samachara
www.samachara.com
Final Result: ಯಾರ್ಯಾರು ಪಡೆದ ಮತಗಳು ಎಷ್ಟೆಷ್ಟು?
ಸುದ್ದಿ ಸಾರ

Final Result: ಯಾರ್ಯಾರು ಪಡೆದ ಮತಗಳು ಎಷ್ಟೆಷ್ಟು?

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳು ಹಾಗೂ ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದೆ. ಕಣದಲ್ಲಿದ್ದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಲ್ಲಿದೆ...

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳು ಹಾಗೂ ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದೆ. ಕಣದಲ್ಲಿದ್ದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಲ್ಲಿದೆ.

ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಆನಂದ್ ನ್ಯಾಮಗೌಡ 97,017 ಮತಗಳನ್ನು ಪಡೆದು 39,480 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ 57,537 ಮತ ಪಡೆದಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ 1,25,043 ಮತಗಳನ್ನು ಪಡೆದು 1,09,137 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ ಕೈ ಕೊಟ್ಟಿದ್ದ ಅಭ್ಯರ್ಥಿ ಎಲ್‌. ಚಂದ್ರಶೇಖರ್‌ಗೆ 15,906 ಮತಗಳು ಬಿದ್ದಿವೆ.

Also read: ‘ದೀಪಾವಳಿಗೆ ಸಮ್ಮಿಶ್ರ ಪಟಾಕಿ’: ಬಿಜೆಪಿಯ ನೀರಸ ಪ್ರದರ್ಶನಕ್ಕೆ ಕಾರಣ ಏನು? 

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಬ್ಬರದ ನಡುವೆಯೂ ಕಾಂಗ್ರೆಸ್‌ಗೆ ಭಾರೀ ಗೆಲುವು ಸಿಕ್ಕಿದೆ. ವಿ.ಎಸ್‌. ಉಗ್ರಪ್ಪ 6,28,365 ಮತಗಳನ್ನು ಪಡೆದು 2,43,161 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಜೆ.ಶಾಂತಾಗೆ ಇಲ್ಲಿ 3,85,204 ಮತಗಳು ಸಿಕ್ಕಿವೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಎಲ್‌.ಆರ್‌. ಶಿವರಾಮೇಗೌಡ 5,69,347 ಮತಗಳನ್ನು ಪಡೆದು 3,24,943 ಮತಗಳ ಅಂತರದಿಂದ ಗೆದಿದ್ದಾರೆ. ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಇಲ್ಲಿ ಕಣಕ್ಕಿಳಿದಿದ್ದ ಡಾ. ಸಿದ್ದರಾಮಯ್ಯ 2.44,404 ಮತಗಳನ್ನು ಪಡೆದಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ.ವೈ. ರಾಘವೇಂದ್ರ 5,43,306 ಮತಗಳನ್ನು ಪಡೆದು 52,148 ಮತಗಳ ಅಂತರದಿಂದ ಗೆದಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಇಲ್ಲಿ ಪಡೆದಿರುವ ಮತಗಳು 4,91,158.