ಶಾ ಫೈಸಲ್ ರಾಜೀನಾಮೆ ಬಿಜೆಪಿ ಸರಕಾರದ ವೈಫಲ್ಯವನ್ನು ತೋರುತ್ತಿದೆ: ಪಿ.ಚಿದಂಬರಂ
ಸುದ್ದಿ ಸಾರ

ಶಾ ಫೈಸಲ್ ರಾಜೀನಾಮೆ ಬಿಜೆಪಿ ಸರಕಾರದ ವೈಫಲ್ಯವನ್ನು ತೋರುತ್ತಿದೆ: ಪಿ.ಚಿದಂಬರಂ

“ಶಾ ಫೈಸಲ್ ಹೇಳಿರುವ ಮಾತು ಅಕ್ಷರಶಃ ಸತ್ಯ. ಮತ್ತು ಅದು ಬಿಜೆಪಿ ಸರಕಾರಕ್ಕೆ ಕಳಂಕ. ಫೈಸಲ್‌ ಅವರ ಆಕ್ರೋಶ ಮತ್ತು ಅಸಮಾಧಾನಗಳನ್ನು ಜಗತ್ತು ನೆನಪಿಟ್ಟುಕೊಳ್ಳುತ್ತದೆ...

ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿರುವ ಶಾ ಫೈಸಲ್ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ, ಬಿಜೆಪಿ ಸರಕಾರದ ಬಗ್ಗೆ ಫೈಸಲ್‌ ಹೇಳಿರುವ ಮಾತುಗಳ ಅಕ್ಷರಶಃ ಸತ್ಯ ಎಂದಿದ್ದಾರೆ.

ಫೈಸಲ್‌ ನಿರ್ಧಾರ ಹಾಗೂ ಕಾಶ್ಮೀರದ ಸ್ಥಿತಿಯ ಬಗ್ಗೆ ಟ್ವೀಟ್‌ ಮಾಡಿರುವ ಚಿದಂಬರಂ, “ಫೈಸಲ್‌ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಅವರು ಹೇಳಿರುವ ಮಾತು ಅಕ್ಷರಶಃ ಸತ್ಯ. ಮತ್ತು ಅದು ಬಿಜೆಪಿ ಸರಕಾರಕ್ಕೆ ಕಳಂಕ. ಫೈಸಲ್‌ ಅವರ ಆಕ್ರೋಶ ಮತ್ತು ಅಸಮಾಧಾನಗಳನ್ನು ಜಗತ್ತು ನೆನಪಿಟ್ಟುಕೊಳ್ಳುತ್ತದೆ” ಎಂದಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ನಿಲ್ಲದ ಭಾರತೀಯ ಮುಸ್ಲಿಮರ ಹತ್ಯೆ ಹಾಗೂ ಹಿಂಸಾಚಾರವನ್ನು ವಿರೋಧಿಸಿ ಐಎಎಸ್ ಅಧಿಕಾರಿ ಶಾ ಫೈಸಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ಫೈಸಲ್‌ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ಮೂಲದ ಶಾ ಫೈಸಲ್, 2009ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದರು. 2009ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪರೀಕ್ಷೆಯಲ್ಲಿ ಫೈಸಲ್‌ ಮೊದಲ ರ್ಯಾಂಕ್‌ ಗಳಿಸಿದ್ದರು. ಕಾಶ್ಮೀರ ಕಣಿವೆಯಲ್ಲಿ ನಿಲ್ಲದ ಮುಸ್ಲಿಮರ ಕಗ್ಗೊಲೆಗಳು ಹಾಗೂ ಇದನ್ನು ತಡೆಯುವ ಬಗ್ಗೆ ಕೇಂದ್ರ ಸರಕಾರ ರಾಜಕೀಯ ಇಚ್ಛಾಶಕ್ತಿ ತೋರದೇ ಇರುವುದನ್ನು ವಿರೋಧಿಸಿ ಫೈಸಲ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.