ಛತ್ತೀಸ್‌ಗಢಕ್ಕೆ ಭೂಪೇಶ್‌ ಬಾಘೇಲ್‌ ಸಾರಥ್ಯ; ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರ
ಸುದ್ದಿ ಸಾರ

ಛತ್ತೀಸ್‌ಗಢಕ್ಕೆ ಭೂಪೇಶ್‌ ಬಾಘೇಲ್‌ ಸಾರಥ್ಯ; ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರ

ಛತ್ತೀಸ್‌ಗಢಕ್ಕೆ ಮುಖ್ಯಮಂತ್ರಿಯಾಗಿ ಭೂಪೇಶ್‌ ಬಾಘೇಲ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಮಧ್ಯಪ್ರದೇಶ ಮತ್ತು ರಾಜಸ್ತಾನಗಳಿಗೆ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿಸಿರುವ ಕಾಂಗ್ರೆಸ್‌ ಛತ್ತೀಸ್‌ಗಢಕ್ಕೆ ಮುಖ್ಯಮಂತ್ರಿಯಾಗಿ ಭೂಪೇಶ್‌ ಬಾಘೇಲ್‌ ಅವರ ಹೆಸರನ್ನು ಅಂತಿಮಗೊಳಿಸಿದೆ.

ಬಾಘೇಲ್‌ ಜತೆಗೆ ಛತ್ತೀಸ್‌ಗಡ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಟಿ.ಎಸ್‌. ಸಿಂಗ್‌ ದೇವ್, ತಾಮ್ರಧ್ವಜ ಸಾಹು ಮತ್ತು ಚರಣ್‌ ದಾಸ್‌ ಮಹಾಂತ್‌ ಕೂಡಾ ಮುಖ್ಯಮಂತ್ರಿ ರೇಸ್‌ನಲ್ಲಿದ್ದರು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ದೆಹಲಿಯ ತುಘಲಕ್‌ ಲೇನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಈ ನಾಲ್ಕೂ ಮಂದಿ ಮುಖಂಡರೊಂದಿಗೆ ಸಭೆ ನಡೆಸಿದ್ದರು.

ಸೋಮವಾರ ಒಂದರ ಹಿಂದೊಂದರಂತೆ ನಡೆಯುವ ಸಮಾರಂಭದಲ್ಲಿ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್‌ಗಢ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ ಎನ್ನಲಾಗಿದೆ. ಈ ಸರಣಿ ಕಾರ್ಯಕ್ರಮಗಳಲ್ಲಿ ರಾಹುಲ್‌ ಗಾಂಧಿ ಭಾಗವಹಿಸಲಿದ್ದಾರೆ.

ಛತ್ತೀಸ್‌ಗಢದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ ಸಾಲಮನ್ನಾ ಘೋಷಣೆ ಮಾಡಲು ಕಾಂಗ್ರೆಸ್‌ ತೀರ್ಮಾನಿಸಿದೆ. ರಾಜ್ಯದ ಮತದಾರರಿಗೆ ಧನ್ಯವಾದ ತಿಳಿಸಲು ಕಾಂಗ್ರೆಸ್‌ ಛತ್ತೀಸ್‌ಗಢದಲ್ಲಿ ಸಾಲಮನ್ನಾ ಕ್ರಮಕ್ಕೆ ಮುಂದಾಗಿದೆ.