samachara
www.samachara.com
ಮಧ್ಯಪ್ರದೇಶದಲ್ಲಿ 71%, ಮಿಝೋರಾಂನಲ್ಲಿ 73% ಮತದಾನ
ಸುದ್ದಿ ಸಾರ

ಮಧ್ಯಪ್ರದೇಶದಲ್ಲಿ 71%, ಮಿಝೋರಾಂನಲ್ಲಿ 73% ಮತದಾನ

ಮಧ್ಯಪ್ರದೇಶ ಹಾಗೂ ಮಿಝೋರಾಂನ ತಲಾ ಒಂದೊಂದು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಭವಿಷ್ಯ ಈಗ ಮತಯಂತ್ರಗಳಲ್ಲಿ ದಾಖಲಾಗಿದೆ.

ಮಧ್ಯಪ್ರದೇಶ ಹಾಗೂ ಮಿಝೋರಾಂ ವಿಧಾನಸಭೆಗೆ ಬುಧವಾರ ನಡೆದ ಮತದಾನ ಮುಕ್ತಾಯಗೊಂಡಿದೆ. ಮಧ್ಯಪ್ರದೇಶದಲ್ಲಿ 71% ಹಾಗೂ ಮಿಝೋರಾಂನಲ್ಲಿ 73% ಮತದಾನ ನಡೆದಿದೆ.

2013ರಲ್ಲೂ ಇಲ್ಲಿ 71% ಮತದಾನ ನಡೆದಿತ್ತು. ಮಧ್ಯಪ್ರದೇಶ ವಿಧಾನಸಭೆಯ ಒಟ್ಟು 230 ಸ್ಥಾನಗಳಲ್ಲಿ 148 ಸಾಮಾನ್ಯ ಹಾಗೂ 35 ಎಸ್‌ಸಿ ಹಾಗೂ 47 ಎಸ್‌ಟಿ ಮೀಸಲಾತಿ ಇದೆ. ಈ ಬಾರಿ ಮತದಾನದ ಹಕ್ಕು ಪಡೆದಿದ್ದವರು 5 ಕೋಟಿಗೂ ಹೆಚ್ಚು ಮತದಾರರು.

2013ರಲ್ಲಿ ಬಿಜೆಪಿ 165 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್‌ 58, ಬಿಎಸ್‌ಪಿ 4 ಇತರರು 3 ಸ್ಥಾನಗಳಲ್ಲಿ ಗೆದ್ದಿದ್ದರು. ಈ ಬಾರಿ ಕಾಂಗ್ರೆಸ್‌ಗೆ ತೀಪ್ರ ಪೈಪೋಟಿ ಕೊಡಲು ಕಾಂಗ್ರೆಸ್‌ ಎಲ್ಲಾ ಬಗೆಯ ಕಸರತ್ತನ್ನೂ ಮಧ್ಯಪ್ರದೇಶದಲ್ಲಿ ನಡೆಸಿದೆ.

ಇನ್ನು 40 ಸ್ಥಾನಗಳಿರುವ ಮಿಝೋರಾಂನಲ್ಲಿರುವ ಮತದಾರರ ಸಂಖ್ಯೆ 7.86 ಲಕ್ಷ. 2013ರಲ್ಲಿ ಇಲ್ಲಿ ಕಾಂಗ್ರೆಸ್ 34 ಸ್ಥಾನಗಳನ್ನು ಗೆದ್ದಿತ್ತು. ಮಿಝೋ ನ್ಯಾಷನಲ್‌ ಫ್ರಂಟ್‌ 5 ಹಾಗೂ ಮಿಝೋರಾಂ ಪೀಪಲ್ಸ್‌ ಕಾನ್ಫರೆನ್ಸ್‌ 1 ಸ್ಥಾನ ಪಡೆದಿದ್ದವು. ಈ ಬಾರಿ ಮಿಝೋರಾಂ ಅನ್ನು ಕಾಂಗ್ರೆಸ್ ಮುಕ್ತಗೊಳಿಸಬೇಕು ಎಂದು ಘೋಷಿಸಿದ್ದ ಬಿಜೆಪಿ ಈಶಾನ್ಯ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಹೆಚ್ಚು ಪ್ರಚಾರ ನಡೆಸಿತ್ತು.

ತಲಾ ಒಂದೊಂದು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಭವಿಷ್ಯ ಈಗ ಮತಯಂತ್ರಗಳಲ್ಲಿ ದಾಖಲಾಗಿದೆ. ಎಲ್ಲೆಲ್ಲಿ ಯಾವ ಪಕ್ಷಗಳು ಅಧಿಕಾರಕ್ಕೆ ಬರಲಿವೆ ಎಂಬುದು ಡಿಸೆಂಬರ್‌ 11ರ ಮತ ಎಣಿಕೆಯ ದಿನ ಗೊತ್ತಾಗಲಿದೆ.