‘ಪ್ರಾದೇಶಿಕ ಪಕ್ಷಗಳನ್ನು ಸರಿಯಾಗಿ ನಡೆಸಿಕೊಳ್ಳಿ’: ಮೈತ್ರಿ ಬಗ್ಗೆ ಕಾಂಗ್ರೆಸ್‌ ಎಚ್ಚರಿಸಿದ ಎಚ್.ಡಿ. ದೇವೇಗೌಡ
ಸುದ್ದಿ ಸಾರ

‘ಪ್ರಾದೇಶಿಕ ಪಕ್ಷಗಳನ್ನು ಸರಿಯಾಗಿ ನಡೆಸಿಕೊಳ್ಳಿ’: ಮೈತ್ರಿ ಬಗ್ಗೆ ಕಾಂಗ್ರೆಸ್‌ ಎಚ್ಚರಿಸಿದ ಎಚ್.ಡಿ. ದೇವೇಗೌಡ

“ಜಾತ್ಯತೀತ ಪಕ್ಷಗಳಿಗೆ ಕಾಂಗ್ರೆಸ್‌ ದೊಡ್ಡಣ್ಣನಿದ್ದಂತೆ. ಕಾಂಗ್ರೆಸ್‌ ತನ್ನ ಜತೆಗಿರುವ ಪ್ರಾದೇಶಿಕ ಪಕ್ಷಗಳನ್ನು ಸರಿಯಾಗಿ ನಡೆಸಿಕೊಳ್ಳಬೇಕು...

ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಕುರಿತಂತೆ ಪದೇ ಪದೇ ಕಾಂಗ್ರೆಸ್ ಪಕ್ಷವನ್ನು ಎಚ್ಚರಿಸುತ್ತಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, “ಲೋಕಸಭೆಯ ಮೈತ್ರಿಗಿಂತಲೂ ಮುನ್ನಾ ಕಾಂಗ್ರೆಸ್‌ ಪ್ರಾದೇಶಿಕ ಪಕ್ಷಗಳನ್ನು ಸರಿಯಾಗಿ ನಡೆಸಿಕೊಳ್ಳಬೇಕಾದ್ದು ಮುಖ್ಯ” ಎಂದು ಹೇಳಿದ್ದಾರೆ.

ಗುರುವಾರ ರಾತ್ರಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ದೇವೇಗೌಡ, “ಜಾತ್ಯತೀತ ಪಕ್ಷಗಳಿಗೆ ಕಾಂಗ್ರೆಸ್‌ ದೊಡ್ಡಣ್ಣನಿದ್ದಂತೆ. ಕಾಂಗ್ರೆಸ್‌ ತನ್ನ ಜತೆಗಿರುವ ಪ್ರಾದೇಶಿಕ ಪಕ್ಷಗಳನ್ನು ಸರಿಯಾಗಿ ನಡೆಸಿಕೊಳ್ಳಬೇಕು. ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ವಿಚಾರ ಇನ್ನೂ ಮಾತುಕತೆ ಹಂತದಲ್ಲಿದೆ” ಎಂದಿದ್ದಾರೆ.

Also read: 2:1 ಅನುಪಾತದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಸೀಟು ಹಂಚಿಕೆ: 15 ದಿನಗಳಲ್ಲಿ ಫೈನಲ್‌

ಮೈತ್ರಿ ಸರಕಾರ ನಡೆಸುವುದು ಸುಲಭವಿಲ್ಲ ಎಂದು ಹೇಳಿರುವ ದೇವೇಗೌಡ, ಮೈತ್ರಿ ಸರಕಾರವನ್ನು ನಡೆಸುತ್ತಿರುವ ಕುಮಾರಸ್ವಾಮಿ ಈ ಕಷ್ಟಗಳನ್ನೆಲ್ಲಾ ಸಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಕುರಿತಂತೆ ಸಂಸತ್‌ನ ಚಳಿಗಾಲದ ಅಧಿವೇಶನದ ಬಳಿಕ ಕಾಂಗ್ರೆಸ್‌ ನಾಯಕರೊಂದಿಗೆ ಮಾತನಾಡುವುದಾಗಿ ದೇವೇಗೌಡ ಹೇಳಿದ್ದಾರೆ.

ಕರ್ನಾಟಕದಲ್ಲಿ 2:1 ಅನುಪಾತದಲ್ಲಿ ಸೀಟು ಹಂಚಿಕೆ ಆಗಬೇಕೆಂದು ಹೇಳಿರುವ ಜೆಡಿಎಸ್‌ ಕನಿಷ್ಠ 10 ಸೀಟುಗಳನ್ನು ಬಿಟ್ಟುಕೊಡಬೇಕೆಂದು ಕಾಂಗ್ರೆಸ್‌ ಅನ್ನು ಒತ್ತಾಯಿಸುತ್ತಿದೆ.