ಮದ್ಯ ಸೇವನೆ& ಮಧುಮೇಹ: ತೂಕ ಇಳಿಕೆ ಸಮಸ್ಯೆ ಮುಂದಿಟ್ಟ ಹೊಸ ಅಧ್ಯಯನ
ಸುದ್ದಿ ಸಾರ

ಮದ್ಯ ಸೇವನೆ& ಮಧುಮೇಹ: ತೂಕ ಇಳಿಕೆ ಸಮಸ್ಯೆ ಮುಂದಿಟ್ಟ ಹೊಸ ಅಧ್ಯಯನ

‘ಬೊಜ್ಜು ಮತ್ತು ಟೈಪ್‌ 2 ಮಧುಮೇಹ ಇರುವವರು ದೀರ್ಘ ಅವಧಿಯಲ್ಲಿ ಮದ್ಯ ಸೇವಿಸಿದರೆ ತೂಕವನ್ನು ಕಳೆದುಕೊಳ್ಳುತ್ತಾರೆ,’ ಎಂಬುದಾಗಿ ಅಧ್ಯಯನವೊಂದು ಹೇಳಿದೆ.

ಮಧುಮೇಹ ಕಾಯಿಲೆ ಇರುವವರು ದೀರ್ಘಾವಧಿಗೆ ಆಲ್ಕೋಹಾಲ್‌ ಸೇವಿಸುವುದರಿಂದ ತೂಕ ಕಡಿಮೆಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಪೆನ್ಸಿಲ್ವೇನಿಯಾ ವಿವಿಯ ಸಂಶೋಧಕರು ಈ ಅಧ್ಯಯನ ನಡೆಸಿದ್ದು ಮದ್ಯ ಸೇವಿಸಿ ತೂಕ ಕಳೆದುಕೊಳ್ಳುವುದರಿಂದ ಮಧುಮೇಹ ಖಾಯಿಲೆ ಬರುವುದು ನಿಧಾನವಾಗಬಹುದು ಎಂದು ತಿಳಿಸಿದ್ದಾರೆ. ಮಧುಮೇಹ ಖಾಯಿಲೆ ಬರಲು ಬೊಜ್ಜು ಪ್ರಮುಖ ಕಾರಣವಾಗಿದ್ದು, ಇದೀಗ ಆಲ್ಕೋಹಾಲ್‌ ಸೇವನೆಯಿಂದ ಬೊಜ್ಜು ಕಡಿಮೆಯಾಗಲಿದೆ ಎಂಬ ವರದಿ ಹೊರ ಬಿದ್ದಿದೆ.

“ಟೈಪ್‌ 2 ಮಧುಮೇಹ ಖಾಯಿಲೆ ಹೊಂದಿರುವವರು ತೂಕ ಕಳೆದುಕೊಳ್ಳಲು ನಿಯಮಿತವಾಗಿ ಮದ್ಯ ಸೇವನೆ ಮಾಡುವಂತೆ ಉತ್ತೇಜಿಸಬಹುದು,” ಎಂದು ಅಧ್ಯಯನದ ಮುಖ್ಯ ಸಂಶೋಧಕ ಅರ್ಜನಾ ಎಂ ಚಾವೋ ಹೇಳಿದ್ದಾರೆ. ವಿವಿಯಲ್ಲಿ ಬಯೋಬಿಹೇವಿಯರಲ್‌ ಸೈನ್ಸ್‌ ವಿಭಾಗದ ಮುಖ್ಯಸ್ಥರಾಗಿರುವ ಅವರು, ಡಯಾಬೆಟಿಕ್‌ ಇರುವವರು ತೂಕ ಕಳೆದುಕೊಳ್ಳಲು ಕಡಿಮೆ ಕ್ಯಾಲೊರಿ ಇರುವ ಆಲ್ಕೊಹಾಲ್‌ಗಳನ್ನು ಸೇವಿಸಬೇಕು ಎಂದು ಸಲಹೆ ನೀಡಿದ್ದಾರೆ.

