samachara
www.samachara.com
ಸಾಹಿತ್ಯ ಸಮ್ಮೇಳನದಲ್ಲಿ ಪೂರ್ಣ ಕುಂಭ ಮೆರವಣಿಗೆ ಕೈಬಿಡಲು ಆಗ್ರಹ
ಸುದ್ದಿ ಸಾರ

ಸಾಹಿತ್ಯ ಸಮ್ಮೇಳನದಲ್ಲಿ ಪೂರ್ಣ ಕುಂಭ ಮೆರವಣಿಗೆ ಕೈಬಿಡಲು ಆಗ್ರಹ

ಸಂಸ್ಕೃತಿ, ಆಚರಣೆಗಳ ಹೆಸರಿನಲ್ಲಿ ಹೀಗೆ ಮೆರವಣಿಗೆ ಮಾಡಿಸುವುದಕ್ಕೂ, ಮಾರುಕಟ್ಟೆ ಸಾಮಗ್ರಿಗಳ ಪ್ರಚಾರಕ್ಕೆ ಜಾಹಿರಾತುಗಳಲ್ಲಿ ಹೆಣ್ಣನ್ನು ಬಳಸುವುದಕ್ಕೂ ಏನೂ ವ್ಯತ್ಯಾಸ ಇರುವುದಿಲ್ಲ.

ಜನವರಿ 4ರಂದು ಆರಂಭವಾಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 1001 ಮಹಿಳೆಯರ ಪೂರ್ಣ ಕುಂಭ ಮೆರವಣಿಗೆಯನ್ನು ಆಯೋಜಿಸಲಾಗಿದೆಯಷ್ಟೆ.‌

ಈ ಬಗ್ಗೆ ಈಗಾಗಲೇ ರಾಜ್ಯದ ಪ್ರಜ್ಞಾವಂತ ಜನರೆಲ್ಲರೂ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದು, ಈ ಪೂರ್ಣಕುಂಭ ಮೆರವಣಿಗೆ ಕೈ ಬಿಡುವಂತೆ ಆಗ್ರಹ ಪಡಿಸಲಾಗಿದೆ.

ಇಂತಹ ಮೆರವಣಿಗೆಯು ಮಹಿಳೆಯರ ಶೋಷಣೆಯ ಪ್ರತೀಕ ಆಗಿರುತ್ತದೆ. ಸ್ವಸಹಾಯ ಸಂಘಗಳ ಸದಸ್ಯರು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಹೀಗೆ ಮೆರವಣಿಗೆಯಲ್ಲಿ ಪ್ರದರ್ಶಕ ವಸ್ತುಗಳಂತೆ ಬಳಕೆ ಮಾಡುವುದು ಆಧುನಿಕ ಸಮಾಜದ ಅಣಕವಾಗಿರುತ್ತದೆ.

ಸಂಸ್ಕೃತಿ, ಆಚರಣೆಗಳ ಹೆಸರಿನಲ್ಲಿ ಹೀಗೆ ಮೆರವಣಿಗೆ ಮಾಡಿಸುವುದಕ್ಕೂ, ಮಾರುಕಟ್ಟೆ ಸಾಮಗ್ರಿಗಳ ಪ್ರಚಾರಕ್ಕೆ ಜಾಹಿರಾತುಗಳಲ್ಲಿ ಹೆಣ್ಣನ್ನು ಬಳಸುವುದಕ್ಕೂ ಏನೂ ವ್ಯತ್ಯಾಸ ಇರುವುದಿಲ್ಲ.

