‘ಬ್ಯಾಡ್ ನ್ಯೂಸ್’: 15 ದಿನಗಳಲ್ಲಿ ಕುಸಿದ ರೂಪಾಯಿ; ಸದ್ಯ ಏಷಿಯಾದಲ್ಲೇ ಕಳಪೆ ಕರೆನ್ಸಿ!
ಸುದ್ದಿ ಸಾರ

‘ಬ್ಯಾಡ್ ನ್ಯೂಸ್’: 15 ದಿನಗಳಲ್ಲಿ ಕುಸಿದ ರೂಪಾಯಿ; ಸದ್ಯ ಏಷಿಯಾದಲ್ಲೇ ಕಳಪೆ ಕರೆನ್ಸಿ!

ರೂಪಾಯಿ 2017ರ ತ್ರೈಮಾಸಿಕದಲ್ಲಿ ಡಾಲರ್ ವಿರುದ್ಧ ಚೇತರಿಕೆ ಕಂಡಿತ್ತು. ಆದರೆ ನಂತರದ ದಿನಗಳಲ್ಲಿ ನಿರಂತರವಾಗಿ ಡಾಲರ್ ಎದುರಿನ ರೂಪಾಯಿ ಮೌಲ್ಯ ಕುಸಿಯುತ್ತಾ ಸಾಗಿದೆ. 

ಇದು ಕಳೆದ 15 ದಿನಗಳಲ್ಲಿ ಭಾರತ ರೂಪಾಯಿ ಸುತ್ತ ನಡೆದ ಸದ್ದಿಲ್ಲದ ಬೆಳವಣಿಗೆ. ಏಷಿಯಾ ಖಂಡದ ಕರೆನ್ಸಿಗಳ ಪೈಕಿ ಅತ್ಯಂತ ಸದೃಢ ಎನ್ನಿಸಿಕೊಂಡಿದ್ದ ರೂಪಾಯಿ ಅತ್ಯಂತ ಕಳಪೆ ಕರೆನ್ಸಿ ಎನ್ನಿಸಿಕೊಂಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ತೈಲ ಬೆಲೆ, ಬೇಡಿಕೆ ಆಧಾರದಲ್ಲಿ ಜಾಸ್ತಿಯಾಗಿರುವ ತೈಲದ ಆಮದು ಇದಕ್ಕೆ ಕಾರಣ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಇದರ ಜತೆಗೆ ರೈತರ ಸಾಲ ಮನ್ನಾದಂತಹ ಜನಪ್ರಿಯ ಕಲ್ಯಾಣ ಕಾರ್ಯಕ್ರಮಗಳೂ ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ.

ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರ, ತೈಲ ವರ್ಧಿತ ಪರಿಣಾಮಗಳು ಹಾಗೂ ಕೃಷಿ ವಿಲೇವಾರಿ ಮೇಲಿನ ಹೆಚ್ಚಿನ ಹೊರೆಯಿಂದಾಗಿ ರೂಪಾಯಿಯ ಮೌಲ್ಯ ಕುಸಿಯುತ್ತಿದೆ. “ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಯುವವರೆಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಕಾಣುವುದು ಸಾಧ್ಯವಿಲ್ಲ,” ಎಂದು ಸಿಂಗಾಪುರದ ಮಿಜುಹೋ ಬ್ಯಾಂಕಿನ ಅರ್ಥಶಾಸ್ತ್ರ ಹಾಗೂ ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ವಿಷ್ಣು ವರದನ್ ತಿಳಿಸಿದ್ದಾರೆ.

ರೂಪಾಯಿ 2017 ರ ತ್ರೈಮಾಸಿಕದಲ್ಲಿ ಡಾಲರ್ ವಿರುದ್ಧ ಚೇತರಿಕೆ ಕಂಡಿತ್ತು. ಆದರೆ ನಂತರದ ದಿನಗಳಲ್ಲಿ ನಿರಂತರವಾಗಿ ಡಾಲರ್ ಎದುರಿನ ರೂಪಾಯಿ ಮೌಲ್ಯ ಕುಸಿಯುತ್ತಾ ಸಾಗಿದೆ.

ರೂಪಾಯಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವುದು ತೈಲ ಬೆಲೆಗಳ ಮೇಲೂ ವ್ಯತಿರೀಕ್ತ ಪರಿಣಾಮ ಬೀರುತ್ತಿದೆ ಎಂದು ಗೋಲ್ಡ್ಮನ್ ಸ್ಯಾಚ್ಸ್ ಗ್ರೂಪ್ ಇಂಕ್ ಭವಿಷ್ಯ ನುಡಿದಿದೆ. ಪರಿಣಾಮ 384 ಬಿಲಿಯನ್ ಮೌಲ್ಯದ ಆಸ್ತಿ ಹೊಂದಿರುವ ಅಬರ್ಡೀನ್ ಸ್ಟ್ಯಾಂಡರ್ಡ್ ಇನ್ವೆಸ್ಟ್‌ಮೆಂಟ್ ಕಂಪೆನಿಗೆ ಭಾರತ ತನ್ನ ಸಾಲವನ್ನು ಸರಿದೂಗಿಸಲು ಬಾಂಡ್‌ಗಳನ್ನು ಮಾರಾಟ ಮಾಡಲು ಹೊರಟಿದೆ. ಅಲ್ಲದೆ ಬ್ಲೂಮ್ಬರ್ಗ್ ಸಮೀಕ್ಷೆಯಂತೆ, ಇದೇ ಮಾರ್ಚ್ 31ರ ವೇಳೆಗೆ ಭಾರತ ರೂಪಾಯಿ ಮೌಲ್ಯ ಡಾಲರ್ ಎದುರಿಗೆ 71.20 ಗೆ ಇಳಿಯಲಿದೆ ಎಂದು ಭವಿಷ್ಯ ನುಡಿದಿದೆ.

ಭಾರತದ ರೂಪಾಯಿ ಕಳೆದ ವರ್ಷದಂತೆ ಈ ವರ್ಷವೂ ಸಹ ಕಳಪೆ ಪ್ರದರ್ಶನವನ್ನೇ ನೀಡುತ್ತಿದೆ. ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲಗಳ ಮೇಲೆ ಹೆಚ್ಚು ಅವಲಂಭಿವಾಗಿರುವುದೇ ಇದಕ್ಕೆ ಕಾರಣ. ಅಲ್ಲದೆ, “ಕಳೆದ ವರ್ಷಕ್ಕಿಂತ ಈ ವರ್ಷ ದೇಶೀಯ ಅಂಶಗಳು ಸಹ ರೂಪಾಯಿ ಮೇಲೆ ಹೆಚ್ಚು ಋಣಾತ್ಮಕ ಪರಿಣಾಮ ಬೀರಿದೆ,” ಎಂದು ಸಿಂಗಾಪುರದ ಐಎನ್‌ಜಿ ಗ್ರೂಪ್‌ನ ಅರ್ಥಶಾಸ್ತ್ರಜ್ಞ ಪ್ರಕಾಶ್ ಸಕ್ಪಾಲ್ ತಿಳಿಸಿದ್ದಾರೆ.