ಇಳಿದ ಇಂಧನ ಬೆಲೆ, ದೇಶಾದ್ಯಂತ ಸಂಭ್ರಮಾಚರಣೆ!
ಸುದ್ದಿ ಸಾರ

ಇಳಿದ ಇಂಧನ ಬೆಲೆ, ದೇಶಾದ್ಯಂತ ಸಂಭ್ರಮಾಚರಣೆ!

ಇಂತಹದೊಂದು ದಿನ ಬರಲಿ ಎಂದು ಕಾಯಲು ಶುರುಮಾಡಿ ಎರಡು ತಿಂಗಳು ಕಳೆದಿವೆ. ಹೀಗಾಗಿ ಈ ಸ್ಟೋರಿ. 

ಕ್ಷಮಿಸಿ ಮೇಲಿನ ತಲೆ ಬರಹ ನೀಡುವ ಸಮಯ ಇನ್ನೂ ಕೂಡಿ ಬಂದಿಲ್ಲ. ಕಳೆದ ಎರಡು ತಿಂಗಳುಗಳ ಅಂತರದಿಂದ ದೇಶದಲ್ಲಿ ಇಂಧನ ಬೆಲೆ ಪ್ರತಿ ದಿನದ ಲೆಕ್ಕದಲ್ಲಿ ಏರಿಕೆಯಾಗುತ್ತಲೇ ಇದೆ. ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಗುರುವಾರವೂ ಹೆಚ್ಚಳವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಏರುತ್ತಿರುವುದರಿಂದ ಡೀಸೆಲ್‌ ದರದಲ್ಲಿಯೂ 12 ಪೈಸೆ ಏರಿಕೆಯಾಗಿದೆ. ಸದ್ಯ ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ ದರ 90.44 ರೂಪಾಯಿ ತಲುಪಿದ್ದರೆ, ಡೀಸೆಲ್‌ ದರ 78.9 ರೂಪಾಯಿ. ಬೆಂಗಳೂರಿನ ವಿಚಾರಕ್ಕೆ ಬಂದಾಗ ಪೆಟ್ರೋಲ್‌ಗೆ ಲೀಟರ್‌ಗೆ 83.75 ರೂಪಾಯಿಗಳಿದ್ದರೆ, ದರವಿದ್ದರೆ ಡೀಸೆಲ್‌ಗೆ 74.7 ರೂಪಾಯಿ ಮಾರುಕಟ್ಟೆ ಧಾರಣೆ ಇದೆ.

ಕಳೆದ ಹಲವುಗಳಿಂದ ದೇಶದ ಬಹುತೇಕ ಮಾಧ್ಯಮಗಳು ಇಂಧನ ಬೆಲೆ ಏರಿಕೆಯ ಬಗ್ಗೆ ಎಚ್ಚರಿಕೆಯ ಮಾತುಗಳನ್ನು ಆಡುತ್ತಲೇ ಬಂದಿವೆ. ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಇತರರು ತಮ್ಮ ನೆಲೆಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ಹೊರನೋಟಕ್ಕೆ ಹೇಳಿಕೆ, ಪ್ರತಿ ಹೇಳಿಕೆಗಳು ಒಂದಷ್ಟು ಬೆಳವಣಿಗೆಗಳು ಘಟಿಸುತ್ತಿವೆ. ಇದರ ಆಚೆಗೆ ಇಂಧನ ಬೆಲೆ ಏರಿಕೆ ಎಂಬುದು ದೊಡ್ಡ ಚರ್ಚೆಯ ವಸ್ತುವಾಗುತ್ತಿಲ್ಲ. ಸಾಮಾನ್ಯ ಜನ ಎದುರಾಗಲಿರುವ ಸಂಕಷ್ಟದ ದಿನಗಳ ಬಗ್ಗೆ ಆತಂಕದಿಂದ ಇದ್ದಾರೆ.

ಈ ನಡುವೆ, ಅ. 4ರಂದು ಕೇಂದ್ರ ಸರಕಾರ ಇಂದನ ಬೆಲೆ ಇಳಿಸಿದೆ. ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

ಪೆಟ್ರೋಲ್‌-ಡೀಸೆಲ್‌ ಬಳಕೆದಾರರಿಗೆ ತುಸು ನೆಮ್ಮದಿ; ₹2.5 ಬೆಲೆ ಇಳಿಸಿದ ಕೇಂದ್ರ ಸರಕಾರ