samachara
www.samachara.com
 #MeToo ಸಮಯ ಬಂದಾಗ ಸಾಕ್ಷ್ಯ ಒದಗಿಸುತ್ತೇನೆ: ಶ್ರುತಿ ಹರಿಹರನ್‌
ಸುದ್ದಿ ಸಾರ

#MeToo ಸಮಯ ಬಂದಾಗ ಸಾಕ್ಷ್ಯ ಒದಗಿಸುತ್ತೇನೆ: ಶ್ರುತಿ ಹರಿಹರನ್‌

“ನನಗೆ ಈಗ ಪಬ್ಲಿಸಿಟಿಯ ಅಗತ್ಯವಿಲ್ಲ. ಪ್ರಚಾರಕ್ಕಾಗಿ ನಾನು ಈ ಆರೋಪ ಮಾಡುತ್ತಿಲ್ಲ. ಅರ್ಜುನ್‌ ಸರ್ಜಾ ನನ್ನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದರೆ ನಾನು ಸಾಕ್ಷ್ಯಗಳನ್ನು ಒದಸುತ್ತೇನೆ...”

ಅರ್ಜುನ್‌ ಸರ್ಜಾ ವಿರುದ್ಧ #MeToo ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್‌, ಸಮಯ ಬಂದಾಗ ಈ ಆರೋಪದ ಬಗ್ಗೆ ಸಾಕ್ಷ್ಯ ಒದಗಿಸುವುದಾಗಿ ಹೇಳಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿದ ಶ್ರುತಿ ಹರಿಹರನ್, “ಸಾಕಷ್ಟು ಸ್ಟಾರ್‌ ನಟರ ಜತೆಗೆ ನಾನು ನಟಿಸಿದ್ದೇನೆ. ಆದರೆ, ಅವರ್ಯಾರೂ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡಿಲ್ಲ. ಅರ್ಜುನ್‌ ಸರ್ಜಾ ವಿಸ್ಮಯ ಚಿತ್ರೀಕರಣ ಮುಗಿದ ಬಳಿಕ ರೆಸಾರ್ಟ್‌ಗೆ ಕರೆದಿದ್ದರು. ನಾನು ಅದಕ್ಕೆ ನೋ ಎಂದಿದ್ದೆ. ಆಗ ಇದನ್ನೆಲ್ಲಾ ಹೇಳಿಕೊಳ್ಳುವ ಧೈರ್ಯ ಇರಲಿಲ್ಲ. ಹೀಗಾಗಿ ಆರೋಪ ಮಾಡಿರಲಿಲ್ಲ” ಎಂದರು.

Also read: ಅರ್ಜುನ್‌ ಸರ್ಜಾ ವಿರುದ್ಧ #Me Too ಆರೋಪ: ಶ್ರುತಿ ಹರಿಹರನ್‌ ಪರ ನಿಂತ ಶ್ರದ್ಧಾ, ಪ್ರಕಾಶ್ ರೈ

“ಧ್ರುವ ಸರ್ಜಾ ಅಭಿಮಾನಿ ಬಳಗದಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ನಾನು ಯಾವುದಕ್ಕೂ ಹೆದರುವುದಿಲ್ಲ, ನನ್ನ ಹೋರಾಟ ಮುಂದುವರಿಸುತ್ತೇನೆ. ಅರ್ಜುನ್‌ ಸರ್ಜಾ ನನ್ನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದರೆ ನಾನು ಸಾಕ್ಷ್ಯಗಳನ್ನು ಒದಸುತ್ತೇನೆ” ಎಂದು ಹೇಳಿದರು.

“ನನಗೆ ಈಗ ಪಬ್ಲಿಸಿಟಿಯ ಅಗತ್ಯವಿಲ್ಲ. ಪ್ರಚಾರಕ್ಕಾಗಿ ನಾನು ಈ ಆರೋಪ ಮಾಡುತ್ತಿಲ್ಲ. ಸರ್ಜಾ ಕುಟುಂಬದವರು ಯಾರೂ ಈವರೆಗೆ ನನ್ನನ್ನು ಸಂಪರ್ಕಿಸಿಲ್ಲ. ಈ ಪ್ರಕರಣದ ತಾರ್ತಿಕ ಅಂತ್ಯ ಕಾಣಬೇಕು. ಈ ಪ್ರಕರಣದಿಂದ ನನಗೆ ತುಂಬಾ ನೋವಾಗಿದೆ” ಎಂದರು.