ಶ್ರುತಿ ಹರಿಹರನ್‌ #Me Too ಆರೋಪ; ಅರ್ಜುನ್‌ ಸರ್ಜಾ ವಿರುದ್ಧ ಎಫ್‌ಐಆರ್‌
ಸುದ್ದಿ ಸಾರ

ಶ್ರುತಿ ಹರಿಹರನ್‌ #Me Too ಆರೋಪ; ಅರ್ಜುನ್‌ ಸರ್ಜಾ ವಿರುದ್ಧ ಎಫ್‌ಐಆರ್‌

ಶ್ರುತಿ ಹರಿಹರನ್‌ ನೀಡಿರುವ ದೂರಿನ ಆಧಾರದ ಮೇಲೆ ಕಬ್ಬನ್‌ ಪಾರ್ಕ್‌ ಪೊಲೀಸರು ಅರ್ಜುನ್‌ ಸರ್ಜಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ನಟ ಅರ್ಜುನ್‌ ಸರ್ಜಾ ವಿರುದ್ಧ #Me Too ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್‌ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ಶನಿವಾರ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಅರ್ಜುನ್‌ ಸರ್ಜಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

“ಶ್ರುತಿ ಹರಿಹರನ್‌ ನೀಡಿರುವ ದೂರಿನ ಆಧಾರದ ಮೇಲೇ ಎಫ್‌ಐಆರ್‌ ದಾಖಲಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯಲಿದೆ. ಅರ್ಜುನ್‌ ಸರ್ಜಾ ಅವರನ್ನೂ ಕರೆಸಿ ವಿಚಾರಣೆ ನಡೆಸುತ್ತೇವೆ” ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್‌ ಹೇಳಿದ್ದಾರೆ.

“ಅರ್ಜುನ್‌ ಸರ್ಜಾ 2015ರಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ವಿಸ್ಮಯ ಸಿನಿಮಾ ಚಿತ್ರೀಕರಣದ ರಿಹರ್ಸನ್‌ ವೇಳೆ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ” ಎಂದು ಶ್ರುತಿ ಆರೋಪಿಸಿದ್ದಾರೆ.

“ಎರಡು ವರ್ಷದ ಹಿಂದೆ ಈ ಆರೋಪ ಮಾಡಲು ನನಗೆ ಜೀವ ಭಯ ಇತ್ತು. ಮೀಟೂ ಅಭಿಯಾನ ನನಗೆ ಧೈರ್ಯ ನೀಡಿದೆ. ಹೀಗಾಗಿ ಈಗ ಧೈರ್ಯ ಮಾಡಿ ನನ್ನ ನೋವನ್ನು ಹೇಳಿಕೊಳ್ಳಲು ಮುಂದೆ ಬಂದಿದ್ದೇನ” ಎಂದು ಶ್ರುತಿ ಹೇಳಿದ್ದಾರೆ.