samachara
www.samachara.com
ಮಾಧ್ಯಮಗಳ ವಿರುದ್ಧ ನ್ಯಾಯಾಲಯದ ಮೊರೆಹೋದ ರಾಘವೇಶ್ವರ ಸ್ವಾಮಿ; ಸಂರಕ್ಷಣೆಗೆ ನಿಂತವರ ಸಮಿತಿ ಪಟ್ಟಿ ನೋಡಿ...
ಸುದ್ದಿ ಸಾರ

ಮಾಧ್ಯಮಗಳ ವಿರುದ್ಧ ನ್ಯಾಯಾಲಯದ ಮೊರೆಹೋದ ರಾಘವೇಶ್ವರ ಸ್ವಾಮಿ; ಸಂರಕ್ಷಣೆಗೆ ನಿಂತವರ ಸಮಿತಿ ಪಟ್ಟಿ ನೋಡಿ...

‘ಸಮಾಚಾರ’ವೂ ಸೇರಿದಂತೆ 10 ಮಾಧ್ಯಮಗಳ ವಿರುದ್ಧ ರಾಘವೇಶ್ವರ ಸ್ವಾಮೀಜಿ ಕೋರ್ಟ್‌ ಮೊರೆ ಹೋಗಿದ್ದಾರೆ. ಇನ್ನೊಂದು ಕಡೆ ಅವರ ಸಂರಕ್ಷಣೆಗೆ ಸಮಿತಿಯೊಂದು ಅಸ್ಥಿತ್ವಕ್ಕೆ ಬಂದಿದೆ. 

ಎರಡನೇ ಅತ್ಯಾಚಾರ ಪ್ರಕರಣದಲ್ಲಿ ಹೊಸನಗರ ಮೂಲದ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಸ್ವಾಮಿ ವಿರುದ್ಧ ಚಾರ್ಜ್‌ ಶೀಟ್‌ ದಾಖಲಾಗಿದೆ. ಇದೇ ಹೊತ್ತಲ್ಲಿ ಹಿಂದೆಂದೂ ಇಲ್ಲದಷ್ಟು ರಾಘವೇಶ್ವರ ಸ್ವಾಮಿಯ ಹುಳುಕುಗಳು ಮಾಧ್ಯಮಗಳ ಮೂಲಕ ಜನರನ್ನು ತಲುಪುತ್ತಿವೆ. ಇದರಿಂದ ಪೀಠವೇ ಕೈತಪ್ಪಿ ಹೋಗಬಹುದು ಎಂಬ ಭಯದಲ್ಲಿ ರಾಘವೇಶ್ವರ ಸ್ವಾಮಿ ಇದ್ದ ಹಾಗಿದೆ. ಅದಕ್ಕಾಗಿ ಸಂಘಟಿತ ಹೋರಾಟಕ್ಕೆ ಇಳಿದಿದ್ದಾರೆ. ಜತೆಗೆ, ‘ಸಮಾಚಾರ’ವೂ ಸೇರಿದಂತೆ ಒಟ್ಟು 10 ಪ್ರಮುಖ ಮಾಧ್ಯಮಗಳ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.

ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಬಂದಿರುವ ಆರೋಪಗಳ ವಿರುದ್ಧ ‘ಶ್ರೀರಾಮಚಂದ್ರಾಪುರ ಮಠ ಸಂರಕ್ಷಣಾ ಸಮಿತಿ’ಯೊಂದು ರಚಿಸಲಾಗಿದೆ. ರಾಘವೇಶ್ವರ ಭಾರತಿ ಸ್ವಾಮಿ ತಮ್ಮ ಹಾಗೂ ಬಾವ ಪ್ರಮುಖ ಸ್ಥಾನದಲ್ಲಿರುವ ಸಮಿತಿಗೆ ಕರ್ನಾಟಕದ ಮಾಜಿ ಡಿಜಿ & ಐಜಿಪಿ ಟಿ ಮಡಿಯಾಲ್‌ ಮಾರ್ಗದರ್ಶಕರಾಗಿದ್ದಾರೆ. ಆರ್‌ಎಸ್‌ಎಸ್‌ ಹಿರಿಯ ಮುಖಂಡ ಮತ್ತು ಶಾಮಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ಸ್ವಾಮಿ ಜತೆ ಆರೋಪ ಹಂಚಿಕೊಂಡಿರುವ ಕಲ್ಲಡ್ಕ ಪ್ರಭಾಕರ ಭಟ್‌ ಸೇರಿದಂತೆ ಹಲವರ ಹೆಸರುಗಳು ಈ ಪಟ್ಟಿಯಲ್ಲಿವೆ. ಬರೋಬ್ಬರಿ 24 ಪುಟಗಳ ದೊಡ್ಡ ಪಟ್ಟಿಯೇ ಇದಾಗಿದ್ದು ಸಮಿತಿಯಲ್ಲಿ ಹಲವು ಉಪ ಸಮಿತಿಗಳನ್ನು ರಚಿಸಲಾಗಿದೆ. ಅದರ ಪೂರ್ಣ ವಿವರಗಳು ಈ ಕೆಳಗಿನಂತಿವೆ.

ಒಂದು ಕಡೆ ಸಮಿತಿಯ ಮೂಲಕ ಸಂಘಟಿತ ಹೋರಾಟಕ್ಕೆ ಇಳಿದಿರುವ ರಾಘವೇಶ್ವರ ಭಾರತಿ ಸ್ವಾಮಿ, ಮತ್ತೊಂದೆಡೆ ‘ಸಮಾಚಾರ’ ಹಾಗೂ ಇತರೆ 9 ಮಾಧ್ಯಮಗಳ ವಿರುದ್ಧ ಕಳೆದ ಮಂಗಳವಾರ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪ್ರಕರಣದ ವಿವರಗಳು ಇನ್ನೂ ಲಭ್ಯವಿಲ್ಲವಾದರೂ, ಅ. 31ರಂದು ಪ್ರಕರಣದಲ್ಲಿ ತೀರ್ಪು ಹೊರಬೀಳಲಿದೆ. ಮಾಧ್ಯಮಗಳ ಪಟ್ಟಿ ಹೀಗಿದೆ.

ಮಾಧ್ಯಮಗಳ ವಿರುದ್ಧ ನ್ಯಾಯಾಲಯದ ಮೊರೆಹೋದ ರಾಘವೇಶ್ವರ ಸ್ವಾಮಿ; ಸಂರಕ್ಷಣೆಗೆ ನಿಂತವರ ಸಮಿತಿ ಪಟ್ಟಿ ನೋಡಿ...

ನ್ಯಾಯಾಲಯದ ದಾಖಲೆಗಳ ಪ್ರಕಾರ, ಅ. 23 ಹಾಗೂ ಅ. 27ರಂದು ಸಮನ್ಸ್ ಜಾರಿ ಮಾಡಲಾಗಿದೆ. ಆದರೆ ಈವರೆಗೆ ‘ಸಮಾಚಾರ’ಕ್ಕೆ ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.