samachara
www.samachara.com
772 ಮಿಲಿಯನ್ ಇ-ಮೇಲ್ ಮಾಹಿತಿ ಸೋರಿಕೆ: ಅಂತರ್ಜಾಲ ಲೋಕವನ್ನು ಬೆಚ್ಚಿ ಬೀಳಿಸಿದ ಸುದ್ದಿ ಇದು
ಸುದ್ದಿ ಸಾರ

772 ಮಿಲಿಯನ್ ಇ-ಮೇಲ್ ಮಾಹಿತಿ ಸೋರಿಕೆ: ಅಂತರ್ಜಾಲ ಲೋಕವನ್ನು ಬೆಚ್ಚಿ ಬೀಳಿಸಿದ ಸುದ್ದಿ ಇದು

ಈವರೆಗಿನ ಸೋರಿಕೆಗಳ ಪೈಕಿ ಅತಿ ದೊಡ್ಡ ಸೋರಿಕೆ ಇದು ಎನ್ನಲಾಗುತ್ತಿದೆ. 772 ಮಿಲಿಯನ್ ಈ-ಮೇಲ್ ಐಡಿ ಹಾಗೂ 22 ಮಿಲಿಯನ್ ಪಾಸ್‌ವರ್ಡ್‌ ಮಾಹಿತಿಗಳು ಕಲೆಕ್ಷನ್#1 ಹೆಸರಿನಲ್ಲಿ ಕಳ್ಳತನವಾಗಿದೆ.

Team Samachara

ಅಂತರ್ಜಾಲ ತಂತ್ರಜ್ಞಾನ ಬೆಳೆದಂತೆಲ್ಲಾ ಹ್ಯಾಕರ್‌ಗಳು ತಮ್ಮ ಕೈಚಳಕ ತೋರಿಸುತ್ತಲೇ ಇದ್ದಾರೆ. ಸಣ್ಣ ಪುಟ್ಟ ಪ್ರಮಾಣ ಮಾಹಿತಿ ಸೋರಿಕೆ ಮೂಲಕ ಹ್ಯಾಕರ್‌ಗಳ ಕರಾಮತ್ತನ್ನು ನಾವು ನೋಡುತ್ತಲೇ ಇದ್ದೇವೆ. ಆದರೆ ಈ ಬಾರಿ ಹ್ಯಾಕರ್‌ಗಳು ಇಡೀ ವಿಶ್ವವೇ ಬೆಚ್ಚಿ ಬೀಳುವಂತಹ ಕೆಲಸವನ್ನು ಮಾಡಿ ಮುಗಿಸಿದ್ದಾರೆ. ಇದನ್ನು ಸಾಫ್ಟ್‌ವೇರ್ ತಜ್ಞರು ಸ್ಪಷ್ಟಪಡಿಸಿದ್ದಾರೆ.

ಈವರೆಗಿನ ಸೋರಿಕೆಗಳ ಪೈಕಿ ಅತಿ ದೊಡ್ಡ ಸೋರಿಕೆ ಇದು ಎನ್ನಲಾಗುತ್ತಿದೆ. 772 ಮಿಲಿಯನ್ ಈ-ಮೇಲ್ ಐಡಿ ಹಾಗೂ 22 ಮಿಲಿಯನ್ ಪಾಸ್‌ವರ್ಡ್‌ ಮಾಹಿತಿಗಳು ಕಲೆಕ್ಷನ್#1 ಹೆಸರಿನಲ್ಲಿ ಕಳ್ಳತನವಾಗಿದೆ. ಈ ಕುರಿತು ನಿಧಾನವಾಗಿ ಸುದ್ದಿ ಹರಡಲು ಆರಂಭವಾಗಿದೆ.