‘ಒಬೆಸಿಟಿ’ ಎಂಬ ಜರ್ನಲ್‌ನಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಈ ಅಧ್ಯಯನಕ್ಕಾಗಿ ಸಂಶೋಧಕರು ಹೆಚ್ಚಿನ ತೂಕ ಇರುವ 5,000 ಜನರ ಜೀವನಶೈಲಿಯನ್ನು ಸುಮಾರು 4 ವರ್ಷಗಳ ಕಾಲ ಪರಿಶೀಲಿಸಿದ್ದಾರೆ. ಹೀಗೆ ಸಂಶೋಧನೆ ನಡೆಸಿ ಹೊರಬಿದ್ದಿರುವ ಫಲಿತಾಂಶಗಳು ಅಚ್ಚರಿ ಹುಟ್ಟಿಸಿವೆ.

ಒಂದು ತಂಡ ಜೀವನಶೈಲಿಯ ತೀವ್ರ ನಿಗಾದಲ್ಲಿದ್ದ ಮಧುಮೇಹಿಗಳು ಮತ್ತು ಇನ್ನೊಂದು ತಂಡ ನಿಯಂತ್ರಿತ ಡಯಾಬೆಟಿಕ್‌ ಸಲಹೆಗಳನ್ನು ಪಡೆದುಕೊಳ್ಳುತ್ತಿರುವವರನ್ನು ಈ ಅಧ್ಯಯನಕ್ಕೆ ಒಳಪಡಿಸಿದೆ.

ಹೀಗೆ ಅಧ್ಯಯನ ನಡೆಸಿದಾಗ ತೀವ್ರ ನಿಗಾದಲ್ಲಿದ್ದ ಆಲ್ಕೋಹಾಲ್‌ ತೆಗೆದುಕೊಳ್ಳದೆ ಇರುವ ಮಧುಮೇಹಿಗಳು ಸ್ವಲ್ಪವಾದರೂ ಆಲ್ಕೋಹಾಲ್‌ ಸೇವಿಸಿದವರಿಗಿಂತ ಹೆಚ್ಚಿನ ತೂಕವನ್ನು ಕಳೆದುಕೊಂಡಿದ್ದಾರೆ ಎಂಬುದು ಕೂಡ ತಿಳಿದು ಬಂದಿದೆ. ಈ ವಿಭಾಗದ ವಿಪರೀತ ಮದ್ಯ ಸೇವನೆ ಮಾಡುವವರಲ್ಲೂ ಕಳೆದ 4 ವರ್ಷಗಳಲ್ಲಿ ಹೇಳಿಕೊಳ್ಳುವಂತ ತೂಕ ಕಡಿಮೆಯಾಗಿಲ್ಲ ಎಂಬುದೂ ಇದೇ ವೇಳೆ ತಿಳಿದು ಬಂದಿದೆ.

ಅಂದರೆ ತೀವ್ರ ನಿಗಾದಲ್ಲಿ ಇದ್ದಾಗ ಸಣ್ಣ ಅವಧಿಯಲ್ಲಿ ತೂಕ ಹೆಚ್ಚು ಕಡಿಮೆಯಾದರೆ ಇದಕ್ಕೂ ಆಲ್ಕೋಹಾಲ್‌ಗೂ ಸಂಬಂಧವಿರುವುದಿಲ್ಲ. ಆದರೆ ಬೊಜ್ಜು ಮತ್ತು ಟೈಪ್‌ 2 ಮಧುಮೇಹ ಇರುವವರು ದೀರ್ಘ ಅವಧಿಯಲ್ಲಿ ಮದ್ಯ ಸೇವಿಸಿದರೆ ತೂಕವನ್ನು ಕಳೆದುಕೊಳ್ಳುತ್ತಾರೆ,” ಎಂದು ವಿವರಿಸುತ್ತಾರೆ ಚಾವೋ.