samachara
www.samachara.com
ಕುಸಿದ ಕೊಡಗಿಗೆ ರಂಗ-ಸಂಗೀತದ ನೆರವಿನ ಹಸ್ತ; ಕಲಾಗ್ರಾಮದಲ್ಲಿ ‘ಕೊಡಗಿಗಾಗಿ ರಂಗಸಪ್ತಾಹ’
ಸುದ್ದಿ ಸಾರ

ಕುಸಿದ ಕೊಡಗಿಗೆ ರಂಗ-ಸಂಗೀತದ ನೆರವಿನ ಹಸ್ತ; ಕಲಾಗ್ರಾಮದಲ್ಲಿ ‘ಕೊಡಗಿಗಾಗಿ ರಂಗಸಪ್ತಾಹ’

ಇದೇ ಭಾನುವಾರದಿಂದ ಒಂದು ವಾರ ಕಲಾಗ್ರಾಮದಲ್ಲಿ ಕೊಡಗಿನ ಸಂತ್ರಸ್ತರ ನೆರವಿಗಾಗಿ ರಂಗಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರವಾಹದಿಂದ ತತ್ತರಿಸಿರುವ ಕೊಡಗಿಗೆ ನೆರವಾಗುವ ಉದ್ದೇಶದ ‘ಕೊಡಗಿಗಾಗಿ ರಂಗಸಪ್ತಾಹ’ ಸಾಂಸ್ಕೃತಿಕ ಕಾರ್ಯಕ್ರಮ ಇದೇ ಭಾನುವಾರದಿಂದ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಕಲಾಗ್ರಾಮದಲ್ಲಿ ಆರಂಭವಾಗಲಿದೆ. ನವೆಂಬರ್‌ 11ರಿಂದ 16ರವರೆಗೆ ಪ್ರತಿದಿನ ಸಂಜೆ 5.30ಕ್ಕೆ ಸಂಗೀತ ಕಾರ್ಯಕ್ರಮ ಹಾಗೂ ನಾಟಕ ಪ್ರದರ್ಶನವಿರಲಿದೆ.

‘ಪೀಪಲ್‌ ಫಾರ್‌ ಪೀಪಲ್‌’ ಸಂಘಟನೆ ಕೊಡಗಿನ ನಿರಾಶ್ರಿತರ ನೆರವಿಗಾಗಿ ಈ ಕಾರ್ಯಕ್ರಮವನ್ನು ಅಯೋಜಿಸಿದೆ. ಒಂದು ದಿನದ ಕಾರ್ಯಕ್ರಮಕ್ಕೆ 100 ರೂಪಾಯಿ ಹಾಗೂ ಆರೂ ದಿನಗಳ ಕಾರ್ಯಕ್ರಮಕ್ಕೆ 500 ರೂಪಾಯಿಯ ಸೀಸನ್‌ ಪಾಸ್‌ ಲಭ್ಯವಿದೆ. ಈ ಕಾರ್ಯಕ್ರಮದ ಪ್ರವೇಶ ಶುಲ್ಕದಿಂದ ಬಂದ ಹಣವನ್ನು ಕೊಡಗಿನ ನಿರಾಶ್ರಿತರಿಗೆ ನೀಡಲು ಸಂಘಟನೆ ಮುಂದಾಗಿದೆ. ಬುಕ್‌ ಮೈ ಶೋ ಮತ್ತು ಇವೆಂಟ್ಸ್‌ ಹೈ ಮೂಲಕ ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ಲಭ್ಯವಿದೆ.

ಆನ್‌ಲೈನ್‌ ಬುಕಿಂಗ್‌ಗಾಗಿ ಕ್ಲಿಕ್ ಮಾಡಿ: ಬುಕ್‌ ಮೈ ಶೋ / ಇವೆಂಟ್ಸ್‌ ಹೈ

ಆರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಚೋರ ಚರಣದಾಸ, ಹಯವದನ, ಹುಲಿ ಹಿಡಿದ ಕಡಸು, ಶರೀಫ, ನನ್ನೊಳು ನೀ ನಿನ್ನೊಳು ನಾ ಮತ್ತು ಗುಲಾಬಿ ಗ್ಯಾಂಗು ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕ ಪ್ರದರ್ಶನಕ್ಕೂ ಮೊದಲು ಸಂಗೀತ ಕಾರ್ಯಕ್ರಮ ಇರಲಿದೆ. ಪ್ರತಿ ದಿನ ಕ್ರಮವಾಗಿ ಅನನ್ಯ ಭಟ್, ಸ್ಪರ್ಶ ಆರ್.ಕೆ., ಸುಮಾ ಶಾಸ್ತ್ರಿ, ಪ್ರವೀಣ್‌- ಪ್ರದೀಪ್, ಅನುರಾಧ ಭಟ್ ಮತ್ತು ರಾಮಚಂದ್ರ ಹಡಪದ್‌ ಗಾಯನ ಪ್ರಸ್ತುತ ಪಡಿಸಲಿದ್ದಾರೆ.

ಟಿಕೆಟ್‌ ಹಾಗೂ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 8884764509 / 9008008607

ಕುಸಿದ ಕೊಡಗಿಗೆ ರಂಗ-ಸಂಗೀತದ ನೆರವಿನ ಹಸ್ತ; ಕಲಾಗ್ರಾಮದಲ್ಲಿ ‘ಕೊಡಗಿಗಾಗಿ ರಂಗಸಪ್ತಾಹ’