samachara
www.samachara.com
ಕೊನೆಗೂ #MeToo ತಲೆಡಂಡ; ಸಚಿವ ಸ್ಥಾನಕ್ಕೆ ಎಂ.ಜೆ. ಅಕ್ಬರ್‌ ರಾಜೀನಾಮೆ
ಸುದ್ದಿ ಸಾರ

ಕೊನೆಗೂ #MeToo ತಲೆಡಂಡ; ಸಚಿವ ಸ್ಥಾನಕ್ಕೆ ಎಂ.ಜೆ. ಅಕ್ಬರ್‌ ರಾಜೀನಾಮೆ

“ನಾನು ನನ್ನ ಕಚೇರಿಯಿಂದ ಹೊರ ಬಂದು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವರ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇನೆ” ಎಂದು ಅಕ್ಬರ್‌ ಹೇಳಿದ್ದಾರೆ.

#MeToo ಅಭಿಯಾನದ ಒತ್ತಡ ಕೊನೆಗೂ ವಿದೇಶಾಂಗ ಖಾತೆಯ ರಾಜ್ಯ ಸಚಿವ ಎಂ.ಜೆ. ಅಕ್ಬರ್‌ ರಾಜೀನಾಮೆ ನೀಡುವಂತೆ ಮಾಡಿದೆ. ಅಕ್ಬರ್‌ ಬುಧವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

“ನಾನು ನನ್ನ ಕಚೇರಿಯಿಂದ ಹೊರ ಬಂದು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವರ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇನೆ” ಎಂದು ಅಕ್ಬರ್‌ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದೇಶ ಪ್ರವಾಸದಿಂದ ವಾಪಸ್‌ ಬಂದ ಅಕ್ಬರ್‌ ಅಂದೇ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಎಂ.ಜೆ. ಅಕ್ಬರ್ ಪ್ರಕಟಣೆ
ಎಂ.ಜೆ. ಅಕ್ಬರ್ ಪ್ರಕಟಣೆ
/ಎಎನ್‌ಐ

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಎಂ.ಜೆ. ಅಕ್ಬರ್ ನೈಜೀರಿಯಾ ಪ್ರವಾಸದಿಂದ ಭಾನುವಾರ ವಾಪಸ್‌ ಬಂದಿದ್ದರು. ಅಕ್ಬರ್‌ ಭಾರತಕ್ಕೆ ಹಿಂದಿರುಗಿದ ಬೆನ್ನಲ್ಲೇ ಅವರು ರಾಜೀನಾಮೆ ನೀಡಬೇಕೆಂಬ ಒತ್ತಡ ಹೆಚ್ಚಾಗಿತ್ತು. ಭಾನುವಾರ ದೆಹಲಿಯಲ್ಲಿ ಪರ್ತಕರ್ತೆಯರು ಅಕ್ಬರ್‌ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು.

ಭಾರತದಲ್ಲಿ #MeToo ಅಭಿಯಾನ ದೊಡ್ಡದಾದ ಬೆನ್ನಲ್ಲೇ ಎಂ.ಜೆ. ಅಕ್ಬರ್ ವಿರುದ್ಧ ಹಲವು ಪತ್ರಕರ್ತೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅಕ್ಬರ್‌ ವಿರುದ್ಧ ಆರೋಪ ಹೆಚ್ಚಾದ ಬಳಿಕ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು. ಆದರೆ ಆರಂಭದಲ್ಲಿ ತಮ್ಮ ವಿರುದ್ಧ ಆರೋಪ ಮಾಡಿದವರ ಮೇಲೆ ಪ್ರಕರಣದ ದಾಖಲಿಸಿದ ಅಕ್ಬರ್‌ ರಾಜೀನಾಮೆ ಹಿಂದೇಟು ಹಾಕಿದ್ದರು.

ಇದೀಗ ಮುಂಬರಲಿರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳ ಮೇಲೆ ಈ ಲೈಂಗಿಕ ಕಿರುಕುಳದ ಆರೋಪ ಪ್ರಭಾವ ಬೀರಬಹುದೆಂಬ ಕಾರಣಕ್ಕೆ ಅಕ್ಬರ್‌ ಅವರಿಂದ ರಾಜೀನಾಮೆ ಪಡೆಯಲಾಗಿದೆ.