಪ ಸಮಾರಂಭ ನಿಗದಿಯಾಗಿತ್ತು. 'ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆಗಿದ್ದರಿಂದ ಬೆಳ್ಳಿಹಬ್ಬ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಕುಲಪತಿ ಮಲ್ಲಿಕಾ ಘಂಟಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ವಿಶ್ವೇಶ್ವರ ಭಟ್‌ ಆಹ್ವಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಕನ್ನಡ ವಿಶ್ವವಿದ್ಯಾಲಯದ ‘ಬಯಲು ಚಿಂತನ ಸಂಶೋಧನಾ ವಿದ್ಯಾರ್ಥಿ ಬಳಗ’ದ ವಿದ್ಯಾರ್ಥಿಗಳು ಸೋಮವಾರ ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಎದುರು ಪ್ರತಿಭಟನೆ ನಡೆಸಿ ತಮ್ಮ ವಿರೋಧ ಹೊರಹಾಕಿದ್ದರು. ಸಮಾರಂಭದಿಂದ ವಿಶ್ವೇಶ್ವರ ಭಟ್‌ ಹೆಸರನ್ನು ಕೈ ಬಿಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದರು.

ವಿದ್ಯಾರ್ಥಿಗಳು ಸಲ್ಲಿಸಿದ್ದ ಮನವಿ ಪತ್ರ
ವಿದ್ಯಾರ್ಥಿಗಳು ಸಲ್ಲಿಸಿದ್ದ ಮನವಿ ಪತ್ರ

Also read: ಬಹುತ್ವ, ಪರಿನಿಯಮ, ವಿಶ್ವೇಶ್ವರ ಭಟ್‌ ಆಹ್ವಾನ & ಮಲ್ಲಿಕಾ ಘಂಟಿ ಸಮರ್ಥನೆ

ತಮ್ಮ ವಿರೋಧ ತೋರಿ ಪ್ರಾಧ್ಯಾಪಕರ ಪತ್ರ
ತಮ್ಮ ವಿರೋಧ ತೋರಿ ಪ್ರಾಧ್ಯಾಪಕರ ಪತ್ರ

ಇದಲ್ಲದೆ, ವಿಶ್ವವಿದ್ಯಾಲಯದ ಕೆಲ ಪ್ರಾಧ್ಯಾಪಕರೂ ವಿಶ್ವೇಶ್ವರ ಭಟ್‌ ಆಹ್ವಾನಕ್ಕೆ ವಿರೋಧ ವ್ಯಕ್ತಪಡಿಸಿ ಸೋಮವಾರ ಕುಲಪತಿಗಳಿಗೆ ಪತ್ರ ಬರೆದಿದ್ದರು. ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸಮಾರೋಪ ಸಮಾರಂಭವನ್ನೇ ರದ್ದು ಪಡಿಸಿರುವ ವಿಶ್ವವಿದ್ಯಾಲಯದ ಆಡಳಿತ ಜನವರಿ 30ರಂದು ಘಟಿಕೋತ್ಸವ ನಡೆಸಲು ಮುಂದಾಗಿದೆ.

ಬುಧವಾರ ನಡೆಯಲಿರುವ ಘಟಿಕೋತ್ಸವದಲ್ಲಿ ಇಬ್ಬರಿಗೆ ಡಿ.ಲಿಟ್., 87 ಸಂಶೋಧನಾರ್ಥಿಗಳಿಗೆ ಪಿಎಚ್.ಡಿ., 26 ಜನರಿಗೆ ಎಂ.ಫಿಲ್ ಹಾಗೂ ವಿವಿಧ ಕೋರ್ಸ್ ಮುಗಿಸಿರುವ ಒಟ್ಟು 645 ಜನರಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಮಲ್ಲಿಕಾ ಘಂಟಿ ತಿಳಿಸಿದ್ದಾರೆ. ಇಸ್ರೊ ಮಾಜಿ ಮುಖ್ಯಸ್ಥ, ವಿಜ್ಞಾನಿ ಎ.ಎಸ್. ಕಿರಣ್‌ ಕುಮಾರ್‌ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.