ಕನ್ನಡ ಸಾಹಿತ್ಯವು ಮಹಿಳೆಯರನ್ನು ಗೌರವದಿಂದ ಕಂಡಿದೆ. ಬೇಂದ್ರೆ, ಕಾರಂತ, ಕುವೆಂಪು, ಗೋಕಾಕ, ತೀನಂಶ್ರೀ, ಮಾಸ್ತಿ, ಕೆ.ಎಸ್.ನರಸಿಂಹಸ್ವಾಮಿ, ನಿಸಾರ್ ಅಹಮದ್, ಜಿ.ಎಸ್.ಎಸ್. ಕೀರಂ, ಮೊದಲಾದ ಎಲ್ಲ ಮೇರು ಸಾಹಿತಿಗಳು ಮಹಿಳೆಯರಿಗೆ ಸಾಹಿತ್ಯಕ ವೇದಿಕೆಗಳಲ್ಲಿ ಸಮಾನ ಸ್ಥಾನ ಮಾನ ಕೊಡಬೇಕು, ಸಮಾಜದಲ್ಲಿ ಗೌರವದಿಂದ ಕಾಣಬೇಕು ಎಂದು ಒತ್ತಿ ಹೇಳಿದ್ದಾರೆ. ಈಗ ಅಂತಹ ಸಾಹಿತ್ಯಕ ಪರಂಪರೆಯ ಉತ್ಸವ ಮಾಡುವಾಗ ಅದಕ್ಕೆ ವಿರುದ್ಧವಾಗಿ ಮಹಿಳೆಯರ ಮೆರವಣಿಗೆ ಮಾಡಿಸಿದರೆ ಅದು ಸಾಹಿತ್ಯಕ್ಕೆ, ಸಾಹಿತ್ಯ ಪರಿಷತ್ತಿನ ಆಶಯಗಳಿಗೆ ಹಾಗೂ ಕನ್ನಡ ಕಟ್ಟಿದ ಧೀಮಂತರ ನಡೆ- ನುಡಿಗೆ ಮಾಡುವ ಅವಮಾನ ಆಗುತ್ತದೆ.

ಈ ಕುರಿತು ನಾಡಿನ ಪ್ರಜ್ಞಾವಂತರೆಲ್ಲ ತಮ್ಮ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ದನಿಯನ್ನು ಕೇಳಿ ತಾವುಗಳು ಮೆರವಣಿಗೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆ.

ಈ ಮಹಿಳೆಯರನ್ನು ಸಾಹಿತ್ಯ ಸಮ್ಮೇಳನದಲ್ಲಿ ತೊಡಗಿಸಿಕೊಳ್ಳುವ ನಿಜವಾದ ಕಾಳಜಿ ಇದ್ದಲ್ಲಿ ಅವರನ್ನೆಲ್ಲ ಕರೆಸಿ, ಮೆರವಣಿಗೆಯ ಖರ್ಚಿನ ಬದಲು ಪ್ರತಿಯೊಬ್ಬರಿಗೂ 500 ರೂಪಾಯಿಗಳ ಪುಸ್ತಕ ಕೊಡುಗೆ ಕೊಡಿ. ಇದು ನೀವು ಮಾಡಬಹುದಾದ ಬಹುದೊಡ್ಡ ಸಾಹಿತ್ಯ ಸೇವೆ. ಹೀಗೆ ಮಾಡಿದರೆ ನಾಡು ಎಂದೂ ಮರೆಯದಂತಹ ಮೇಲ್ಪಂಕ್ತಿ ಹಾಕಿಕೊಟ್ಟಂತೆ ಆಗುತ್ತದೆ.

ಮಹಿಳೆಯರು ತಾವಾಗೆ ಬಂದರೆ ಮೆರವಣಿಗೆ ಮಾಡುತ್ತೇವೆ. ಬರಿ ಮಹಿಳೆಯರಲ್ಲ, ಪುರುಷರು, ಟ್ರಾನ್ಸ್ ಜೆಂಡರ್ ಹೀಗೆ ಯಾರು ಬಂದರೂ ಅವಕಾಶ ನೀಡಲಾಗುವುದು ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನು ಬಳಿಗಾರ್ ಹೇಳಿರುವುದಾಗಿ ತಿಳಿದು ಬಂದಿದೆ.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಅಧ್ಯಕ್ಷರು ಹೀಗೆ ಹೇಳುವುದು ಪರಿಷತ್ತಿಗೆ ಗೌರವ ತರುವ ವಿಷಯ ಅಲ್ಲ. ಅಲಂಕಾರ, ಮೆರವಣಿಗೆಗಳ ಮೂಲಕ ಮಹಿಳೆ ತನ್ನ ಅಸ್ಮಿತೆ ಕಳೆದುಕೊಳ್ಳದೆ, ಶಿಕ್ಷಣ, ಸಾಹಿತ್ಯದ ಮೂಲಕ ಅಸ್ಮಿತೆ ಗಳಿಸುವಂತೆ ತಿಳಿಸಿ ಹೇಳಬೇಕಾದ್ದು ಸಾಹಿತ್ಯ ಪರಿಷತ್ತಿನ ಜವಾಬ್ದಾರಿ ಆಗಿರುತ್ತದೆ. ಸಾಹಿತ್ಯ ಎಂದರೆ ಬರಿದೇ ಅಕ್ಷರವಲ್ಲ. ಅದು ಬದುಕಿನ ಪ್ರತಿಬಿಂಬ ಮತ್ತು ಬದುಕಿಗೆ ದಾರಿದೀಪ. ಹೀಗಿರುವಾಗ ಅಧ್ಯಕ್ಷರಿಂದ ಇನ್ನೂ ಹೆಚ್ಚಿನ ಹೊಣೆಗಾರಿಕೆಯನ್ನು ಕನ್ನಡದ ಜನ ನಿರೀಕ್ಷಿಸುತ್ತಾರೆ. ಹಾಗೂ, ಪೂರ್ಣಕುಂಭ ಮೆರವಣಿಗೆಯೇ ತಪ್ಪು ಎನ್ನುತ್ತಿದ್ದೇವೆಯೇ ಹೊರತು ಅದನ್ನು ಗಂಡಸರಿಂದ ಮಾಡಿಸಿ ಎಂದು ಹೇಳುತ್ತಿಲ್ಲ.

