ಸಿಬಿಐ ತಿಕ್ಕಾಟ: ‘ಬೆಳವಣಿಗೆ’ಗಳ ಬಗ್ಗೆ ವಿವರಣೆ ಕೇಳಿದ ಪ್ರಧಾನಿಮಂತ್ರಿ ಕಚೇರಿ
ಸುದ್ದಿ ಸಾರ

ಸಿಬಿಐ ತಿಕ್ಕಾಟ: ‘ಬೆಳವಣಿಗೆ’ಗಳ ಬಗ್ಗೆ ವಿವರಣೆ ಕೇಳಿದ ಪ್ರಧಾನಿಮಂತ್ರಿ ಕಚೇರಿ

“ಸಿಬಿಐ ಒಳಗೆ ಏನೇನು ನಡೆಯುತ್ತಿದೆ ಎಂಬುದರ ಪೂರ್ಣ ಮಾಹಿತಿಯನ್ನು ಪ್ರಧಾನಮಂತ್ರಿ ಕೇಳಿದ್ದಾರೆ” ಎಂದು ಪ್ರಧಾನಮಂತ್ರಿ ಕಚೇರಿ ಹೇಳಿದೆ.

ಕೊನೆಗೂ ಸಿಬಿಐ ಹಿರಿಯ ಅಧಿಕಾರಿಗಳ ತಿಕ್ಕಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶವಾಗಿದೆ. ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ನಡುವಿನ ತಿಕ್ಕಾಟದ ಬಗ್ಗೆ ಪ್ರಧಾನಮಂತ್ರಿ ಕಚೇರಿ ಸಿಬಿಐನಿಂದ ವಿವರಣೆ ಕೇಳಿದೆ.

“ಸಿಬಿಐ ಒಳಗೆ ಏನೇನು ನಡೆಯುತ್ತಿದೆ ಎಂಬುದರ ಪೂರ್ಣ ಮಾಹಿತಿಯನ್ನು ಪ್ರಧಾನಮಂತ್ರಿ ಕೇಳಿದ್ದಾರೆ” ಎಂದು ಪ್ರಧಾನಮಂತ್ರಿ ಕಚೇರಿ ಹೇಳಿದೆ.

Also read: ಪ್ರಧಾನಿ ಮೋದಿಯ ‘ನೀಲಿ ಕಣ್ಣಿನ ಹುಡುಗ’ ರಾಕೇಶ್‌ ಅಸ್ತಾನಾ; ಸಿಬಿಐ ಟಾಪ್‌ ಕಾಪ್‌ನ ವಿವಾದಿತ ಚರಿತ್ರೆ ಇದು!

ರಾಕೇಶ್‌ ಅಸ್ತಾನಾ ಪ್ರಕರಣದಲ್ಲಿ ಸಿಬಿಐನ ಡಿವೈಎಸ್‌ಪಿ ದೇವೇಂದರ್‌ ಕುಮಾರ್‌ ಅವರನ್ನು ಸಿಬಿಐ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ದೇವೇಂದರ್‌ ಕುಮಾರ್‌ ಮೊಯಿನ್‌ ಖುರೇಶಿ ಪ್ರಕರಣದ ವಿಶೇಷ ತನಿಖಾ ತಂಡದಲ್ಲಿದ್ದರು.

Also read: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ವಿರುದ್ಧ ಸಿಬಿಐನಲ್ಲೇ ಎಫ್‌ಐಆರ್‌

ಉದ್ಯಮಿ ಮೊಯಿನ್‌ ಖುರೇಶಿ ಪ್ರಕರಣದಲ್ಲಿ ಸಿಬಿಐ ರಾಕೇಶ್ ಅಸ್ತಾನಾ, ದೇವೇಂದರ್‌ ಕುಮಾರ್‌ ಸೇರಿದಂತೆ ಸಿಬಿಐ ವಿಶೇಷ ತನಿಖಾ ದಳದ ಕೆಲ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.

ಮೊಯಿನ್‌ ಖುರೇಶಿ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸಿಬಿಐನ ಮಾಜಿ ನಿರ್ದೇಶಕ ಎ.ಪಿ. ಸಿಂಗ್‌ ವಿರುದ್ಧವೂ ಆರೋಪ ಕೇಳಿಬಂದಿದೆ.