samachara
www.samachara.com
ಶಾಂತಿ ಮಾತುಕತೆಗೆ ಭಾರತ ಮನಸ್ಸು ಮಾಡುತ್ತಿಲ್ಲ: ಇಮ್ರಾನ್ ಖಾನ್ ದೂರು
ಸುದ್ದಿ ಸಾರ

ಶಾಂತಿ ಮಾತುಕತೆಗೆ ಭಾರತ ಮನಸ್ಸು ಮಾಡುತ್ತಿಲ್ಲ: ಇಮ್ರಾನ್ ಖಾನ್ ದೂರು

ಖಾಸಗಿ ಮಾದ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಶಾಂತಿ ಮಾತುಕತೆಗೆ ಸಂಬಂಧಿಸಿದಂತೆ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ಪಾಕಿಸ್ತಾನ ಎರಡು ಹೆಜ್ಜೆ ಮುಂದೆ ಬರಲು ಸಿದ್ಧವಾಗಿದೆ ಎಂದಿದಾರೆ ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್.

ಕಾಶ್ಮೀರ ವಿವಾದ ಕುರಿತಂತೆ ಭಾರತದ ಜತೆ ಶಾಂತಿ ಮಾತುಕತೆಗೆ ಪಾಕಿಸ್ತಾನ ಸಿದ್ಧವಾಗಿದೆ. ಆದರೆ ಭಾರತ ಸರಕಾರ ಈ ಕುರಿತು ಮನಸ್ಸು ಮಾಡುತ್ತಿಲ್ಲ ಎಂದು ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.

ಟರ್ಕೀಶ್ ಮೂಲದ ‘ಟಿಆರ್‌ಟಿ ವರ್ಲ್ಡ್’ ಎಂಬ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಇಮ್ರಾನ್ ಖಾನ್, "ಅಣುಬಾಂಬ್ ಇರುವ ಯಾವುದೇ ಎರಡು ದೇಶಗಳು ಯುದ್ಧ ಮಾಡಿದರೆ ಅದು ಆತ್ಮಹತ್ಯೆಗೆ ಸಮಾನ. ಶೀತಲ ಸಮರಗಳೂ ಸಹ ಯಾವುದೇ ಸಂದರ್ಭದಲ್ಲಿ ದೊಡ್ಡ ಯುದ್ಧಗಳಿಗೆ ಕಾರಣವಾಗಬಹುದು. ಇದನ್ನು ತಪ್ಪಿಸಲು ಶಾಂತಿ ಮಾತುಕತೆಯೊಂದೇ ದಾರಿ," ಎಂದಿದ್ದಾರೆ.

"ಶಾಂತಿ ಮಾತುಕತೆಗೆ ಸಂಬಂಧಿಸಿದಂತೆ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ಪಾಕಿಸ್ತಾನ ಎರಡು ಹೆಜ್ಜೆ ಮುಂದೆ ಬರಲು ಸಿದ್ಧವಾಗಿದೆ. ಆದರೆ ಭಾರತ ಸರಕಾರ ಸರಕಾರ ಪಾಕಿಸ್ತಾನದ ಮನವಿಯನ್ನು ತಿರಸ್ಕರಿಸುತ್ತಿದೆ. ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಿವೆ ಹಾಗೂ ಫಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಭಾರತ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬೆಳವಣಿಗೆಗಳು ಎರಡೂ ದೇಶಗಳ ನಡುವಿನ ಶಾಂತಿ ಮಾತುಕತೆಗೆ ತೊಡಕಾಗಿ ಪರಿಣಾಮಿಸಿದೆ. ಪರಿಣಾಮ 2017 ರಲ್ಲೇ ನಡೆಯಬೇಕಿದ್ದ ದ್ವಿಪಕ್ಷೀಯ ಮಾತುಕತೆಯನ್ನೂ ಭಾರತ ನಿರಾಕರಿಸಿದೆ,” ಎಂದು ಅವರು ದೂರಿದ್ದಾರೆ.