ಹಿಂದೆಲ್ಲಾ ಇದೇ ರೀತಿ ಮೆರವಣಿಗೆ ಮಾಡಿಸಲಾಗಿದೆ.‌ ಆಗ ಯಾರೂ ವಿರೋಧಿಸಲಿಲ್ಲ. ಈಗ್ಯಾಕೆ ವಿರೋಧ? ಎಂದೂ ಅಧ್ಯಕ್ಷರು ಕೇಳಿದ್ದಾರೆ. ಹಿಂದೆ ಮಾಡುತ್ತಾ ಬಂದಿರುವ ತಪ್ಪನ್ನು ಈಗ ತಿದ್ದಿಕೊಳ್ಳಬೇಕು ಅಲ್ವಾ? ಆ ಕಾಲಕ್ಕೆ ನಡೆದು ಹೋಯ್ತು. ಈ ಕಾಲದಲ್ಲಿ ನಿಲ್ಲಿಸಿರಿ. ತಪ್ಪೆಂದು ತಿಳಿದೂ ನಿಲ್ಲಿಸದೇ ಇದ್ದರೆ ಅದು ದೊಡ್ಡ ತಪ್ಪು.

ಈ ಮೆರವಣಿಗೆ ಸಮಿತಿಯಲ್ಲಿ 13-14 ಜನರಿದ್ದು ಅದರಲ್ಲಿರುವ ಮಹಿಳೆ ಕೇವಲ ಒಬ್ಬರು ಮಾತ್ರ. ಆದರೆ ಮೆರವಣಿಗೆಗೆ ಮಾತ್ರ 1001 ಮಹಿಳೆಯರು ಬೇಕು! ಇದು ದೌರ್ಜನ್ಯ ಅಲ್ಲವೆ?

ಸಮ್ಮೇಳನದ ಗೋಷ್ಠಿಗಳಲ್ಲಿ ಮಹಿಳೆಯರಿಗೆ ಶೇ.‌50ರಷ್ಟು ಪ್ರಾತಿನಿಧ್ಯ ನೀಡುವ ಮೂಲಕ ಮಹಿಳೆಯರ ಭಾಗವಹಿಸುವಿಕೆಯನ್ನು ದೃಢಪಡಿಸಬೇಕೆ ಹೊರತು ಅಲಂಕಾರಿಕವಾಗಿ ಬಳಸುವುದು ಕರ್ನಾಟಕದ ಎಲ್ಲ ಮಹಿಳೆಯರಿಗೆ ಮಾಡುವ ಅವಮಾನ.

ಈ ಮಹಿಳೆಯರಿಗಾಗಿ ಸೂರತ್ ನಿಂದ ಸಾವಿರಾರು ಸೀರೆಗಳನ್ನು ತರಿಸಲಾಗುತ್ತಿದೆ ಎಂದು ಕೇಳಿ ಬಲ್ಲೆವು. ನಿಜ ಇರಲಿಕ್ಕಿಲ್ಲ ಅಂತ ಭಾವಿಸುತ್ತೇವೆ.

ಅಕಸ್ಮಾತ್ ನಿಜವೇ ಆಗಿದ್ದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕೆಲಸ ಇಲ್ಲದೆ ಉಪವಾಸದಲ್ಲಿ ಬೇಯುತ್ತಿರುವ ನಮ್ಮದೇ ನೇಕಾರರಿಂದ ಸೀರೆ ಖರೀದಿಸಬಹುದಿತ್ತು. ಈಗಲೂ ಹಾಗೇ ಮಾಡಿದ್ದೀರಿ ಅಂತ ಭಾವಿಸಲು ಇಚ್ಚಿಸುತ್ತೇವೆ. ನಮ್ಮ ಸರಕಾರ ಮತ್ತು ಸಾಹಿತ್ಯ ಪರಿಷತ್ತು ಅಷ್ಟೊಂದು ಸಂವೇದನಾ ರಹಿತ ಆಗಿರುವುದಿಲ್ಲ ಅನ್ನುವುದು ನಮ್ಮ ಬಲವಾದ ನಂಬಿಕೆ.

