samachara
www.samachara.com
ವಾಜಪೇಯಿ ನೆನಪಿಗೆ 100 ರೂಪಾಯಿ; ಹೊಸ ನಾಣ್ಯ ಬಿಡುಗಡೆಗೊಳಿಸಿದ ಮೋದಿ
ಸುದ್ದಿ ಸಾರ

ವಾಜಪೇಯಿ ನೆನಪಿಗೆ 100 ರೂಪಾಯಿ; ಹೊಸ ನಾಣ್ಯ ಬಿಡುಗಡೆಗೊಳಿಸಿದ ಮೋದಿ

ವಾಜಪೇಯಿ ಭಾವಚಿತ್ರವಿರುವ 100 ಮುಖಬೆಲೆಯ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆಗೊಳಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹುಟ್ಟಹಬ್ಬಕ್ಕೂ ಮುನ್ನಾ ದಿನವಾದ ಸೋಮವಾರ ವಾಜಪೇಯಿ ನೆನಪಿಗೆ ಕೇಂದ್ರ ಸರಕಾರ 100 ರೂಪಾಯಿ ಮುಖಬೆಲೆಯ ನಾಣ್ಯವನ್ನು ಹೊರತಂದಿದೆ.

ದೆಹಲಿಯ ಸಂಸತ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಜಪೇಯಿ ಭಾವಚಿತ್ರವಿರುವ 100 ರೂಪಾಯಿ ಮುಖಬೆಲೆಯ ನ್ಯಾಣವನ್ನು ಬಿಡುಗಡೆಗೊಳಿಸಿದರು.

35 ಗ್ರಾಂ ತೂಕವಿರುವ ಈ ನಾಣ್ಯ ಮುಂಬದಿಯಲ್ಲಿ ರೂಪಾಯಿ ಚಿಹ್ನೆಯೊಂದಿಗೆ 100ರ ಅಂಕೆ, ರಾಷ್ಟ್ರ ಲಾಂಛನ ಹಾಗೂ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಭಾರತದ ಹೆಸರು ಅಚ್ಚಾಗಿದೆ. ಹಿಂಬದಿಯಲ್ಲಿ ವಾಜಪೇಯಿ ಭಾವಚಿತ್ರ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ವಾಜಪೇಯಿ ಪೂರ್ಣ ಹೆಸರು ಹಾಗೂ ವಾಜಪೇಯಿ ಹುಟ್ಟಿದ ವರ್ಷ 1924 ಮತ್ತು ನಿಧನರಾದ ವರ್ಷ 2018ಅನ್ನು ಅಚ್ಚು ಮಾಡಲಾಗಿದೆ.

“ವಾಜಪೇಯಿ ನಮ್ಮೊಂದಿಗಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ವಾಜಪೇಯಿ ಇಲ್ಲ ಎಂಬುದನ್ನು ಒಪ್ಪಲು ಮನಸ್ಸು ಸಿದ್ಧವಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.