samachara
www.samachara.com
ತೋಂಟದಾರ್ಯ ಪೀಠಾಧಿಪತಿಯಾಗಿ  ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ನೇಮಕ
ಸುದ್ದಿ ಸಾರ

ತೋಂಟದಾರ್ಯ ಪೀಠಾಧಿಪತಿಯಾಗಿ ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ನೇಮಕ

ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಕೂಡಾ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

ಗದಗಿನ ತೋಂಟದಾರ್ಯ ಮಠಕ್ಕೆ ನೂತನ ಪೀಠಾಧಿಪತಿಯಾಗಿ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಮಹಾಸ್ವಾಮಿ ಅವರನ್ನು ನೇಮಿಸಲಾಗಿದೆ. ಸಿದ್ದರಾಮ ಮಹಾಸ್ವಾಮಿ ತೋಂಟದಾರ್ಯ ಮಠದ 20ನೇ ಪೀಠಾಧಿಪತಿಯಾಗಲಿದ್ದಾರೆ.

ತೋಂಟದಾರ್ಯ ಮಠದ ಹಿರಿಯ ಸ್ವಾಮೀಜಿ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿ ಅವರ ನಿಧನದ ಬಳಿಕ ತೆರವಾಗಿದ್ದ ಪೀಠಕ್ಕೆ ನಾಗನೂರು ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ. ತಮ್ಮ ಬಳಿಕ ಸಿದ್ದರಾಮ ಮಹಾಸ್ವಾಮಿ ಅವರನ್ನೇ ಪೀಠಕ್ಕೆ ನೇಮಿಸಬೇಕೆಂದು ಸಿದ್ಧಲಿಂಗ ಸ್ವಾಮೀಜಿ 15 ವರ್ಷದ ಹಿಂದೆಯೇ ವಿಲ್‌ ಬರೆದಿಟ್ಟಿದ್ದರು ಎನ್ನಲಾಗಿದೆ.

Also read: ‘ವ್ಯಕ್ತಿ ಪರಿಚಯ’: ಮೆಡಿಕಲ್ ಕಾಲೇಜು ಸ್ಥಾಪನೆ ಒಂದು ದಂಧೆ ಎಂದವರು ತೋಂಟದಾರ್ಯ ಶ್ರೀ!

ಭಾನುವಾರ ಸಿದ್ಧಲಿಂಗ ಸ್ವಾಮೀಜಿ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಆನಂದಪುರದ ಮಲ್ಲಿಕಾರ್ಜುನ ಸ್ವಾಮಿಜಿ ಮಠದ ಉತ್ತರಾಧಿಕಾರಿ ಘೋಷಣೆ ಮಾಡಿದರು. ಸಿದ್ದರಾಮ ಸ್ವಾಮೀಜಿ ಕೂಡಾ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

ಸಿದ್ಧಲಿಂಗ ಸ್ವಾಮೀಜಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಮುಂಡರಗಿ ಶಾಖಾ ಮಠದ ನಿಜಗುಣಾನಂದ ಸ್ವಾಮೀಜಿ ಅವರ ನೇಮಕವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಸಿದ್ದರಾಮ ಸ್ವಾಮೀಜಿಯೇ ಉತ್ತರಾಧಿಕಾರಿಯಾಗಬೇಕೆಂಬುದನ್ನು ಸಿದ್ಧಲಿಂಗ ಸ್ವಾಮೀಜಿ 15 ವರ್ಷಗಳ ಹಿಂದೆಯೇ ನಿರ್ಧರಿಸಿದ್ದಾರೆ.