ಮನ್‌ಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ 3 ಸರ್ಜಿಕಲ್‌ ಸ್ಟ್ರೈಕ್‌  ನಡೆದಿದ್ದವು: ರಾಹುಲ್ ಗಾಂಧಿ
ಸುದ್ದಿ ಸಾರ

ಮನ್‌ಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ 3 ಸರ್ಜಿಕಲ್‌ ಸ್ಟ್ರೈಕ್‌ ನಡೆದಿದ್ದವು: ರಾಹುಲ್ ಗಾಂಧಿ

“ಯುಪಿಎ ಅವಧಿಯ ನಡೆದ ಸರ್ಜಿಕಲ್‌ ಸ್ಟ್ರೈಕ್‌ಗಳನ್ನು ಸೇನೆ ಬಹಿರಂಗಗೊಳಿಸಿರಲಿಲ್ಲ. ಅದರಿಂದ ಯಾರಿಗೆ ಏನು ಲಾಭ ಎಂಬುದೂ ಆಗ ಗೊತ್ತಿರಲಿಲ್ಲ...

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ್ದ ಸರ್ಜಿಕಲ್‌ ಸ್ಟ್ರೈಕ್‌ ಅನ್ನು ಚುನಾವಣಾ ವಿಷಯವಾಗಿ ಬಿಂಬಿಸಿಕೊಳ್ಳುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ ಕೂಡಾ ಯುಪಿಎ ಅವಧಿಯಲ್ಲಿ ಮೂರು ಸರ್ಜಿಕಲ್‌ ಸ್ಟ್ರೈಕ್‌ಗಳು ನಡೆದಿದ್ದವು ಎಂದು ಹೇಳಿದೆ.

ರಾಜಸ್ತಾನದ ಉದಯ್‌ಪುರ್‌ನಲ್ಲಿ ಶನಿವಾರ ಮಾತನಾಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, “ಮನ್‌ಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಅವಧಿಯಲ್ಲಿ ಮೂರು ಸರ್ಜಿಕಲ್‌ ಸ್ಟ್ರೈಕ್‌ಗಳು ನಡೆದಿದ್ದವು. ಆದರೆ, ಒಂದು ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದನ್ನೇ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಯುಪಿಎ ಅವಧಿಯ ನಡೆದ ಸರ್ಜಿಕಲ್‌ ಸ್ಟ್ರೈಕ್‌ಗಳನ್ನು ಸೇನೆ ಬಹಿರಂಗಗೊಳಿಸಿರಲಿಲ್ಲ. ಅದರಿಂದ ಯಾರಿಗೆ ಏನು ಲಾಭ ಎಂಬುದೂ ಆಗ ಗೊತ್ತಿರಲಿಲ್ಲ. ಆದರೆ, ಮೋದಿ ಸೇನಾ ಕಾರ್ಯಾಚರಣೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ” ಎಂದು ರಾಹುಲ್‌ ಗಾಂಧಿ ಕುಟುಕಿದ್ದಾರೆ.

“ಯುಪಿಎ ಅವಧಿಯಲ್ಲಿ ನಡೆದಿದ್ದ ಸರ್ಜಿಕಲ್‌ ಸ್ಟ್ರೈಕ್‌ಗಳನ್ನು ಸೇನಾ ರಹಸ್ಯ ಕಾಪಾಡುವ ಕಾರಣಕ್ಕೆ ಬಹಿರಂಗಗೊಳಿಸಿರಲಿಲ್ಲ. ಆದರೆ, ಮೋದಿ ಸೇನಾ ಕಾರ್ಯಾಚರಣೆಯ ರಹಸ್ಯವನ್ನು ಬಯಲು ಮಾಡಿ ಅದರಿಂದ ರಾಜಕೀಯ ಲಾಭ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಸೇನೆಯ ಕಾರ್ಯಾಚರಣೆಯ ನಿರ್ಧಾರವನ್ನು ತಮ್ಮ ನಿರ್ಧಾರ ಎಂದು ಮೋದಿ ಬಿಂಬಿಸಿಕೊಳ್ಳುತ್ತಿದ್ದಾರೆ” ಎಂದಿದ್ದಾರೆ.