ಶಬರಿಮಲೆ ಹಿಂಸಾಚಾರ; 2000 ಜನರ ವಿರುದ್ಧ ಪ್ರಕರಣ, 200 ಮಂದಿ ಬಂಧನ
ಸುದ್ದಿ ಸಾರ

ಶಬರಿಮಲೆ ಹಿಂಸಾಚಾರ; 2000 ಜನರ ವಿರುದ್ಧ ಪ್ರಕರಣ, 200 ಮಂದಿ ಬಂಧನ

ಮಹಿಳೆಯರ ಪ್ರವೇಶಕ್ಕೆ ತಡೆಯೊಡ್ಡಿದ್ದ ಭಕ್ತರ ಸೋಗಿನ ಗೂಂಡಾಗಳು, ಮಹಿಳೆಯರು, ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದರು.

ಎಲ್ಲಾ ವಯೋಮಾನದ ಮಹಿಳೆಯರಿಗೂ ಶಬರಿಮಲೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಭಕ್ತರ ಸೋಗಿನ ಗೂಂಡಾಗಳು ಶಬರಿಮಲೆಯಲ್ಲಿ ನಡೆಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು 2000 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಿಂಸಾಚಾರ ಪ್ರಕರಣದಲ್ಲಿ ಈವರೆಗೆ 200ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಎಲ್ಲಾ ವಯೋಮಾನದ ಮಹಿಳೆರಿಗೂ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅವಕಾಶ ಕೊಡಬೇಕು ಎಂದು ಸುಪ್ರೀಂಕೋರ್ಟ್ ಸೆಪ್ಟೆಂಬರ್‌ 28ರಂದು ತೀರ್ಪು ನೀಡಿತ್ತು. ತೀರ್ಪನ್ನು ವಿರೋಧಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಮಹಿಳೆಯರನ್ನು ಮುಂಡಿಟ್ಟುಕೊಂಡು ಬೃಹತ್‌ ಪ್ರತಿಭಟನೆ ನಡೆಸಿದ್ದರು.

Also read: ಮಹಿಳೆಯರ ಹಣಿಯಲು ಮಹಿಳೆಯರೇ ಗುರಾಣಿ; ಸುಪ್ರೀಂ ತೀರ್ಪಿನ ವಿರುದ್ಧ ಬೀದಿಗಿಳಿದವರು ಯಾರು?

ತೀರ್ಪಿನ ಬಳಿಕ ಮೊದಲ ಬಾರಿಗೆ ಅಕ್ಟೋಬರ್ 18ರಂದು ತಿಂಗಳ ಪೂಜೆಗೆ ಅಯ್ಯಪ್ಪ ದೇಗುಲದ ಬೀಗ ತೆರೆಯಲಾಗಿತ್ತು. ಈ ವೇಳೆ ಮಹಿಳೆಯರ ಪ್ರವೇಶಕ್ಕೆ ತಡೆಯೊಡ್ಡಿದ ಭಕ್ತರ ಸೋಗಿನ ಗೂಂಡಾಗಳು, ಮಹಿಳೆಯರು, ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದರು.

ನ್ಯಾಯಾಲಯದ ಆದೇಶ ಪಾಲನೆಗೆ ಅಡ್ಡಿ ಹಾಗೂ ಹಿಂಸಾಚಾರ ಪ್ರಕರಣಗಳಡಿ ಪೊಲೀಸರು ಎರ್ನಾಕುಲಂನಿಂದ 71 ಮಂದಿ, ಕೋಯಿಕ್ಕೋಡ್‌ನಿಂದ 40 ಮಂದಿ ಹಾಗೂ ಪಾಲಕ್ಕಾಡ್‌ ಮತ್ತು ಪಥನಂಥಿಟ್ಟ ಜಿಲ್ಲೆಗಳಿಂದ ತಲಾ 30 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Also read: ಉದ್ವಿಗ್ನ ಶಬರಿಮಲೆ; ಹಿಂಸಾಚಾರ, ನಿಷೇಧಾಜ್ಞೆ ಮತ್ತು ದೇಗುಲದಲ್ಲಿ ದರ್ಶನ

Also read: ಶಬರಿಮಲೆ ಎಂಬ ಸ್ಥಾಪಿತ ನಂಬಿಕೆ ಮತ್ತು 250 ಕೋಟಿ ರೂ. ವಾರ್ಷಿಕ ಆದಾಯದ ಹಿಂದಿನ ಅಸಲಿ ಕತೆ!