ಆರ್‌ಬಿಐ- ಕೇಂದ್ರದ ತಿಕ್ಕಾಟಕ್ಕೆ ಗವರ್ನರ್‌ ಬಲಿ; ಊರ್ಜಿತ್‌ ಪಟೇಲ್ ರಾಜೀನಾಮೆ
ಸುದ್ದಿ ಸಾರ

ಆರ್‌ಬಿಐ- ಕೇಂದ್ರದ ತಿಕ್ಕಾಟಕ್ಕೆ ಗವರ್ನರ್‌ ಬಲಿ; ಊರ್ಜಿತ್‌ ಪಟೇಲ್ ರಾಜೀನಾಮೆ

ವೈಯಕ್ತಿಕ ಕಾರಣ ನೀಡಿ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ತಕ್ಷಣದಿಂದಲೇ ಹುದ್ದೆ ತ್ಯಜಿಸಿ ರಾಜೀನಾಮೆ ನೀಡಿದ್ದಾರೆ.

ಕೇಂದ್ರ ಸರಕಾರ ಹಾಗೂ ಆರ್‌ಬಿಐ ನಡುವಿನ ತಿಕ್ಕಾಟ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜೀನಾಮೆಗೆ ಕಾರಣವಾಗಿದೆ. ವೈಯಕ್ತಿಕ ಕಾರಣ ನೀಡಿ ಪಟೇಲ್‌ ತಕ್ಷಣದಿಂದಲೇ ಹುದ್ದೆ ತ್ಯಜಿಸಲು ನಿರ್ಧರಿಸಿದ್ದಾರೆ.

ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ಪಟೇಲ್‌ ಪತ್ರಿಕಾ ಪ್ರಕಟಣೆಯಲ್ಲಿ ಇಷ್ಟು ದಿನ ಸಹಕರಿಸಿದ ಆರ್‌ಬಿಐ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ.

Also read: 'ಅಂಬಾನಿ ಆಪ್ತ ಆಯಕಟ್ಟಿನ ಜಾಗಕ್ಕೆ': ರಿಸರ್ವ್ ಬ್ಯಾಂಕ್ ನೂತನ ಗೌವರ್ನರ್ ಉರ್ಜಿತ್ ಬಗ್ಗೆ ನಿಮಗೆಷ್ಟು ಗೊತ್ತು?

“ನನ್ನ ವೈಯಕ್ತಿಕ ಕಾರಣಕ್ಕಾಗಿ ನಾನು ತನ್ನ ಈಗಿನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ತಕ್ಷಣದಿಂದಲೇ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಇಷ್ಟು ದಿನ ಆರ್‌ಬಿಐನಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದಕ್ಕಾಗಿ ನನಗೆ ಹೆಮ್ಮೆ ಎನಿಸಿದೆ. ಇಷ್ಟು ದಿನ ಆರ್‌ಬಿಐ ಮುನ್ನಡೆಸಲು ನನ್ನೊಂದಿಗೆ ಸಹಕರಿಸಿದ ಎಲ್ಲಾ ಸಿಬ್ಬಂದಿ, ಅಧಿಕಾರಿ ಹಾಗೂ ನಿರ್ದೇಶಕ ಮಂಡಳಿಗೆ ಧನ್ಯವಾದಗಳು” ಎಂದು ಊರ್ಜಿತ್‌ ಪಟೇಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಊರ್ಜಿತ್‌ ಪಟೇಲ್ 2016ರ ಸೆಪ್ಟೆಂಬರ್‌ 4ರಂದು ಆರ್‌ಬಿಐ ಗವರ್ನರ್‌ ಹುದ್ದೆಗೆ ನೇಮಕಗೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಆರ್‌ಬಿಐ ಮತ್ತು ಕೇಂದ್ರ ಹಣಕಾಸು ಇಲಾಖೆಯ ನಡುವಿನ ಸಂಬಂಧ ಹಳಸಿತ್ತು.

Also read: ಹಳಸಿದ ಆರ್‌ಬಿಐ, ಕೇಂದ್ರ ಸರಕಾರ ಸಂಬಂಧ: ಕಾರಣ & ಪರಿಣಾಮಗಳ ಸುತ್ತ...

ವಸೂಲಾಗದ ಸಾಲಕ್ಕೆ ಅರ್‌ಬಿಐ ಕಾರಣ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದರು. ಆ ಬಳಿಕ ಊರ್ಜಿತ್‌ ಪಟೇಲ್‌ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಕೊನೆಗೂ ಆ ಸುದ್ದಿ ಇಂದು ನಿಜವಾಗಿದೆ.

Also read: ‘ಬ್ಯಾಡ್ ಮೋದಿನಾಮಿಕ್ಸ್‌’: ಆರ್‌ಬಿಐ ಮೀಸಲು ನಿಧಿಗೂ ಕೈ ಇಟ್ಟ ಕೇಂದ್ರ ಸರಕಾರ!