ಮೊನ್ನೆ ಒರಿಸ್ಸಾದಲ್ಲಿ ವಿಶ್ವಕಪ್ ಹಾಕಿ ಸ್ಪರ್ಧೆಗಳು ನಡೆದಾಗ ಎಲ್ಲ ದೇಶಗಳ ಆಟಗಾರರು ಹಾಗೂ ಅವರೊಂದಿಗೆ ಬಂದಿದ್ದ ಸಿಬ್ಬಂದಿಗಳಿಗೆ, ಕ್ರೀಡಾಕೂಟಕ್ಕಾಗಿ ದುಡಿದವರಿಗೆ ಹೀಗೆ ಸಾವಿರಾರು ಜನರಿಗೆ ಒರಿಸ್ಸಾದ ಕೈಮಗ್ಗದ ಶಾಲುಗಳು ಮತ್ತು ಕರಕುಶಲ ವಸ್ತುಗಳನ್ನೇ ಕಾಣಿಕೆಯಾಗಿ ನೀಡಲಾಗಿದೆ. ಆ ಮೂಲಕ ಸಾವಿರಾರು ಕುಶಲ ಕರ್ಮಿಗಳಿಗೆ ಉದ್ಯೋಗ ನೀಡಲಾಗಿದೆ. ಆ ರಾಜ್ಯದ ಮೈಕ್ರೋ ಎಕಾನಮಿಯಲ್ಲಿ ಸಂಚಲನ ಮೂಡಿಸಲಾಗಿದೆ. ಇದು ನಮಗೆ ಮಾದರಿಯಾಗಬೇಕು.

ಇರಲಿ, ಇಲ್ಲಿ ಮೆರವಣಿಗೆಗೆ ತರಿಸಿದ ಸೀರೆಗಳನ್ನು ಸಮ್ಮೇಳನಕ್ಕಾಗಿ ಅಡುಗೆ ಕೆಲಸ, ಪಾತ್ರೆ ತೊಳೆಯುವ ಕೆಲಸ, ಕಸ ಗುಡಿಸುವುದು, ಬಚ್ಚಲು ಮತ್ತು ಶೌಚಾಲಯ ತೊಳೆಯುವುದು, ತರಕಾರಿ ಹೆಚ್ಚುವ ರೊಟ್ಟಿ ಬಡಿಯುವ ಮೊದಲಾದ ಕೆಲಸ ಮಾಡುವ ತಾಯಂದಿರಿಗೆ ಉಡಿಸಿ, ಗೌರವಿಸಿ.

ಪಕ್ಕದ ಕೇರಳದಲ್ಲಿ ಸ್ತ್ರೀ ಸಮಾನತೆಗಾಗಿ ಲಕ್ಷಾಂತರ ಮಹಿಳೆಯರು 620 ಕಿ.ಮೀ. ಉದ್ದದ ಮಹಿಳೆಯರ ಗೋಡೆಯನ್ನು ನಿರ್ಮಿಸಿದ್ದಾರೆ. ಇಡೀ ದೇಶ ಇಂದು ಕೇರಳದ ಕಡೆಗೆ ಅಚ್ಚರಿಯಿಂದ ನೋಡುತ್ತಿದೆ.

ನೆರೆಮನೆಯವರಾದ ನಾವು ಮುಗ್ಧ ಮಹಿಳೆಯರಿಗೆ ಅಲಂಕಾರ ಮಾಡಿಸಿ, ಅವರ ತಲೆಯ ಮೇಲೆ ನೀರಿನ ಕೊಡ ಹೊರಿಸಿ, 5 ಕಿಮೀ ನಡೆಸುವುದು ಅಮಾನವೀಯ. ಆಧುನಿಕ ಕಾಲದಿಂದ ಕತ್ತಲ ಕಾಲಕ್ಕೆ ಚಲಿಸಿದಂತೆ ಆಗುತ್ತದೆ.

ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನಗಳು ಸರ್ಕಾರದ ಅನುದಾನದಿಂದ ನಡೆಯುತ್ತವೆ. ಸರಕಾರದ ದುಡ್ಡನ್ನು ಮೌಢ್ಯ ಬೆಳೆಸಲು, ಮಹಿಳೆಯರ ಗೌರವಕ್ಕೆ ಚ್ಯುತಿ ತರುವಂತೆ ಬಳಸುವುದು ಸಂವಿಧಾನ ವಿರೋಧಿಯಾಗಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ, ಈ ಪೂರ್ಣ ಕುಂಭ ಮೆರವಣಿಗೆಯನ್ನು ಕೈ ಬಿಟ್ಟು ಮತ್ತೇನಾದರೂ ಬೌದ್ಧಿಕವಾಗಿ ಹೆಚ್ಚು ಅರ್ಥಪೂರ್ಣವಾದ ಕೆಲಸ ಮಾಡಿ ಸಾಹಿತ್ಯ ಸಮ್ಮೇಳನದ ಘನತೆಯನ್ನು ಹೆಚ್ಚಿಸಿ ಎಂದು ಈ ಕೆಳಗೆ ಸಹಿಮಾಡಿರುವ ನಾವೆಲ್ಲರೂ ಆಗ್ರಹಿಸುತ್ತೇವೆ.

