ಗೌತಮ್‌ ನವಲಖ ಗೃಹ ಬಂಧನ ಅಸಿಂಧು; ಬಿಡುಗಡೆಗೆ ಆದೇಶಿಸಿದ ದೆಹಲಿ ಹೈಕೋರ್ಟ್‌
ಸುದ್ದಿ ಸಾರ

ಗೌತಮ್‌ ನವಲಖ ಗೃಹ ಬಂಧನ ಅಸಿಂಧು; ಬಿಡುಗಡೆಗೆ ಆದೇಶಿಸಿದ ದೆಹಲಿ ಹೈಕೋರ್ಟ್‌

ಪುಣೆ ಪೊಲೀಸರು ಅಧೀನ ನ್ಯಾಯಾಲಯದ ಅನುಮತಿಯ ಮೇಲೆ ದೆಹಲಿಯಲ್ಲಿರುವ ಗೌತಮ್‌ ನವಲಖ ಅವರನ್ನು ವಶಕ್ಕೆ ತೆಗೆದುಕೊಳ್ಳುವುದು ಕಾನೂನಿನ ಪ್ರಕಾರ ಸರಿಯಲ್ಲ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಸಾಮಾಜಿಕ ಕಾರ್ಯಕರ್ತ ಗೌತಮ್‌ ನವಲಖ ಗೃಹ ಬಂಧನ ಕಾನೂನಿನ ಪ್ರಕಾರ ಸಮರ್ಥನೀಯವಲ್ಲ ಎಂದಿರುವ ದೆಹಲಿ ಹೈಕೋರ್ಟ್‌ ಅವರ ಬಿಡುಗಡೆಗೆ ಸೋಮವಾರ ಆದೇಶಿಸಿದೆ.

ನಕ್ಸಲರ ಜತೆಗೆ ಸಂಪರ್ಕ ಹೊಂದಿರುವ ಹಾಗೂ ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಗೌತಮ್‌ ಸೇರಿ ಐದು ಮಂದಿ ಸಾಮಾಜಿಕ ಕಾರ್ಯಕರ್ತರನ್ನು ಪುಣೆ ಪೊಲೀಸರು ಆಗಸ್ಟ್‌ 28ರಂದು ಬಂಧಿಸಿದ್ದರು. ಈ ಬಂಧನವನ್ನು ಪ್ರಶ್ನಿಸಿ ಹಲವು ಸಾಮಾಜಿಕ ಕಾರ್ಯಕರ್ತರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

Also read: ಯಾರು ಈ ‘ನಗರ ನಕ್ಸಲರು’; ಏನಿದು ಸರಕಾರಿ ಪ್ರಾಯೋಜಿತ ‘ಸಂಚಿ’ನ ನಾಟಕ?

ಆದರೆ, ಸುಪ್ರೀಂಕೋರ್ಟ್‌ ಅವರನ್ನು ಗೃಹ ಬಂಧನದಲ್ಲಿರಿಸುವಂತೆ ಆದೇಶಿಸಿತ್ತು. ಗೃಹ ಬಂಧನದ ಅವಧಿಯನ್ನು ಮೂರು ಬಾರಿ ವಿಸ್ತರಿಸಿರುವ ಸುಪ್ರೀಂಕೋರ್ಟ್‌, ಶುಕ್ರವಾರದಂದು (ಸೆ. 28) ಈ ಪ್ರಕರಣದ ವಿಚಾರಣೆ ನಡೆಸಿ ಬಂಧಿತರ ಬಿಡುಗಡೆಗೆ ಆದೇಶ ನೀಡಲು ನಿರಾಕರಿಸಿತ್ತು. ಅಲ್ಲದೆ, ಗೃಹ ಬಂಧನವನ್ನು 4 ವಾರಗಳ ಕಾಲ ವಿಸ್ತರಿಸಿತ್ತು.

ಪುಣೆ ಪೊಲೀಸರು ಅಧೀನ ನ್ಯಾಯಾಲಯದ ಅನುಮತಿಯ ಮೇಲೆ ದೆಹಲಿಯಲ್ಲಿರುವ ಗೌತಮ್‌ ನವಲಖ ಅವರನ್ನು ವಶಕ್ಕೆ ತೆಗೆದುಕೊಳ್ಳುವುದು ಕಾನೂನಿನ ಪ್ರಕಾರ ಸಮರ್ಥನೀಯವಲ್ಲ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.