ದೆಹಲಿ ಪ್ರವೇಶಕ್ಕೆ ಮಧ್ಯರಾತ್ರಿ ಅವಕಾಶ; ಕ್ರಾಂತಿ ಯಾತ್ರೆ ಮುಗಿಸಿದ ರೈತರು
ಸುದ್ದಿ ಸಾರ

ದೆಹಲಿ ಪ್ರವೇಶಕ್ಕೆ ಮಧ್ಯರಾತ್ರಿ ಅವಕಾಶ; ಕ್ರಾಂತಿ ಯಾತ್ರೆ ಮುಗಿಸಿದ ರೈತರು

ಮಂಗಳವಾರ ಮಧ್ಯರಾತ್ರಿ ದೆಹಲಿಯ ಕಿಸಾನ್‌ ಘಾಟ್‌ಗೆ ತೆರಳಿದ ರೈತರು ಪ್ರತಿಭಟನೆ ಮುಕ್ತಾಯಗೊಳಿಸಿ ತಮ್ಮ ಹಳ್ಳಿಗಳಿಗೆ ಮರಳಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿಗೆ ನುಗ್ಗಿದ್ದ ಉತ್ತರ ಭಾರತದ ರೈತರು ಮಂಗಳವಾರ ಮಧ್ಯ ರಾತ್ರಿ ತಮ್ಮ ಪ್ರತಿಭಟನೆ ‘ಕಿಸಾನ್‌ ಕ್ರಾಂತಿ ಯಾತ್ರೆ’ಯನ್ನು ಮುಕ್ತಾಯಗೊಳಿಸಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ದೆಹಲಿಗೆ ಬರುತ್ತಿದ್ದ ರೈತರನ್ನು ಪೊಲೀಸರು ಉತ್ತರ ಪ್ರದೇಶ ಮತ್ತು ದೆಹಲಿಯ ಗಡಿಭಾಗದಲ್ಲೇ ತಡೆದಿದ್ದರು. ಪ್ರತಿಭಟನೆಗೆ ಬಂದ ರೈತರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.

Also read: ಅನ್ನದಾತರ ಮೇಲೆ ಪ್ರಹಾರ: ನಿಜ ಹೇಳಿ, ರೈತರು ಮುಂದಿಟ್ಟ ಈ ಬೇಡಿಕೆಗಳಲ್ಲಿ ತಪ್ಪೇನಿದೆ?

ಮಂಗಳವಾರ ಮಧ್ಯಾಹ್ನದ ವೇಳೆಗೆ ಕೇಂದ್ರ ಸಚಿವರ ಜತೆಗೆ ರೈತ ಮುಖಂಡರು ನಡೆಸಿದ್ದ ಮಾತುಕತೆ ಮುರಿದು ಬಿದ್ದಿತ್ತು. 11 ಪ್ರಮುಖ ಬೇಡಿಕೆಗಳಲ್ಲಿ ಕೇಂದ್ರ ಸರಕಾರ 7ಕ್ಕೆ ಮಾತ್ರ ಒಪ್ಪಿದೆ ಎಂಬ ಕಾರಣಕ್ಕೆ ಪ್ರತಿಭಟನೆ ಮುಂದುವರಿಸಲು ರೈತ ಮುಖಂಡರು ನಿರ್ಧರಿಸಿದ್ದರು.

Also read: ಗಾಂಧಿ ಜಯಂತಿ ದಿನವೇ ರೈತರ ವಿರುದ್ಧ ತಿರುಗಿ ಬಿದ್ದ ಸರಕಾರ; ದಿಲ್ಲಿ ಪ್ರವೇಶಿದಂತೆ ಹೆದ್ದಾರಿಯಲ್ಲೇ ಪ್ರಹಾರ

Also read: ಮುರಿದು ಬಿದ್ದ ಮಾತುಕತೆ; ದೆಹಲಿ ಗೇಟ್‌ನಲ್ಲಿ ಮುಂದುವರಿದ ರೈತರ ಪ್ರತಿಭಟನೆ

ಆದರೆ, ಮಧ್ಯ ರಾತ್ರಿಯ ವೇಳೆಗೆ ರೈತರು ದೆಹಲಿಗೆ ಪ್ರವೇಶಿಸಲು ಪೊಲೀಸರು ಅವಕಾಶ ನೀಡಿದ್ದರು. ಮಧ್ಯರಾತ್ರಿ ಚೌಧರಿ ಚರಣ್‌ ಸಿಂಗ್ ಅವರ ಸಮಾಧಿ ಕಿಸಾನ್‌ ಘಾಟ್‌ಗೆ ತೆರಳಿದ ರೈತರು ಪ್ರತಿಭಟನೆ ಮುಕ್ತಾಯಗೊಳಿಸಿ ತಮ್ಮ ತಮ್ಮ ಹಳ್ಳಿಗಳಿಗೆ ಹಿಂದಿರುಗಿದರು.

“ದೆಹಲಿ ಯಾತ್ರೆಯನ್ನು ಮಾತ್ರ ಮುಕ್ತಾಯಗೊಳಿಸಿದ್ದೇವೆ. ಸಾಲಮನ್ನಾ ಹಾಗೂ ಸ್ವಾಮಿನಾಥನ್‌ ವರದಿ ಜಾರಿಯ ಬೇಡಿಕೆಗಳು ಈಡೇರುವವರೆಗೂ ಸರಕಾರದ ರೈತರ ಪ್ರತಿಭಟನೆ ಮುಂದುವರಿಯಲಿದೆ” ಎಂದು ಭಾರತೀಯ ಕಿಸಾನ್‌ ಒಕ್ಕೂಟದ ಅಧ್ಯಕ್ಷ ನರೇಶ್‌ ಟಿಕೈತ್‌ ಹೇಳಿದ್ದಾರೆ.