samachara
www.samachara.com
 ಅರ್ಜುನ್‌ ಸರ್ಜಾ ವಿರುದ್ಧ #Me Too ಆರೋಪ: ಶ್ರುತಿ ಹರಿಹರನ್‌ ಪರ ನಿಂತ ಶ್ರದ್ಧಾ, ಪ್ರಕಾಶ್ ರೈ
ಸುದ್ದಿ ಸಾರ

ಅರ್ಜುನ್‌ ಸರ್ಜಾ ವಿರುದ್ಧ #Me Too ಆರೋಪ: ಶ್ರುತಿ ಹರಿಹರನ್‌ ಪರ ನಿಂತ ಶ್ರದ್ಧಾ, ಪ್ರಕಾಶ್ ರೈ

ಅರ್ಜುನ್‌ ಸರ್ಜಾ ವಿರುದ್ಧ #Me Too ಆರೋಪ ಮಾಡಿರುವ ಶ್ರುತಿ ಹರಿಹರನ್‌ ಪರವಾಗಿ ಕನ್ನಡ ಚಲನಚಿತ್ರ ರಂಗದ ನಟ ನಟಿಯರು ನಿಂತಿದ್ದಾರೆ.

ನಟ ಅರ್ಜುನ್‌ ಸರ್ಜಾ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು, ರೆಸಾರ್ಟ್‌ಗೆ ಕರೆದಿದ್ದರು ಎಂದು ಆರೋಪಿಸಿರುವ ನಟಿ ಶ್ರುತಿ ಹರಿಹರನ್‌ ಪರವಾಗಿ ನಟಿ ಶ್ರದ್ಧಾ ಶ್ರೀನಾಥ್‌ ಹಾಗೂ ನಟ ಪ್ರಕಾಶ್‌ ರೈ ನಿಂತಿದ್ದಾರೆ.

ತಾಪ್ಸಿ ಮತ್ತು ಶ್ರುತಿ ಹರಿಹರನ್‌ ನನ್ನ ಪಾಲಿನ ಹೀರೋಗಳು ಎಂದು ಶ್ರದ್ಧಾ ಟ್ವೀಟ್‌ ಮಾಡಿದ್ದಾರೆ.

ಅರ್ಜುನ್ ಸರ್ಜಾ ಈ ಆರೋಪಗಳನ್ನು ಅಲ್ಲಗಳೆದಿದ್ದರೂ ಕ್ಷಮೆ ಕೇಳುವುದು ದೊಡ್ಡತನವಾಗಲಿದೆ ಎಂದು ಪ್ರಕಾಶ್‌ ರೈ ಹೇಳಿದ್ದಾರೆ.

ಇವರಷ್ಟೇ ಅಲ್ಲದೆ ಕನ್ನಡ ಚಿತ್ರರಂಗದ ಹಲವು ನಟಿಯರು ಶ್ರುತಿ ಹರಿಹರನ್‌ಗೆ ಬೆಂಬಲ ನೀಡಿದ್ದಾರೆ. ತಮ್ಮೊಂದಿಗೂ ಇಂಥ ಕೆಟ್ಟ ಅನುಭವಗಳಾಗಿವೆ ಎಂದಿರುವ ಕೆಲ ನಟಿಯರು ನಿಖರವಾಗಿ ಯಾರ ವಿರುದ್ಧವೂ ಆರೋಪ ಮಾಡಿಲ್ಲ.

ಈ ಆರೋಪವನ್ನು ತಳ್ಳಿ ಹಾಕಿರುವ ಅರ್ಜುನ್‌ ಸರ್ಜಾ, ಶ್ರುತಿ ಹರಿಹರನ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ.

ಮಾಡಿರುವ ಆರೋಪದ ಬಗ್ಗೆ ಸೂಕ್ತ ಸಾಕ್ಷ್ಯ ಒದಗಿಸದಿದ್ದರೆ ಕನ್ನಡ ಚಿತ್ರರಂಗದಿಂದ ಶ್ರುತಿ ಅವರನ್ನು ಬಹಿಷ್ಕರಿಸಲು ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಹಾಗೂ ಕಲಾವಿದರ ಒಕ್ಕೂಟಕ್ಕೆ ಪತ್ರ ಬರೆಯುವುದಾಗಿ ನಿರ್ಮಾಪಕ ಮುನಿರತ್ನ ಹೇಳಿದ್ದಾರೆ.