ಲೈವ್‌ ಮೊಬೈಲ್‌ ಟಿವಿ, ‘ಎನ್‌ಡಿಟಿವಿ’ಯಿಂದ ಹೊಸ ಪ್ರಯೋಗ
ಸುದ್ದಿ ಸಾರ

ಲೈವ್‌ ಮೊಬೈಲ್‌ ಟಿವಿ, ‘ಎನ್‌ಡಿಟಿವಿ’ಯಿಂದ ಹೊಸ ಪ್ರಯೋಗ

ಸ್ಮಾರ್ಟ್‌ಫೋನ್‌ಗಳ ಬಳಕೆದಾರರಿಗೆ ವರ್ಟಿಕಲ್‌ ಮೋಡ್‌ನಲ್ಲಿರುವ ಜಗತ್ತಿನ ಏಕೈಕ ಲೈವ್‌ ಮೊಬೈಲ್‌ ಚಾನಲ್‌ ‘ಎನ್‌ಡಿಟಿವಿ ಹಾಪ್’ ಎಂಬುದಾಗಿ ಕಂಪನಿ ಹೇಳಿಕೊಂಡಿದೆ.

ಭಾರತದ ಪ್ರಮುಖ ಮಾಧ್ಯಮ ಸಂಸ್ಥೆ ‘ಎನ್‌ಡಿಟಿವಿ’ ಜಗತ್ತಿನಲ್ಲೇ ಮೊದಲ ಬಾರಿಗೆ ಲೈವ್‌ ಮೊಬೈಲ್‌ ಟಿವಿ ಹೊರ ತಂದಿದೆ. ಇದಕ್ಕೆ ‘ಎನ್‌ಡಿಟಿವಿ ಹಾಪ್‌’ ಎಂದು ಹೆಸರಿಡಲಾಗಿದೆ. ಏರ್‌ಟೆಲ್‌ ಸಹಯೋಗದೊಂದಿದೆ ಈ ಚಾನಲ್‌ ಆರಂಭಿಸಲಾಗಿದ್ದು ಮೊಬೈಲ್‌ ಬಳಕೆದಾರರಿಗೆ ಮಾತ್ರ ಇದು ಲಭ್ಯವಿರಲಿದೆ.

ಸ್ಮಾರ್ಟ್‌ಫೋನ್‌ಗಳ ಬಳಕೆದಾರರಿಗೆ ವರ್ಟಿಕಲ್‌ ಮೋಡ್‌ನಲ್ಲಿರುವ ಜಗತ್ತಿನ ಏಕೈಕ ಲೈವ್‌ ಮೊಬೈಲ್‌ ಚಾನಲ್‌ ಇದು ಎಂದು ಕಂಪನಿ ಹೇಳಿಕೊಂಡಿದೆ.

ಏರ್‌ಟೆಲ್ ಟಿವಿ ಬಳಕೆದಾರರಿಗೆ ಇದು ನೇರವಾಗಿ ಲಭ್ಯವಾಗಲಿದ್ದು ಉಳಿದ ಐಒಎಸ್‌ ಮತ್ತು ಆಂಡ್ರಾಯ್ಡ್‌ ಬಳಕೆದಾರರು https://hop.live ಗೆ ಭೇಟಿ ನೀಡಿ ಆಪ್ ಡೌನ್ಲೋಡ್‌ ಮಾಡಿಕೊಂಡು ವಾಹಿನಿ ವೀಕ್ಷಿಸಬಹುದಾಗಿದೆ.

ಪ್ರತಿ ದಿನ 8 ಗಂಟೆಗಳ ತಾಜಾ ಕಾರ್ಯಕ್ರಮಗಳನ್ನು ನಿರ್ಮಿಸಿ ಲೈವ್‌ ಪ್ರಸಾರ ಮಾಡಲಾಗುತ್ತದೆ ಎಂದು ಎನ್‌ಡಿಟಿವಿ ಸಂಸ್ಥೆ ಹೇಳಿಕೊಂಡಿದೆ. ಸಂಸ್ಥೆ ಜತೆ ನೇರ ಸಂಪರ್ಕ, ಆಪ್‌ನಿಂದಲೇ ನೇರವಾಗಿ ಕ್ಲಿಕ್‌ ಮಾಡಿ ವಸ್ತುಗಳನ್ನು ಖರೀದಿಸುವ ಅವಕಾಶ ಇದೆ ಎಂದು ಸಂಸ್ಥೆ ತಿಳಿಸಿದೆ.

‘ಯುವ ಜನರಿಗಾಗಿ ತಾಜಾ ಕಾರ್ಯಕ್ರಮಗಳನ್ನು ಪೂರೈಸಲಿದ್ದೇವೆ. ನಮ್ಮ ಬೇರೆ ಯಾವುದೇ ಸಂಸ್ತೆಗಳಿಂದ ಇಲ್ಲಿಗೆ ಯಾವುದೇ ವಿಷಯ-ವಸ್ತುಗಳನ್ನು ತರುವುದಿಲ್ಲ’ ಎಂದು ಎನ್‌ಡಿಟಿವಿ ಗ್ರೂಪ್‌ ಸಿಇಒ ಸುಪರ್ಣ ಸಿಂಗ್‌ ಹೇಳಿದ್ದಾರೆ.