"ಈ-ಮೇಲ್ ಮಾಹಿತಿಗಳನ್ನು ಅಪ್ಲೋಡ್ ಮಾಡುವಾಗ ಮಾಹಿತಿ ಸೋರಿಕೆಯಾಗಿದೆ. ಸುಮಾರು 2.69 ಬಿಲಿಯನ್ ಸಾಲುಗಳಲ್ಲಿದ್ದ 772 ಮಿಲಿಯನ್ ಈ-ಮೇಲ್ ಐಡಿ ಹಾಗೂ 22 ಮಿಲಿಯನ್ ಪಾಸ್‌ವರ್ಡ್‌ಗಳ ಮಾಹಿತಿ ಸೋರಿಕೆಯಾಗಿದೆ. 12000 ಕಡತಗಳಲ್ಲಿರುವ ಸುಮಾರು 87 ಜಿಬಿ ಮಾಹಿತಿಯನ್ನು ಕದಿಯಲಾಗಿದೆ" ಎಂದು ಮೈಕ್ರೋಸಾಪ್ಟ್ ಪ್ರಾಂತೀಯ ನಿರ್ದೇಶಕ ಟ್ರೋಯ್ ಹಂಟ್ ತನ್ನ ‘ಟ್ರೋನಿ ಹಂಟ್.ಕಾಮ್’ನಲ್ಲಿ ಬರೆದುಕೊಂಡಿದ್ದಾರೆ.

"ಈ ಮೇಲ್ ಡಾಟಾಗಳನ್ನು ಡಂಪ್ ಮಾಡುವ ಮೊದಲ ಹಂತದಲ್ಲಿ ಈ ಪ್ರಮಾಣದ ಮಾಹಿತಿಯನ್ನು ಕದಿಯಲಾಗಿದೆ. ನಂತರದ ಡಂಪ್‌ನಲ್ಲಿ ಎಷ್ಟು ಪ್ರಮಾಣದ ಈಮೇಲ್ ಐಡಿ ಮಾಹಿತಿಗಳು ಕಳ್ಳತನವಾಗಿದೆ ಎಂಬ ಕುರಿತು ಇನ್ನೂ ತಿಳಿದುಬಂದಿಲ್ಲ. ಹೀಗೆ ಕದಿಯಲಾದ ಈ-ಮೇಲ್ ಮಾಹಿತಿಗಳನ್ನು 18ಕ್ಕೂ ಹೆಚ್ಚು ಉಲ್ಲಂಘಿತ ವೆಬ್‌ಸೈಟಿನಲ್ಲಿ ಹಾಕಲಾಗಿದೆ,” ಎಂದು ಅವರು ತಿಳಿಸಿದ್ದಾರೆ.

ನಿಮ್ಮ ಈ-ಮೇಲ್ ಐಡಿ ಹ್ಯಾಕ್ ಆಗಿದೆಯೇ..? ಪರೀಕ್ಷಿಸುವುದು ಹೇಗೆ..?

772 ಮಿಲಿಯನ್ ಇ-ಮೇಲ್ ಮಾಹಿತಿ ಸೋರಿಕೆ: ಅಂತರ್ಜಾಲ ಲೋಕವನ್ನು ಬೆಚ್ಚಿ ಬೀಳಿಸಿದ ಸುದ್ದಿ ಇದು

ಅಂತರ್ಜಾಲದಲ್ಲಿ haveibeenpwned.com ವೆಬ್‌ಸೈಟ್‌ಗೆ ಲಾಗಿನ್ ಆಗಿ. ಅಲ್ಲಿ ಡಾಟಾ ಎಂಟ್ರಿ ಬಾಕ್ಸ್ ನಲ್ಲಿ ನಿಮ್ಮ ಪ್ರಚಲಿತ ಈ-ಮೇಲ್ ಐಡಿಯನ್ನು ಎಂಟ್ರಿ ಮಾಡಿ, ನಂತರ pwned ಬಟನ್ ಒತ್ತಿರಿ. ನಿಮ್ಮ ಈ-ಮೇಲ್ ಮಾಹಿತಿ ಸೋರಿಕೆಯಾಗಿದೆಯೇ ಎಂಬ ಮಾಹಿತಿಯನ್ನು ಈ ವೆಬ್‌ಸೈಟ್ ನೀಡುತ್ತದೆ. ತಕ್ಷಣ ನೀವು ನಿಮ್ಮ ಪಾಸ್‌ವರ್ಡ್‌ ಅನ್ನು ಬದಲಿಸಿಕೊಂಡರೆ ಯಾವುದೇ ತೊಂದರೆ ಇಲ್ಲ.