ಸಹಿ-

 1. ಡಾ. ಪುರುಷೋತ್ತಮ ಬಿಳಿಮಲೆ, ಜೆ.ಎನ್.ಯು.
 2. ನೀಲಾ ಕೆ., ಜನವಾದಿ ಮಹಿಳಾ ಸಂಘಟನೆ
 3. ವಿಮಲಾ ಕೆ. ಎಸ್., ಜನವಾದಿ ಮಹಿಳಾ ಸಂಘಟನೆ
 4. ಸಂಜ್ಯೋತಿ ವಿ.ಕೆ., ಚಿತ್ರ ನಿರ್ದೇಶಕರು
 5. ರೇಣುಕಾ ನಿಡಗುಂದಿ, ಲೇಖಕರು
 6. ಜ್ಯೋತಿ ಎ. ರಾಷ್ಟ್ರೀಯ ಮಹಿಳಾ ಒಕ್ಕೂಟ
 7. ಡಿ. ಉಮಾಪತಿ, ಪತ್ರಕರ್ತರು
 8. ಡಾ. ಮೀನಾಕ್ಷಿ ಬಾಳಿ, ಪ್ರೊಫೆಸರ್
 9. ಸಿ. ಬಸವಲಿಂಗಯ್ಯ, ನಿರ್ದೇಶಕರು, ಎನ್.ಎಸ್.ಡಿ.
 10. ಹನುಮಾಕ್ಷಿ ಗೋಗಿ, ಲೇಖಕರು, ಪ್ರಕಾಶಕರು
 11. ಗಿರಿಧರ್ ಕಾರ್ಕಳ, ಕಲಾವಿದರು
 12. ಹೇಮಲತಾ ಮೂರ್ತಿ, ಲೇಖಕರು, ಪತ್ರಕರ್ತರು
 13. ಅನಂತ ನಾಯಕ್, ವಕೀಲರು
 14. ಡಾ. ಸುಶಿ ಕಾಡನಕುಪ್ಪೆ, ವೈದ್ಯರು
 15. ಗೀತಾ, ಎಲ್.ಐ.ಸಿ.
 16. ಗೌರಮ್ಮ, ಜನವಾದಿ ಮಹಿಳಾ ಸಂಘಟನೆ
 17. ಸುಶೀಲ ಬಸವಲಿಂಗಯ್ಯ
 18. ದೀಪಾ ಗಿರೀಶ್, ಲೇಖಕರು
 19. ಜೊಹರಾ
 20. ಶಾರದಾ ಕೆ.ಎಸ್. ಜನವಾದಿ ಮಹಿಳಾ ಸಂಘಟನೆ
 21. ಡಾ. ಎಚ್.ಜಿ.ಜಯಲಕ್ಷ್ಮಿ, ವೈದ್ಯರು
 22. ಡಾ. ಮಂಜುನಾಥ್
 23. ಶ್ರೀನಿವಾಸ ಕಾರ್ಕಳ, ಲೇಖಕರು
 24. ಟಿ. ಸುರೇಂದ್ರರಾವ್, ಸಮುದಾಯ
 25. ಸುಮಾ ಎಸ್, ಉಪನ್ಯಾಸಕರು
 26. ಭಾರತಿ ಪ್ರಶಾಂತ್
 27. ಇಂದಿರಾ ಪ್ರಸಾದ್
 28. ಮೀನಾಕುಮಾರಿ ಬೀದರ್, ಜನವಾದಿ ಮಹಿಳಾ ಸಂಘಟನೆ
 29. ಲಕ್ಷ್ಮಿ ಕೆ.ಎಸ್.‌ ಜನವಾದಿ ಮಹಿಳಾ ಸಂಘಟನೆ
 30. ಎನ್. ವಿ. ಸೌಮ್ಯರಾಣಿ
 31. ಮಹೇಶ್ ಇರಸವಾಡಿ
 32. ಸದಾಶಿವ ಮೇತ್ರಿ
 33. ವಾಸುದೇವ ನಾಡಿಗ್
 34. ಗಿರಿಜರ್ ರಾಮ
 35. ಶ್ರೀನಿವಾಸ ದಿನ್ನೆ
 36. ಸುಭಾನು ರವಿ
 37. ಸೌಭಾಗ್ಯ ಚನ್ನಬಸಪ್ಪ, ಬೇಲೂರು
 38. ಲತಾ ಮುನಿಯಪ್ಪ
 39. ಗೀತಾ ಉಪೇಂದ್ರ, ಬೆಂಗಳೂರು
 40. ಬಿ ರಾಜಶೇಖರ ಮೂರ್ತಿ
 41. ಸಂಧ್ಯಾರಾಣಿ, ಬೆಂಗಳೂರು
 42. ರೇಣುಕಾ ರಮಾನಂದ
 43. ಮೋಹನ್ ಕೋರಿ
 44. ದಾಕ್ಷಾಯಿಣಿ ಹುಡೇದ್, ವಿಜಯಪುರ
 45. ಶರಣಪ್ಪ ಸಜ್ಜನ್
 46. ಪ್ರವೇಣಿ ಸ್ಫೂರ್ತಿ
 47. ಅಮೃತವಲ್ಲಿ
 48. ಪ್ರಭಾ ಎನ್. ಬೆಳವಂಗಲ, ದೊಡ್ಡಬಳ್ಳಾಪುರ
 49. ಕಳಲೆ ಶ್ರೀನಿವಾಸರಂಗ ಪಾರ್ಥಸಾರಥಿ, ಬೆಂಗಳೂರು
 50. ಸುಮಂಗಲಾ ಜಿ. ಎಂ., ಲೇಖಕರು, ಬೆಂಗಳೂರು
 51. ಸತ್ಯಾ ಎಸ್. ಬೆಂಗಳೂರು
 52. ಚೇತನಾ ತೀರ್ಥಹಳ್ಳಿ, ಬೆಂಗಳೂರು
