samachara
www.samachara.com
ಮಧ್ಯಪ್ರದೇಶ ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್‌ ಅಂಗಳಕ್ಕೆ; ಯಾರಿಗೆ ಒಲಿಯಲಿದೆ ಸಿಎಂ ಗಾದಿ?
ಸುದ್ದಿ ಸಾರ

ಮಧ್ಯಪ್ರದೇಶ ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್‌ ಅಂಗಳಕ್ಕೆ; ಯಾರಿಗೆ ಒಲಿಯಲಿದೆ ಸಿಎಂ ಗಾದಿ?

ಮಧ್ಯಪ್ರದೇಶ ಮುಖ್ಯಮಂತ್ರಿ ಆಯ್ಕೆಯ ಗೊಂದಲಗಳನ್ನು ಕಗ್ಗಂಟು ಮಾಡದೆ ಜವಾಬ್ದಾರಿಯನ್ನು ಹೈಕಮಾಂಡ್‌ಗೆ ವರ್ಗಾಯಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಮಣಿಸಿರುವ ಕಾಂಗ್ರೆಸ್‌ ಪಕ್ಷದಿಂದ ಮುಖ್ಯಮಂತ್ರಿ ಯಾರಾಗಬೇಕೆಂಬ ಗೊಂದಲ ಮುಂದುವರಿದಿದೆ. ಮುಖ್ಯಮಂತ್ರಿ ಆಯ್ಕೆಯ ನಿರ್ಧಾರವನ್ನು ಚುನಾಯಿತ ಕಾಂಗ್ರೆಸ್‌ ಶಾಸಕರು ಹೈಕಮಾಂಡ್‌ ನಿರ್ಧಾರಕ್ಕೆ ಬಿಟ್ಟಿದ್ದಾರೆ.

ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್‌ಗೆ ಬಿಡುವ ಒಂದು ಸಾಲಿನ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿರುವ ಕಮಲ್‌ ನಾಥ್‌ ಹಾಗೂ ಜ್ಯೋತಿರಾಧಿತ್ಯ ಸಿಂಧ್ಯ – ಈ ಇಬ್ಬರ ಪೈಕಿ ಯಾರು ಮುಖ್ಯಮಂತ್ರಿಯಾಗಬೇಕೆಂಬ ಬಗ್ಗೆ ಜಿಜ್ಞಾಸೆ ಇತ್ತು. ಪಕ್ಷ ಅವಕಾಶ ಕೊಟ್ಟರೆ ತಾನು ಮುಖ್ಯಮಂತ್ರಿಯಾಗಲು ಸಿದ್ಧ ಎಂದು ಸಿಂಧ್ಯ ಹೇಳಿದ್ದರು.

ಹಿರಿಯ ನಾಯಕ ಕಮಲ್‌ ನಾಥ್‌ ಹಾಗೂ ಕಿರಿಯ ನಾಯಕ ಸಿಂಧ್ಯ ಪೈಕಿ ಯಾರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಲಾಭವಾಗಲಿದೆ ಎಂಬ ಲೆಕ್ಕಾಚಾರಗಳೂ ಇಲ್ಲಿವೆ. ಆಯ್ಕೆಯ ಗೊಂದಲಗಳನ್ನು ಕಗ್ಗಂಟು ಮಾಡದೆ ಜವಾಬ್ದಾರಿಯನ್ನು ಹೈಕಮಾಂಡ್‌ಗೆ ವರ್ಗಾಯಿಸಲಾಗಿದೆ.

Also read: ‘ಸಿಖ್ ಗಲಭೆಯಿಂದ ಗೋ ಶಾಲೆವರೆಗೆ’: ಮಧ್ಯ ಪ್ರದೇಶ ಕಾಂಗ್ರೆಸ್ ಕೈಯಲ್ಲಿ ‘ಕಮಲ’ನಾಥ್!