samachara
www.samachara.com
 ಪಿಟ್ಸ್‌ಬರ್ಗ್‌ ಯಹೂದಿ ಪ್ರಾರ್ಥನಾ ಮಂದಿರದಲ್ಲಿ ಗುಂಡಿನ ದಾಳಿ; 11 ಮಂದಿ ಸಾವು
ಸುದ್ದಿ ಸಾರ

ಪಿಟ್ಸ್‌ಬರ್ಗ್‌ ಯಹೂದಿ ಪ್ರಾರ್ಥನಾ ಮಂದಿರದಲ್ಲಿ ಗುಂಡಿನ ದಾಳಿ; 11 ಮಂದಿ ಸಾವು

‘ದಟ್ಟ ಗಡ್ಡ ಬಿಟ್ಟಿದ್ದ ವ್ಯಕ್ತಿ’ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ “ಎಲ್ಲಾ ಯಹೂದಿಗಳೂ ಸಾಯಬೇಕು” ಎಂದು ಘೋಷಣೆ ಕೂಗಿ ಗುಂಡಿನ ಮಳೆಗರೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಅಮೆರಿಕದ ಪಿಟ್ಸ್‌ಬರ್ಗ್‌ನ ಯಹೂದಿ ಪ್ರಾರ್ಥನಾ ಮಂದಿರದಲ್ಲಿ ಶನಿವಾರ ಸಬ್ಬತ್‌ ಆಚರಣೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ದಟ್ಟ ಗಡ್ಡ ಬಿಟ್ಟಿದ್ದ ವ್ಯಕ್ತಿ’ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ "ಎಲ್ಲಾ ಯಹೂದಿಗಳೂ ಸಾಯಬೇಕು” ಎಂದು ಘೋಷಣೆ ಕೂಗಿ ಗುಂಡಿನ ಮಳೆಗರೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಗುಂಡಿನ ದಾಳಿ ಬಳಿಕ ದಾಳಿಕೋರ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಾರ್ಥನಾ ಮಂದಿರದ ಭದ್ರತೆ ನಿಯೋಜನೆಗೊಂಡಿದ್ದ ಪೊಲೀಸರು ದಾಳಿಕೋರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಶೇಷ ಸಂದರ್ಭಗಳಲ್ಲಿ ಈ ಪ್ರಾರ್ಥನಾ ಮಂದಿರಕ್ಕೆ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿರುತ್ತದೆ. ಆದರೂ ದಾಳಿಕೋರ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ದಾಳಿ ನಡೆಸಿರುವುದು ಭದ್ರತಾ ವೈಫಲ್ಯ ಎನ್ನಲಾಗಿದೆ.