 53. ಅನ್ವರ ಹುಬ್ಬಳ್ಳಿ,
 54. ರಜನಿ ಗರುಡ, ಧಾರವಾಡ
 55. ಸುನಂದಾ ಕಡಮೆ, ಹುಬ್ಬಳ್ಳಿ
 56. ಪ್ರಕಾಶ ಕಡಮೆ, ಹುಬ್ಬಳ್ಳಿ
 57. ಕಾವ್ಯಾ ಕಡಮೆ, ಅಮೆರಿಕ
 58. ನವ್ಯಾ ಕಡಮೆ, ಹುಬ್ಬಳ್ಳಿ
 59. ಗುಲಾಬಿ ಬಿಳಿಮಲೆ, ಮಂಗಳೂರು
 60. ಶಿವಾನಂದ ನಾಗೂರ
 61. ಲಿನೆಟ್, ಧಾರವಾಡ
 62. ಶಾರದಾ ಪಾಟೀಲಾ
 63. ಶುಭಾ ಮರವಂತೆ
 64. ಶ್ರೀ ಲಕ್ಷ್ಮೀ ವೈ.ಎಸ್
 65. ರಾಜೇಶ್ವರಿ ಜೋಶಿ
 66. ಶಾರದಾ ಗೋಪಾಲ, ಧಾರವಾಡ
 67. ಸಬಿತಾ ಬನ್ನಾಡಿ, ಶಿವಮೊಗ್ಗ
 68. ಚಾರ್ವಾಕ ರಾಘು,ಸಾಗರ
 69. ಸರೋಜ ಎಮ್.ಎಸ್. ಸಾಗರ
 70. ಶಿವಿ ಕೊಪ್ಪಳ
 71. ವಿನಯಾ, ಧಾರವಾಡ
 72. ಎಂ.ಡಿ ಒಕ್ಕುಂದ, ಧಾರವಾಡ
 73. ಪೃಥ್ವಿ ಒಕ್ಕುಂದ, ಧಾರವಾಡ
 74. ನಭಾ ಒಕ್ಕುಂದ, ಧಾರವಾಡ
 75. ಡಾ. ಅರುಂಧತಿ ಡಿ, ತುಮಕೂರು
 76. ಡಾ. ಗೋಪಾಲ ದಾಬಡೆ, ಧಾರವಾಡ
 77. ಪೂಜಾ ದಾಬಡೆ, ಧಾರವಾಡ
 78. ವಿಶಾಲಾಕ್ಷಿ ಶರ್ಮಾ
 79. ಕೃತಿ ಆರ್.
 80. ನಸ್ರೀನ್ ಮಿಠಾಯಿ
 81. ಮಂಜುಳಾ ಎಚ್.
 82. ಬಸಂತಿ ಹಪ್ಪಳದ
 83. ಸರೋಜಾ ಲೋಡಾಯ
 84. ಭುವನೇಶ್ವರಿ ಕಾಂಬಳೆ
 85. ಮರ್ಲಿನ್ ಮಾರ್ಟಿಸ್, ಮಂಗಳೂರು
 86. ಎಸ್. ಅರುಂಧತಿ
 87. ವ್ಯಾಸ ದೇಶಪಾಂಡೆ
 88. ಅಖಿಲಾ ವಿದ್ಯಾಸಂದ್ರ, ವಕೀಲರು, ಬೆಂಗಳೂರು
 89. ಪ್ರೇಮಾ ನಡುವಿನಮನಿ
 90. ವೃಂದಾ ಹೆಗಡೆ
 91. ನರ್ಮದಾ ಕುರ್ತಕೋಟಿ
 92. ದೇವಿಕಾ
 93. ಬಸೂ ಸುಳಿಭಾವಿ, ಧಾರವಾಡ
 94. ಕನಸು, ಧಾರವಾಡ
 95. ದು.ಸರಸ್ವತಿ, ವಿಜಯಪುರ
 96. ವಾಣಿ ಪೆರಿಯೊಡಿ, ಬಂಟ್ವಾಳ
 97. ಎಚ್ ಎಸ್ ಅನುಪಮಾ, ಹೊನ್ನಾವರ
 98. ಕೃಷ್ಣ ಗಿಳಿಯಾರ, ಹೊನ್ನಾವರ
 99. ಗವಾನಿ ದುರದುಂಡಿ
 100. ಮಾಧವಿ ಭಂಡಾರಿ, ಶಿರಸಿ
 101. ವಿಠ್ಠಲ ಭಂಡಾರಿ, ಸಿದ್ದಾಪುರ
 102. ಯಮುನಾ ಗಾಂವಕಾರ, ಕಾರವಾರ
 103. ಸಚಿನ್ ಅಂಕೋಲಾ
 104. ಉಮೇಶ ನಾಯ್ಕ
 105. ಶ್ರೀದೇವಿ ಕೆರೆಮನೆ, ಕಾರವಾರ
 106. ಶಂಕರಗೌಡ ಸಾತ್ಮಾರ
 107. ವರುಣ ಕುರ್ತಕೋಟಿ
 108. ಮಂಜುಳ ಸುನಿಲ್
 109. ಡಾ.ಎಂ. ಜಯಶ್ರೀ
 110. ಉಷಾ ಅಂಬ್ರೋಸ್, ಮೈಸೂರು
 111. ರೇಖಾಂಬ, ಶಿವಮೊಗ್ಗ
 112. ಜ್ಯೋತಿ ಹಿಟ್ನಾಳ, ಕೊಪ್ಪಳ
 113. ಅಕ್ಷತಾ ಹುಂಚದಕಟ್ಟೆ, ಶಿವಮೊಗ್ಗ
 114. ಗೌರಿ
