samachara
www.samachara.com
ಯೋಗ ಸ್ಟುಡಿಯೊದಲ್ಲಿ ಗುಂಡಿನ ದಾಳಿ; ಅಮೆರಿಕದಲ್ಲಿ ‘ಸಾಮಾನ್ಯ’ವಾಗುತ್ತಿವೆ ಶೂಟೌಟ್!
ಸುದ್ದಿ ಸಾರ

ಯೋಗ ಸ್ಟುಡಿಯೊದಲ್ಲಿ ಗುಂಡಿನ ದಾಳಿ; ಅಮೆರಿಕದಲ್ಲಿ ‘ಸಾಮಾನ್ಯ’ವಾಗುತ್ತಿವೆ ಶೂಟೌಟ್!

ದಾಳಿಕೋರನನ್ನು 40 ವರ್ಷದ ಸ್ಕಾಟ್‌ ಪೌಲ್‌ ಬೇರ್ಲೆ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ದಾಳಿಯ ಉದ್ದೇಶ ಸ್ಪಷ್ಟವಾಗಿಲ್ಲ.

ಅಮೆರಿಕದ ಫ್ಲೋರಿಡಾ ರಾಜ್ಯದ ರಾಜಧಾನಿ ತಲ್ಲಾಃಸಿಯ ಯೋಗ ಸ್ಟುಡಿಯೋದಲ್ಲಿ ಆಗಂತುಕನ ಗುಂಡಿನ ದಾಳಿಯಿಂದ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ಗುಂಡಿನ ದಾಳಿಯ ಬಳಿಕ ಆಗಂತುಕ ತನಗೇ ಗುಂಡು ಹಾರಿಸಿಕೊಂಡಿದ್ದಾನೆ. ಸ್ಥಳೀಯ ಕಾಲಮಾನ ಶುಕ್ರವಾರ ಸಂಜೆ 5.30ರ ಸುಮಾರಿಗೆ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ದಾಳಿಕೋರನನ್ನು 40 ವರ್ಷದ ಸ್ಕಾಟ್‌ ಪೌಲ್‌ ಬೇರ್ಲೆ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ದಾಳಿಯ ಉದ್ದೇಶ ಸ್ಪಷ್ಟವಾಗಿಲ್ಲ.

ಅಮೆರಿಕದಲ್ಲಿ ಗುಂಡಿನ ದಾಳಿಗಳು ನಮ್ಮಲ್ಲಿನ ರಸ್ತೆ ಅಪಘಾತಗಳಿಗಿಂತಲೂ ಸಾಮಾನ್ಯವಾಗುತ್ತಿವೆ. ಅಮೆರಿಕದ ಶೂಟೌಟ್‌ಗಳು ಹಾಗೂ ‘ಗನ್‌ ಲಾಬಿ’ ಬಗ್ಗೆ ‘ಸಮಾಚಾರ’ ಎರಡು ವರ್ಷಗಳ ಹಿಂದೆ ಪ್ರಕಟಿಸಿದ್ದ ವಿಶೇಷ ವರದಿ ಇಲ್ಲಿದೆ:

Also read: ಕೋಟ್ಯಾಂತರ ಡಾಲರ್ ವಹಿವಾಟು ನಡೆಸುವ 'ಗನ್ ಲಾಬಿ' ಒಬಾಮ ಕಣ್ಣೀರಿಗೂ ಮಣಿದಿರಲಿಲ್ಲ!