 115. ಮಲ್ಲಿಗೆ
 116. ಪೂರ್ಣಿಮಾ
 117. ಚೆನ್ನಮ್ಮ
 118. ಕಾವ್ಯ
 119. ಹೇಮಲತ
 120. ಪದ್ಮ ಕೆ.ರಾಜ್
 121. ಪುಷ್ಪಲತಾ
 122. ಗುರು ಸುಳ್ಯ
 123. ವೀಣಾ ಸುಳ್ಯ
 124. ನವ್ಯ ಉದಯ
 125. ಭಾಗ್ಯ ಮರವಾಸಿ, ಉಡುಪಿ
 126. ಹರ್ಷಕುಮಾರ ಕುಗ್ವೆ, ಉಡುಪಿ
 127. ಪ್ರತಿಭಾ ಆರ್
 128. ದಾಕ್ಷಾಯಿನಿ
 129. ದಿಲಶಾದ
 130. ಸುವರ್ಣ ಕುಠಾಳೆ
 131. ಕೆ. ಶರೀಫಾ, ಬೆಂಗಳೂರು
 132. ಮುನೀರ್ ಕಾಟಿಪಳ್ಳ, ಡಿವೈಎಫ್ ಐ, ಮಂಗಳೂರು
 133. ಕಿರಣ್ ಭಟ್, ಕಾರವಾರ
 134. ಪೀರ್ ಬಾವ್ ಜಿ, ರಾಯಚೂರು
 135. ಸಂಧ್ಯಾರೆಡ್ಡಿ
 136. ಕಿರಣ್ ಉಳ್ಳಿಗೇರಿ
 137. ಉಗಮ ಶ್ರೀನಿವಾಸ್
 138. ಬಸವರಾಜ್ ಪೂಜಾರ್
 139. ರುದ್ರಪ್ಪ ಪಗಡದಿನ್ನಿ
 140. ಅಶ್ವಿನಿ ಮದನ್ ಕರ್, ಕಲಬುರ್ಗಿ
 141. ಕಿಶೋರ್ ಅತ್ತಾವರ, ಮಂಗಳೂರು
 142. ಡಾ. ಖಾನಾಪುರೆ, ಕಲಬುರ್ಗಿ
 143. ವಿ. ಎಲ್ . ನರಸಿಂಹಮೂರ್ತಿ, ಸಂಶೋಧನಾ ವಿದ್ಯಾರ್ಥಿ
 144. ಐವಾನ್ ಡಿ ಸಿಲ್ವಾ, ಮಂಗಳೂರು
 145. ಶಶಿ ಸಂಪಳ್ಳಿ, ಪತ್ರಕರ್ತರು
 146. ರೇಣುಕಾಂಬಿಕೆ - ಚಿತ್ರಕತಾಲೇಖಕಿ
 147. ಹರೀಶ್ ಎಂ. ಜಿ., ಸಹಾಯಕ ಪ್ರಾಧ್ಯಾಪಕರು
 148. ಬಾಬು ಈಶ್ವರ್ ಪ್ರಸಾದ್, ಕಲಾವಿದರು, ಚಿತ್ರ ನಿರ್ದೇಶಕರು
 149. ಪುನೀತ್, ವಕೀಲರು, ಮಂಗಳೂರು
 150. ಉದಯ್ ಇಟಗಿ
 151. ಡಾ.ಸಿ.ರವೀಂದ್ರನಾಥ್, ಸಹ ಪ್ರಾಧ್ಯಾಪಕ, ಮೈಸೂರು ಮೆಡಿಕಲ್ ಕಾಲೇಜು
 152. ಸುಮನಾ ಕಿತ್ತೂರು, ಚಿತ್ರ ನಿರ್ದೇಶಕರು
 153. ಮಂಜುನಾರಾಯಣ್, ರಂಗಭೂಮಿ ಕಲಾವಿದ
 154. ಮಾಲತಿ ಮುದಕವಿ, ಧಾರವಾಡ
 155. ಹರೀಶ್ ಶೆಟ್ಟಿ ಬಂಡ್ಸಾಲೆ, ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯ.
 156. ಶಿವಕುಮಾರ್ ಮಾವಲಿ , ಇಂಗ್ಲಿಷ್ ಉಪನ್ಯಾಸಕರು
 157. ಎಂ.ಎಸ್. ಪ್ರಕಾಶ್ ಬಾಬು, ಚಿತ್ರ ನಿರ್ದೇಶಕರು
 158. ರಿಯಾಝ್ ಬೆಂಗ್ರೆ, ಮಂಗಳೂರು
 159. ಕನಕರಾಜು ಆರನಕಟ್ಟೆ, ಕಥೆಗಾರರು, ಚಿತ್ರ ನಿರ್ದೇಶಕರು
 160. ರಾಜೇಶ್ವರಿ, ಲೇಖಕರು
 161. ರತಿ ರಾವ್, ಮೈಸೂರು
 162. ವಿಶಾಲಮತಿ, ಪುಸ್ತಕಪ್ರೀತಿ, ಬೆಂಗಳೂರು
 163. ಕಿರಣಕುಮಾರಿ
 164. ಎಸ್.‌ಕೆ. ನೇತ್ರಾವತಿ
 165. ದೇವಿ, ಜನವಾದಿ ಮಹಿಳಾ ಸಂಘಟನೆ, ಮಳವಳ್ಳಿ